ಇರಾನ್‌ನಲ್ಲಿ ತೀವ್ರಗೊಂಡ ಪ್ರತಿಭಟನೆ: ಅಯತೊಲ್ಲಾ ಖೊಮೇನಿ ಪೂರ್ವಜರ ಮನೆಗೆ ಬೆಂಕಿ; ವಿಡಿಯೋ!

ಇರಾನ್ ನಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದು ಪ್ರತಿಭಟನಾಕಾರರು ಇಸ್ಲಾಮಿಕ್ ಗಣರಾಜ್ಯದ ಸ್ಥಾಪಕ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರ ಪೂರ್ವಜರ ಮನೆಗೆ ಬೆಂಕಿ ಹಚ್ಚಿದ್ದಾರೆ. 
ಪ್ರತ್ಯಕ್ಷ ದೃಶ್ಯ
ಪ್ರತ್ಯಕ್ಷ ದೃಶ್ಯ

ಟೆಹರಾನ್: ಇರಾನ್ ನಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದು ಪ್ರತಿಭಟನಾಕಾರರು ಇಸ್ಲಾಮಿಕ್ ಗಣರಾಜ್ಯದ ಸ್ಥಾಪಕ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರ ಪೂರ್ವಜರ ಮನೆಗೆ ಬೆಂಕಿ ಹಚ್ಚಿದ್ದಾರೆ. 

ಮನೆಯ ಒಂದು ಭಾಗಕ್ಕೆ ಉದ್ರಿಕ್ತರು ಬೆಂಕಿ ಹಚ್ಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಬಿಸಿ ವರದಿಯ ಪ್ರಕಾರ, ಖೊಮೇನಿ ಈ ಮನೆಯಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ. ಅದು ಈಗ ವಸ್ತುಸಂಗ್ರಹಾಲಯವಾಗಿದ್ದು ಅವರ ಜೀವನವನ್ನು ನೆನಪಿಸುತ್ತದೆ.

ಖೊಮೇನಿ ಅವರು 1979ರಲ್ಲಿ ಇರಾನ್‌ನ ಇಸ್ಲಾಮಿಕ್ ಕ್ರಾಂತಿಯ ನಾಯಕರಾಗಿದ್ದರು. ಈ ಕ್ರಾಂತಿ ಮೂಲಕ ದೇಶದ ಪಾಶ್ಚಿಮಾತ್ಯ ಪರ ನಾಯಕ ಶಾ ಮೊಹಮ್ಮದ್ ರೆಜಾ ಪಹ್ಲವಿಯನ್ನು ಪದಚ್ಯುತಗೊಳಿಸಿ ಇರಾನ್ ನನ್ನು ಇಸ್ಲಾಮಿಕ್ ದೇಶವಾಗಿ ಘೋಷಿಸಲಾಯಿತು. 1989ರಲ್ಲಿ ಅವರು ಮೃತಪಟ್ಟಿದ್ದು ಅಲ್ಲಿಯವರೆಗೂ ಇರಾನ್‌ನ ಮೊದಲ ಸರ್ವೋಚ್ಚ ನಾಯಕರಾಗಿ ಸೇವೆ ಸಲ್ಲಿಸಿದರು. ಇದನ್ನು ಪ್ರತಿ ವರ್ಷ ಶೋಕಾಚರಣೆಯ ದಿನವೆಂದು ಗುರುತಿಸಲಾಗುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಬೆಂಕಿ ಹಚ್ಚಿದ ನಂತರ ಹತ್ತಾರು ಮಂದಿ ಹರ್ಷೋದ್ಗಾರ ಮಾಡುವುದು ಕಾಣಬಹುದಾಗಿದೆ. ಗುರುವಾರ ಸಂಜೆ ಈ ವಿಡಿಯೋವನ್ನು ತೆಗೆಯಲಾಗಿದೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.

ಆದಾಗ್ಯೂ, ಅರೆ-ಅಧಿಕೃತ ತಸ್ನಿಮ್ ಸುದ್ದಿ ಸಂಸ್ಥೆಯ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂದು ಖೊಮೇನ್ ಕೌಂಟಿಯ ಪತ್ರಿಕಾ ಕಚೇರಿ ನಿರಾಕರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com