ಹೂಡಿಕೆಗಾಗಿ ಅದಾನಿಗೆ ಕೋಸ್ಟ ರಿಕಾದಿಂದ ಆಹ್ವಾನ; ಮಧ್ಯ ಅಮೇರಿಕನ್ ಪ್ರದೇಶಕ್ಕೂ ವಿಸ್ತರಿಸುತ್ತಾ ಅದಾನಿ ಉದ್ಯಮ?

ಮಧ್ಯ ಅಮೇರಿಕನ್ ರಾಷ್ಟ್ರ ಕೋಸ್ಟಾ ರಿಕಾ ತನ್ನ 12 ಬಿಲಿಯನ್ ಕಾಲುವೆ ಯೋಜನೆಯಲ್ಲಿ ಹೂಡಿಕೆ ಮಾಡಲು ಅದಾನಿ ಸಮೂಹಕ್ಕೆ ಆಹ್ವಾನ ನೀಡಿದೆ. ಅಟ್ಲಾಂಟಿಕ್ ನ್ನು ಪೆಸಿಫಿಕ್ ಸಾಗರದೊಂದಿಗೆ ಸಂಪರ್ಕಿಸುವ ಯೋಜನೆ ಇದಾಗಿದೆ. 
ಗೌತಮ್ ಅದಾನಿ
ಗೌತಮ್ ಅದಾನಿ

ನವದೆಹಲಿ: ಮಧ್ಯ ಅಮೇರಿಕನ್ ರಾಷ್ಟ್ರ ಕೋಸ್ಟಾ ರಿಕಾ ತನ್ನ 12 ಬಿಲಿಯನ್ ಕಾಲುವೆ ಯೋಜನೆಯಲ್ಲಿ ಹೂಡಿಕೆ ಮಾಡಲು ಅದಾನಿ ಸಮೂಹಕ್ಕೆ ಆಹ್ವಾನ ನೀಡಿದೆ. ಅಟ್ಲಾಂಟಿಕ್ ನ್ನು ಪೆಸಿಫಿಕ್ ಸಾಗರದೊಂದಿಗೆ ಸಂಪರ್ಕಿಸುವ ಯೋಜನೆ ಇದಾಗಿದೆ. 

ಈ ಯೋಜನೆಯಲ್ಲಿ ಅದಾನಿ ಸಮೂಹ ಆಸಕ್ತಿ ತೋರಿದ್ದು, ಇದರಲ್ಲಿ ಎರಡು-ಒಂದು ಅಟಾಂಟಿಕ್ ನಲ್ಲಿ ಹಾಗೂ ಮತ್ತೊಂದು ಪೆಸಿಫಿಕ್ ನಲ್ಲಿ ಬಂದರುಗಳ ನಿರ್ಮಾಣವೂ ಒಳಗೊಂಡಿದೆ. ಬಂದರುಗಳಿಗೆ 315 ಕಿ.ಮೀ ವರೆಗೆ ರೈಲು ಹಗೂ ಹೆದ್ದಾರಿಯ ಮೂಲಕ ಸರಕು ಸಾಗಣೆಗಾಗಿ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಭಾರತಕ್ಕೆ ಕೋಸ್ಟಾ ರಿಕಾದ ರಾಯಭಾರಿ ಕ್ಲಾಡಿಯೋ ಅನ್ಸೊರೆನಾ ಹೇಳಿದ್ದಾರೆ. 

ಈ ಯೋಜನೆ ಪೂರ್ಣಗೊಂಡಲ್ಲಿ ಒಂದು ಕಂಟೇನರ್ ನ್ನು ಸಾಗರದಲ್ಲಿ ಅನ್ಲೋಡ್ ಮಾಡಿ ಮತ್ತೊಂದು ಸಾಗರ ಪ್ರದೇಶಕ್ಕೆ ರಸ್ತೆ ಅಥವಾ ರೈಲು ಮೂಲಕ 54 ಗಂಟೆಗಳಲ್ಲಿ ಸಾಗಣೆ ಮಾಡಬಹುದಾಗಿದೆ. ಈ ಯೋಜನೆಯ ಮೂಲಕ ಹೆಚ್ಚು ದಟ್ಟಣೆ ಇರುವ ಪನಾಮ ಕಾಲುವೆ ಮಾರ್ಗದಲ್ಲಿ ಹಡಗುಗಳು ಮುಂದೆ ಸಾಗಲು ಗಂಟೆ ಗಟ್ಟಲೆ ಕಾಯುವುದನ್ನು ತಡೆಯಬಹುದಾಗಿದೆ. ಈ ಡ್ರೈ ಕಾನಲ್ ಯೋಜನೆಯಿಂದ ಪರಿಸರದ ಮೇಲೆ ಅತ್ಯಂತ ಕನಿಷ್ಠ ಪರಿಣಾಮ ಉಂಟಾಗಲಿದೆ ಎಂದು ಕೋಸ್ಟಾ ರಿಕಾ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com