ಬ್ರಿಟನ್ ಪ್ರಧಾನಿ ಸುನಕ್ ಸಂಪುಟ ರಚನೆ; ನಿಯಮ ಉಲ್ಲಂಘಿಸಿ ಸಚಿವ ಸ್ಥಾನ ಕಳೆದುಕೊಂಡಿದ್ದ ಬ್ರಾವರ್ಮನ್ ಗೃಹ ಸಚಿವೆ!

ಬ್ರಿಟನ್ ಪ್ರಧಾನಿಯಾಗಿ ಅ.25 ರಂದು ಅಧಿಕಾರ ಸ್ವೀಕರಿಸಿದ ರಿಷಿ ಸುನಕ್, ಸಚಿವರನ್ನು ನೇಮಕ ಮಾಡಿದ್ದು, ವಿವಾದಿತ ಸುಯೆಲ್ಲಾ ಬ್ರಾವರ್ಮನ್ ಸುನಕ್ ನೇತೃತ್ವದ ಸರ್ಕಾರದಲ್ಲಿ ಗೃಹ ಕಾರ್ಯದರ್ಶಿ (ಗೃಹ ಸಚಿವ)ರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಬ್ರಾವರ್ಮನ್
ಬ್ರಾವರ್ಮನ್

ಲಂಡನ್: ಬ್ರಿಟನ್ ಪ್ರಧಾನಿಯಾಗಿ ಅ.25 ರಂದು ಅಧಿಕಾರ ಸ್ವೀಕರಿಸಿದ ರಿಷಿ ಸುನಕ್, ಸಚಿವರನ್ನು ನೇಮಕ ಮಾಡಿದ್ದು, ವಿವಾದಿತ ಸುಯೆಲ್ಲಾ ಬ್ರಾವರ್ಮನ್ ಸುನಕ್ ನೇತೃತ್ವದ ಸರ್ಕಾರದಲ್ಲಿ ಗೃಹ ಕಾರ್ಯದರ್ಶಿ (ಗೃಹ ಸಚಿವ)ರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
 
ವಾರದ ಹಿಂದೆಯಷ್ಟೇ ಹಳೆಯ ಸರ್ಕಾರವಿದ್ದಾಗ ಆಕೆ ಸರ್ಕಾರದ ಅಧಿಕೃತ ಡಾಕ್ಯುಮೆಂಟ್ ಒಂದನ್ನು ತನ್ನ ಸಹೋದ್ಯೋಗಿ ಸಂಸದರಿಗೆ ವೈಯಕ್ತಿಕ ಮೇಲ್ ಮೂಲಕ ಹಂಚಿಕೊಂಡಿದ್ದರಿಂದ ಮಂತ್ರಿ ನಿಯಮಗಳ ಉಲ್ಲಂಘನೆ ಆರೋಪದಡಿ ಸಚಿವ ಸ್ಥಾನ ಕಳೆದುಕೊಂಡಿದ್ದರು. ಈಗ ಅದೇ ವ್ಯಕ್ತಿಗೆ ಬ್ರಿಟನ್ ನ ಗೃಹ ಸಚಿವರಾಗಿ ನೇಮಕಗೊಂಡಿದ್ದಾರೆ. 

ಇನ್ನು ರಿಷಿ ಸುನಕ್ ಅವರನ್ನು ಪ್ರಧಾನಿ ಹುದ್ದೆಗೆ ಬೆಂಬಲಿಸಿದ್ದವರ ಪೈಕಿ ಅಗ್ರಗಣ್ಯರಾಗಿದ್ದ ಡೊಮಿನಿಕ್ ರಾಬ್ ನ್ಯಾಯಾಂಗ ಕಾರ್ಯದರ್ಶಿ ಮತ್ತು ಉಪ ಪ್ರಧಾನಿಯಾಗಿ ನೇಮಕಗೊಂಡಿದ್ದರೆ, ಆಲಿವರ್ ಡೌಡೆನ್ ಡಚಿ ಆಫ್ ಲ್ಯಾಂಕಾಸ್ಟರ್‌ನ ಚಾನ್ಸೆಲರ್ ಆಗಿ ನೇಮಕಗೊಂಡಿದ್ದಾರೆ. 

ಜೆರೆಮಿ ಹಂಟ್ ರಿಷಿ ಸುನಕ್ ಹೊಸ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡ ಮೊದಲ ಸಚಿವರಾಗಿದ್ದು, ಸರ್ಕಾರದ ಖಜಾನೆಯ ಪ್ರಧಾನಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 

ಮೈಕೆಲ್ ಗೋವ್ ಅವರು ಸುನಕ್ ನೇತೃತ್ವದ ಬ್ರಿಟನ್ ಸರ್ಕಾರದಲ್ಲಿ ಲೆವೆಲಿಂಗ್ ಅಪ್ (ಸ್ಥಳೀಯ ಸರ್ಕಾರ, ವಸತಿ ಮತ್ತು ಸಮುದಾಯ) ದ ಪ್ರಮುಖ ಖಾತೆಯನ್ನು ಪಡೆದಿದ್ದಾರೆ. ಗೋವ್ 20 ವರ್ಷಗಳಿಂದ ಸರ್ರೆ ಹೀತ್ ನ ಸಂಸದರಾಗಿದ್ದಾರೆ. ಥೆರೆಸ್ ಕಾಫಿ ಪರಿಸರ, ಆಹಾರ ಮತ್ತು ಗ್ರಾಮೀಣ ವ್ಯವಹಾರಗಳ ಖಾತೆಯನ್ನು ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com