ಟ್ವಿಟ್ಟರ್ ಸಂಸ್ಥೆ ಎಲೋನ್ ಮಸ್ಕ್ ಹತೋಟಿಗೆ; ಸಿಇಒ ಪರಾಗ್ ಅಗ್ರವಾಲ್​ ಸೇರಿದಂತೆ ಉನ್ನತ ಅಧಿಕಾರಿಗಳು ವಜಾ

ಟ್ವಿಟ್ಟರ್ ಸಂಸ್ಥೆ ಬಹಳ ದೊಡ್ಡ ಬದಲಾವಣೆಯಾಗಿದೆ. ಈಗ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಟ್ವಿಟರ್‌ನ ಮಾಲೀಕರು. ಭಾರತೀಯ ಮೂಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಮತ್ತು ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದ ಪರಾಗ್ ಅಗ್ರವಾಲ್ ಅವರನ್ನು ಕಂಪೆನಿಯಿಂದ ವಜಾಗೊಳಿಸಿದ್ದಾರೆ.
ಟ್ವಿಟ್ಟರ್ ಕೇಂದ್ರ ಕಚೇರಿಗೆ ಪ್ರವೇಶಿಸುತ್ತಿರುವ ಎಲೋನ್ ಮಸ್ಕ್
ಟ್ವಿಟ್ಟರ್ ಕೇಂದ್ರ ಕಚೇರಿಗೆ ಪ್ರವೇಶಿಸುತ್ತಿರುವ ಎಲೋನ್ ಮಸ್ಕ್

ಸ್ಯಾನ್ ಫ್ರಾನ್ಸಿಸ್ಕೋ: ಟ್ವಿಟ್ಟರ್ ಸಂಸ್ಥೆ ಬಹಳ ದೊಡ್ಡ ಬದಲಾವಣೆಯಾಗಿದೆ. ಈಗ ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk) ಟ್ವಿಟರ್‌ನ ಮಾಲೀಕರು. ಭಾರತೀಯ ಮೂಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ (CEO) ಮತ್ತು ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದ ಪರಾಗ್ ಅಗ್ರವಾಲ್ (Parag Agrawal) ಅವರನ್ನು ಕಂಪೆನಿಯಿಂದ ವಜಾಗೊಳಿಸಿದ್ದಾರೆ.

ಎಲೋನ್ ಮಸ್ಕ್ ಮಾಲೀಕರಾದ ಬೆನ್ನಲ್ಲೇ ಟ್ವಿಟರ್ ಸಿಇಒ ಪರಾಗ್ ಅಗ್ರವಾಲ್ (Twitter CEO Parag Agarwal) ಮತ್ತು ಸಿಎಫ್‌ಒ ನೆಡ್ ಸೆಗಲ್ ಅವರನ್ನು ಕಂಪನಿಯಿಂದ ವಜಾಗೊಳಿಸಲಾಗಿದೆ. ಅಷ್ಟೇ ಅಲ್ಲ, ಕಂಪನಿಯ ಪ್ರಧಾನ ಕಚೇರಿಯಿಂದಲೂ ಅವರನ್ನು ಹೊರಹಾಕಲಾಗಿದೆ. ಈ ಮೂಲಕ ಎಲೋನ್ ಮಸ್ಕ್ ಕಂಪೆನಿಯ ಹಿಡಿತ ಸಾಧಿಸಿದ್ದಾರೆ.

ಎಲೋನ್ ಮಸ್ಕ್ ಈ ವರ್ಷದ ಏಪ್ರಿಲ್ 13 ರಂದು ಟ್ವಿಟರ್ ಖರೀದಿಸಿರುವುದಾಗಿ ಘೋಷಿಸಿದ್ದರು. ಪ್ರತಿ ಷೇರಿಗೆ $54.2 ದರದಲ್ಲಿ $44 ಶತಕೋಟಿಗೆ ಸೋಶಿಯಲ್ ಮೀಡಿಯಾ ಪ್ಲಾಟ್​ಫಾರಂನ್ನು ಖರೀದಿಸಲು ಅವರು ಪ್ರಸ್ತಾಪಿಸಿದ್ದರು. ಆದರೆ ನಂತರ ಸ್ಪ್ಯಾಮ್ ಮತ್ತು ನಕಲಿ ಖಾತೆಗಳ ಕಾರಣ, ಅವರು ಆ ಒಪ್ಪಂದವನ್ನು ಸ್ಥಗಿತಗೊಳಿಸಿದ್ದರು.

ಇದಾದ ಬಳಿಕ ಜುಲೈ 8 ರಂದು, ಮಸ್ಕ್ ಒಪ್ಪಂದವನ್ನು ಮುರಿಯಲು ನಿರ್ಧರಿಸಿದರು. ಇದರ ವಿರುದ್ಧ ಟ್ವಿಟರ್ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ ಅಕ್ಟೋಬರ್ ಆರಂಭದಲ್ಲಿ, ಮಸ್ಕ್ ತನ್ನ ನಿಲುವನ್ನು ಬದಲಿಸಿ ಒಪ್ಪಂದವನ್ನು ಮತ್ತೆ ಪೂರ್ಣಗೊಳಿಸಲು ಒಪ್ಪಿಕೊಂಡರು. ಡೆಲವೇರ್ ನ್ಯಾಯಾಲಯವು ಅಕ್ಟೋಬರ್ 28 ರೊಳಗೆ ಒಪ್ಪಂದವನ್ನು ಪೂರ್ಣಗೊಳಿಸಲು ಆದೇಶಿಸಿತು. ಎಲೋನ್ ಮಸ್ಕ್ ಒಂದು ದಿನ ಮುಂಚಿತವಾಗಿ ಟ್ವಿಟ್ಟರ್ ಕಚೇರಿಗೆ ತಲುಪುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.

ಅಗ್ರವಾಲ್ ಅವರು ಕೆಂಪೆನಿಯ ಹಿಡಿತ ಸಾಧಿಸಲು ಟೆಸ್ಲಾ ಮುಖ್ಯಸ್ಥರನ್ನು ಹಿಡಿದಿಟ್ಟುಕೊಳ್ಳಲು ನ್ಯಾಯಾಲಯಕ್ಕೆ ಮೊರೆಹೋಗಿದ್ದರು. ನಿನ್ನೆ ಟ್ವೀಟ್ ಮಾಡಿದ್ದ ಮಸ್ಕ್, ಟ್ವಿಟ್ಟರ್ ನ್ನು ಖರೀದಿಸುತ್ತಿರುವುದಾಗಿ ಘೋಷಿಸಿದ್ದರು. ನಾಗರಿಕತೆಯ ಭವಿಷ್ಯಕ್ಕೆ ಸಾಮಾನ್ಯ ಡಿಜಿಟಲ್ ಟೌನ್ ಸ್ಕ್ವೇರ್ ನ್ನು ಹೊಂದಲು ಮುಖ್ಯವಾಗಿದೆ, ವ್ಯಾಪಕ ಶ್ರೇಣಿಯ ನಂಬಿಕೆಗಳನ್ನು ಆರೋಗ್ಯಕರ ರೀತಿಯಲ್ಲಿ ಚರ್ಚಿಸಲು ಅನುಕೂಲವಾಗುವಂತೆ ಮಾಡುತ್ತೇನೆ ಎಂದು ಹೇಳಿದ್ದರು.

ಬಿಲಿಯನೇರ್ ಎಲೋನ್ ಮಸ್ಕ್ ಟ್ವಿಟರ್ ಪ್ರಧಾನ ಕಚೇರಿಯಲ್ಲಿ ಕಾಫಿ ಬಾರ್‌ನಲ್ಲಿ ಸಾಮಾಜಿಕವಾಗಿ ಬೆರೆಯುತ್ತಿರುವ ಚಿತ್ರವನ್ನು ಸಹ ಹಂಚಿಕೊಂಡಿದ್ದರು. ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್ ಟ್ವಿಟರ್‌ನಲ್ಲಿ ವ್ಯಾಪಾರವನ್ನು ಸ್ಥಗಿತಗೊಳಿಸಲು ಬಾಕಿ ಉಳಿದಿರುವ ಆದೇಶವನ್ನು ಪೋಸ್ಟ್ ಮಾಡಿದೆ.

ಪರಾಗ್ ಅಗ್ರವಾಲ್ ಅವರನ್ನು ಹೊರ ಹಾಕಿದ್ದೇಕೆ?
ಟ್ವಿಟರ್ ಸಿಇಒ ಪರಾಗ್ ಅಗ್ರವಾಲ್ , ಸಿಎಫ್‌ಒ ನೆಡ್ ಸೆಗಲ್ ಮತ್ತು ಕಾನೂನು ವ್ಯವಹಾರ-ನೀತಿ ಮುಖ್ಯಸ್ಥ ವಿಜಯ ಗಡ್ಡೆ ಅವರನ್ನು ಹೊರ ಹಾಕಿರುವುದಾಗಿ ಅಮೆರಿಕದ ಪ್ರಮುಖ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ನಕಲಿ ಖಾತೆಗಳ ಸಂಖ್ಯೆಯ ವಿಚಾರವಾಗಿ ತನ್ನನ್ನು ಮತ್ತು ಟ್ವಿಟರ್ ಹೂಡಿಕೆದಾರರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಮಸ್ಕ್ ಆರೋಪಿಸಿದ್ದಾರೆ. ಮೂಲಗಳ ಪ್ರಕಾರ, ಟ್ವಿಟರ್‌ನೊಂದಿಗೆ ಎಲೋನ್ ಮಸ್ಕ್ ಒಪ್ಪಂದ ಪೂರ್ಣಗೊಂಡಾಗ, ಅಗ್ರವಾಲ್ ಮತ್ತು ಸೆಗಲ್ ಕಚೇರಿಯಲ್ಲಿ ಹಾಜರಿದ್ದರು. ಇದಾದ ಬಳಿಕ ಅವರನ್ನು ಕಚೇರಿಯಿಂದ ಹೊರ ಹಾಕಲಾಯಿತು. ಆದರೆ, ಈ ಬಗ್ಗೆ ಟ್ವಿಟರ್ ಅಥವಾ ಎಲೋನ್ ಮಸ್ಕ್ ಯಾವುದೇ ಹೇಳಿಕೆ ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com