ಭ್ರಷ್ಟಾಚಾರ, ಪೆಗಾಸಸ್ ವಿವಾದ ಕುರಿತು ಪ್ರಧಾನಿ ಮೋದಿ, ಆಂಧ್ರ ಸಿಎಂ, ಉದ್ಯಮಿ ಅದಾನಿ ವಿರುದ್ಧ ಭಾರತೀಯ ಅಮೆರಿಕನ್ ವೈದ್ಯರಿಂದ ಕೇಸು ದಾಖಲು!

ಭ್ರಷ್ಟಾಚಾರ ಮತ್ತು ಪೆಗಾಸಸ್ ಸ್ಪೈವೇರ್ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ, ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಉದ್ಯಮಿ ಗೌತಮ್ ಅದಾನಿ ವಿರುದ್ಧ ಭಾರತೀಯ ಮೂಲದ ಅಮೆರಿಕನ್ ವೈದ್ಯರೊಬ್ಬರು ಮೊಕದ್ದಮೆ ದಾಖಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ, ಉದ್ಯಮಿ ಗೌತಮ್ ಅದಾನಿ
ಪ್ರಧಾನಿ ನರೇಂದ್ರ ಮೋದಿ, ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ, ಉದ್ಯಮಿ ಗೌತಮ್ ಅದಾನಿ
Updated on

ವಾಷಿಂಗ್ಟನ್: ಭ್ರಷ್ಟಾಚಾರ ಮತ್ತು ಪೆಗಾಸಸ್ ಸ್ಪೈವೇರ್ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ, ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಉದ್ಯಮಿ ಗೌತಮ್ ಅದಾನಿ ವಿರುದ್ಧ ಭಾರತೀಯ ಮೂಲದ ಅಮೆರಿಕನ್ ವೈದ್ಯರೊಬ್ಬರು ಮೊಕದ್ದಮೆ ದಾಖಲಿಸಿದ್ದಾರೆ.

ಅಮೆರಿಕದ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಯುಎಸ್ ಡಿಸ್ಟ್ರಿಕ್ಟ್ ಕೋರ್ಟ್ ಈ ಮೂವರು ನಾಯಕರಿಗೂ ಸಮನ್ಸ್ ಜಾರಿ ಮಾಡಿದೆ, ಈ ವರ್ಷಾರಂಭದಲ್ಲಿ ಭಾರತದಲ್ಲಿ ಇತರ ಹಲವರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು.

ಅಮೆರಿಕದ ರಿಚ್ ಮಂಡ್ ಮೂಲದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ ಲೋಕೇಶ್ ವುಯುರ್ರು, ಪ್ರಧಾನಿ ಮೋದಿ, ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮತ್ತು ಅದಾನಿ ವಿರುದ್ಧ ಮೊಕದ್ದಮೆ ಹೂಡಿದವರಾಗಿದ್ದಾರೆ. ವಿಶ್ವ ಆರ್ಥಿಕ ವೇದಿಕೆಯ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಪ್ರೊಫೆಸರ್ ಕ್ಲಾಸ್ ಶ್ವಾಬ್ ಮೊಕದ್ದಮೆಯಲ್ಲಿ ಹೆಸರಿಸಲಾದ ಇತರರಲ್ಲಿ ಪ್ರಮುಖರಾಗಿದ್ದಾರೆ. 

ಆಂಧ್ರಪ್ರದೇಶ ಮೂಲದ ಭಾರತೀಯ-ಅಮೆರಿಕನ್ ವೈದ್ಯ ಡಾ ಲೋಕೇಶ್ ವಯುರ್ರು, ಮೋದಿ, ರೆಡ್ಡಿ ಮತ್ತು ಅದಾನಿ ಮತ್ತು ಇತರರೊಂದಿಗೆ ಯುಎಸ್‌ಗೆ ಭಾರಿ ನಗದು ವರ್ಗಾವಣೆ ಮತ್ತು ರಾಜಕೀಯ ವಿರೋಧಿಗಳ ವಿರುದ್ಧ ಪೆಗಾಸಸ್ ಸ್ಪೈವೇರ್ ಬಳಕೆ ಸೇರಿದಂತೆ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದು ಅವರ ಬಳಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ. 

ಈ ಮೊಕದ್ದಮೆಯನ್ನು ಕಳೆದ ಮೇ 24 ರಂದು ದಾಖಲಿಸಲಾಗಿತ್ತು. ನಂತರ ನ್ಯಾಯಾಲಯವು ಜುಲೈ 22 ರಂದು ಸಮನ್ಸ್ ನೀಡಿತು. ಈ ಮೂವರಿಗೆ ಭಾರತದಲ್ಲಿ ಆಗಸ್ಟ್ 4 ರಂದು ಮತ್ತು ಆಗಸ್ಟ್ 2 ರಂದು ಸ್ವಿಟ್ಜರ್ಲೆಂಡ್‌ನಲ್ಲಿರುವ ಶ್ವಾಬ್‌ ನಲ್ಲಿ ಸಮನ್ಸ್ ನೀಡಲಾಗಿತ್ತು. 

ಡಾ.ವುಯ್ಯುರು ಅವರು ಕಳೆದ ಆಗಸ್ಟ್ 19 ರಂದು ನ್ಯಾಯಾಲಯದ ಮುಂದೆ ಸಮನ್ಸ್ ಸಲ್ಲಿಸಿದ ಪುರಾವೆಗಳನ್ನು ಸಲ್ಲಿಸಿದರು. ಮೊಕದ್ದಮೆಯ ಬಗ್ಗೆ ಕೇಳಿದಾಗ, ಬಾತ್ರಾ ವುಯ್ಯುರು ತಮ್ಮ ಬಳಿ ಬಹಳಷ್ಟು ವಿರಾಮದ ಸಮಯವಿದ್ದು ಅದಕ್ಕಾಗಿ ಮೊಕದ್ದಮೆ ಹೂಡಿದ್ದೇನೆ ಎಂದಿದ್ದಾರೆ.

ಡೆಡ್ ಆನ್ ಅರೈವಲ್ ಲಾ ಸೂಟ್: ಡಾ ವುಯ್ಯುರ್ ಅವರು ದಾಖಲಿಸಿರುವ ಕೇಸು ಅರ್ಥಹೀನ ಮತ್ತು ನಿರುಪಯೋಗ ಎಂದು ಕರೆದಿರುವ ನ್ಯೂಯಾರ್ಕ್ ನ ಭಾರತೀಯ ಅಮೆರಿಕನ್ ಅಟೊರ್ನಿ ರವಿ ಬಾತ್ರಾ, ಇದನ್ನು 'dead on arrival lawsuit' ಎಂದು ಕರೆದಿದ್ದಾರೆ.

ಮೊಕದ್ದಮೆ ಸಲ್ಲಿಸಿದವರಿಗೆ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಪಕ್ಷಿನೋಟವಿದೆ, ಆದರೆ ನಿಖರವಾಗಿ ಹೇಳಲು ನಡೆದಿರುವ ವಂಚನೆಯನ್ನು ಸಾಬೀತುಪಡಿಸಲು ಅವರಿಂದ ಸಾಧ್ಯವಾಗುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com