ಭಾರತ ಮೂಲದ ಗರ್ಭಿಣಿ ಸಾವು: ಪೋರ್ಚುಗಲ್ ಆರೋಗ್ಯ ಸಚಿವೆ ರಾಜೀನಾಮೆ

ಗರ್ಭಿಣಿ ಭಾರತೀಯ ಪ್ರವಾಸಿಯೊಬ್ಬರು ಹೆರಿಗೆ ವಾರ್ಡ್‌ನಿಂದ ಹೊರಕ್ಕೆ ಬಂದ ನಂತರ ಸಾವನ್ನಪ್ಪಿದ್ದಾರೆ ಎಂಬ ವರದಿಗಳು ಹೊರಬಂದ ಕೆಲವೇ ಗಂಟೆಗಳ ನಂತರ ಪೋರ್ಚುಗಲ್‌ನ ಆರೋಗ್ಯ ಸಚಿವರು ರಾಜೀನಾಮೆ ನೀಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಮಾರ್ಟಾ ಟೆಮಿಡೊ
ಮಾರ್ಟಾ ಟೆಮಿಡೊ

ಲಿಸ್ಬನ್: ಗರ್ಭಿಣಿ ಭಾರತೀಯ ಪ್ರವಾಸಿಯೊಬ್ಬರು ಹೆರಿಗೆ ವಾರ್ಡ್‌ನಿಂದ ಹೊರಕ್ಕೆ ಬಂದ ನಂತರ ಸಾವನ್ನಪ್ಪಿದ್ದಾರೆ ಎಂಬ ವರದಿಗಳು ಹೊರಬಂದ ಕೆಲವೇ ಗಂಟೆಗಳ ನಂತರ ಪೋರ್ಚುಗಲ್‌ನ ಆರೋಗ್ಯ ಸಚಿವರು ರಾಜೀನಾಮೆ ನೀಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಗರ್ಭಿಣಿ  ಪ್ರವಾಸಿಯೊಬ್ಬರಿಗೆ ಸಂಪೂರ್ಣ ಹೆರಿಗೆ ವಾರ್ಡ್‌ನಲ್ಲಿ ಅವಕಾಶ ನೀಡದ ಕಾರಣದಿಂದ ಭಾರತೀಯ ಮೂಲದ ಆ ಪ್ರವಾಸಿ ಮಹಿಳೆ ಮೃತಪಟ್ಟಿದ್ದಾರೆ ಎಂಬ ವರದಿಗಳು ಹೊರಬಂದ ಕೆಲವೇ ಗಂಟೆಗಳ ನಂತರ ಪೋರ್ಚುಗಲ್‌ ಆರೋಗ್ಯ ಸಚಿವೆ ಡಾ. ಮಾರ್ಟಾ ಟೆಮಿಡೋ ರಾಜೀನಾಮೆ ನೀಡಿದ್ದಾರೆ.

34 ವರ್ಷದ ಭಾರತೀಯ ಮಹಿಳೆಯನ್ನು ಲಿಸ್ಬನ್ ಆಸ್ಪತ್ರೆಗಳ ನಡುವೆ ಶಿಫ್ಟ್ ಮಾಡುವಾಗ ಆಕೆ ಹೃದಯ ಸ್ತಂಭನಕ್ಕೆ  ಒಳಗಾದರು ಎಂದು ವರದಿಯಾಗಿದೆ. ಪೋರ್ಚುಗೀಸ್ ಮಾತೃತ್ವ ಘಟಕಗಳಾದ್ಯಂತ ಸಿಬ್ಬಂದಿ ಕೊರತೆಯ ಆರೋಪಗಳ ಬೆನ್ನಲ್ಲೇ ಈ ಘಟನೆ ನಡೆದಿದೆ.
 
ತುರ್ತು ಸಿಸೇರಿಯನ್ ನಂತರ ಆಕೆಯ ಮಗುವನ್ನು ಆರೋಗ್ಯವಾಗಿ ಹೆರಿಗೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆಯ ಸಾವಿನ ತನಿಖೆಯನ್ನು ಪ್ರಾರಂಭಿಸಲಾಗಿದೆ. ಪೋರ್ಚುಗೀಸ್ ನಟಾಲ್ ಘಟಕಗಳಾದ್ಯಂತ ಸಿಬ್ಬಂದಿ ಬಿಕ್ಕಟ್ಟು ದುರಂತಕ್ಕೆ ಕಾರಣ ಎಂದು ಬಿಬಿಸಿ ವರದಿ ಹೇಳಿದೆ.

2018 ರಿಂದ ಆರೋಗ್ಯ ಸಚಿವರಾಗಿದ್ದ ಮಾರ್ಟಾ ಟೆಮಿಡೊ ಅವರು ಕೋವಿಡ್ ಪರಿಸ್ಥಿತಿಯಲ್ಲಿಯೂ ಪೋರ್ಚುಗಲ್ ಅನ್ನು ಮುನ್ನಡೆಸುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com