75 ವರ್ಷದ ಕ್ಯಾಮಿಲ್ಲಾ ಇನ್ನು ಮುಂದೆ ಇಂಗ್ಲೆಂಡ್ ರಾಣಿ, ಆದರೆ ಸಾರ್ವಭೌಮ ಅಧಿಕಾರ ಇಲ್ಲ ಏಕೆ?

ಏಳು ದಶಕಗಳ ನಂತರ ಇಂಗ್ಲೆಂಡಿಗೆ ಹೊಸ ರಾಣಿಯ ನೇಮಕವಾಗಲಿದೆ. ಚಾರ್ಲ್ಸ್ ಅವರ ಪತ್ನಿ ಕ್ಯಾಮಿಲ್ಲಾ, ಡಚೆಸ್ ಆಫ್ ಕಾರ್ನ್‌ವಾಲ್, ರಾಣಿ ಕನ್ಸಾರ್ಟ್ ಎಂದು ಕರೆಯಲ್ಪಡುತ್ತಾರೆ, ಇದು ರಾಣಿ ಎಲಿಜಬೆತ್ 2 ಅವರ  ಒಲವಿನಿಂದ ಹಲವಾರು ವರ್ಷಗಳ ವಿವಾದದ ನಂತರ ಬಂದಿದೆ. 
ಬ್ರೇಮರ್ ರಾಯಲ್ ಹೈಲ್ಯಾಂಡ್ ಕೂಟದ ಸಂದರ್ಭದಲ್ಲಿ ಬ್ರಿಟನ್‌ನ ಪ್ರಿನ್ಸ್ ಚಾರ್ಲ್ಸ್, ಮತ್ತು ಕ್ಯಾಮಿಲ್ಲಾ ಸಂಭಾಷಣೆಯಲ್ಲಿ ತೊಡಗಿರುವುದು
ಬ್ರೇಮರ್ ರಾಯಲ್ ಹೈಲ್ಯಾಂಡ್ ಕೂಟದ ಸಂದರ್ಭದಲ್ಲಿ ಬ್ರಿಟನ್‌ನ ಪ್ರಿನ್ಸ್ ಚಾರ್ಲ್ಸ್, ಮತ್ತು ಕ್ಯಾಮಿಲ್ಲಾ ಸಂಭಾಷಣೆಯಲ್ಲಿ ತೊಡಗಿರುವುದು

ಲಂಡನ್: ಏಳು ದಶಕಗಳ ನಂತರ ಇಂಗ್ಲೆಂಡಿಗೆ ಹೊಸ ರಾಣಿಯ ನೇಮಕವಾಗಲಿದೆ. ಚಾರ್ಲ್ಸ್ ಅವರ ಪತ್ನಿ ಕ್ಯಾಮಿಲ್ಲಾ, ಡಚೆಸ್ ಆಫ್ ಕಾರ್ನ್‌ವಾಲ್, ರಾಣಿ ಕನ್ಸಾರ್ಟ್ ಎಂದು ಕರೆಯಲ್ಪಡುತ್ತಾರೆ, ಇದು ರಾಣಿ ಎಲಿಜಬೆತ್ 2 ಅವರ  ಒಲವಿನಿಂದ ಹಲವಾರು ವರ್ಷಗಳ ವಿವಾದದ ನಂತರ ಬಂದಿದೆ. 

75 ವರ್ಷದ ಕ್ಯಾಮಿಲ್ಲಾಗೆ ಬ್ರಿಟನ್ ನ ರಾಣಿ ಎಂದು ಬಿರುದು ಸಿಕ್ಕಿದರೂ ಕೂಡ ಆಡಳಿತಾತ್ಮಕವಾಗಿ ಅವರು ಯಾವುದೇ ಅಧಿಕಾರ ಹೊಂದಿರುವುದಿಲ್ಲ. ಸಾಂಪ್ರದಾಯಿಕವಾಗಿ ರಾಜನ ಪತ್ನಿಗೆ ರಾಣಿಯ ಬಿರುದು ನೀಡಲಾಗುತ್ತದೆ. ಚಾರ್ಲ್ಸ್ ಅವರು ರಾಜನಾಗಿ ಪಟ್ಟ ಏರಿದಾಗ ಕ್ಯಾಮಿಲ್ಲಾಗೆ ಏನು ಬಿರುದು ಸಿಗುತ್ತದೆ ಎಂದು ಹಲವು ವರ್ಷಗಳ ಕಾಲ ಕೌತುಕದ ಪ್ರಶ್ನೆಯಾಗಿತ್ತು.

ಅದಕ್ಕೆ ಕಾರಣ ಕ್ಯಾಮಿಲ್ಲಾ ರಾಜ ಚಾರ್ಲ್ಸ್ ಅವರ ಎರಡನೇ ಪತ್ನಿ ಎಂಬ ಸೂಕ್ಷ್ಮ ವಿಚಾರ. 1997ರಲ್ಲಿ ಕಿಂಗ್ ಚಾರ್ಲ್ಸ್ ಅವರ ಮಾಜಿ ಪತ್ನಿ ಪ್ರಿನ್ಸೆಸ್ ಡಯಾನಾ ಕಾರು ಅಪಘಾತದಲ್ಲಿ ಮೃತಪಟ್ಟಾಗ ಅವರ ಮರಣದ ನಂತರ ಬ್ರಿಟನ್‌ನಲ್ಲಿ ದುಃಖದ ಕಾರ್ಮೋಡ ಕವಿದಿತ್ತು. 

ರಾಜಮನೆತನದವರು ಚಾರ್ಲ್ಸ್ ಮತ್ತು ಪ್ರೀತಿಯ ರಾಜಕುಮಾರಿ ಡಯಾನಾ ಮಧ್ಯೆ ದಾಂಪತ್ಯವನ್ನು ಹಾಳುಮಾಡಿದ "ಮೂರನೇ ವ್ಯಕ್ತಿ" ಎಂದು ಕ್ಯಾಮಿಲ್ಲಾ ಮೇಲೆ ಸಾರ್ವಜನಿಕರ ಗ್ರಹಿಕೆಯಿದ್ದುದರಿಂದ ಬ್ರಿಟನ್ ನ ರಾಜಕುಮಾರಿ ಮತ್ತು ಆಕೆಗೆ ಸಿಗುವ ಆಡಳಿತಾತ್ಮಕ ಅಧಿಕಾರ, ರಾಜಮನೆತನದ ಸ್ವತ್ತಿನ ಬಗ್ಗೆ ಸೂಕ್ಷ್ಮವಾಗಿ ವ್ಯವಹರಿಸಲಾಗಿತ್ತು.  

ಆದರೆ ಕಾಲಕ್ರಮೇಣ, ಕ್ಯಾಮಿಲ್ಲಾ ತನ್ನ ವಿವೇಚನೆ, ಸರಳ ವಿನಯ ವ್ಯಕ್ತಿತ್ವ ಮತ್ತು ತನ್ನ ಪತಿಗೆ ನಿಷ್ಠೆ ತೋರಿಸುವ  ವರ್ತನೆಯಿಂದಾಗಿ ಬ್ರಿಟನ್ ನಾಗರಿಕರ ಮನಗೆದ್ದರು.

ಕ್ಯಾಮಿಲ್ಲಾ ಮತ್ತು ಚಾರ್ಲ್ಸ್ 2005 ರಲ್ಲಿ ಸರಳ ಸಮಾರಂಭದಲ್ಲಿ ವಿವಾಹವಾದಾಗ, ವಾಸ್ತವವಾಗಿ ವೇಲ್ಸ್ ನ ಹೊಸ ರಾಜಕುಮಾರಿಯಾಗುತ್ತಾರೆ. ಡಯಾನಾ ಅವರ ವೇಲ್ಸ್ ರಾಜಕುಮಾರಿ ಬಿರುದು ಅವರಿಗೆ ಬರುತ್ತದೆ. ಆದರೆ ಕ್ಯಾಮಿಲ್ಲಾ ತನ್ನನ್ನು ತಾನು ಕಾರ್ನ್ ವಾಲ್ ಡಚಸ್ ಎಂದು ಕರೆಸಿಕೊಳ್ಳಲು ಇಚ್ಛೆಪಟ್ಟರು.

ಚಾರ್ಲ್ಸ್ ಸಿಂಹಾಸನಕ್ಕೆ ಸೇರಿದಾಗ ಸಾಂಪ್ರದಾಯಿಕ "ಕ್ವೀನ್ ಕನ್ಸಾರ್ಟ್" ಬದಲಿಗೆ ಕ್ಯಾಮಿಲ್ಲಾ "ರಾಜಕುಮಾರಿ ಪತ್ನಿ" ಎಂದು ಕರೆಸಿಕೊಳ್ಳಲು ಇಚ್ಛೆಪಟ್ಟರು ಎಂದು ಅರಮನೆ ಅಧಿಕಾರಿಗಳು ಹೇಳುತ್ತಾರೆ. ಪ್ರಿನ್ಸೆಸ್ ಕನ್ಸೋರ್ಟ್ ಎಂಬ ಶೀರ್ಷಿಕೆಗೆ ಯಾವುದೇ ಪೂರ್ವನಿದರ್ಶನವಿಲ್ಲ, ಇದನ್ನು ರಾಜಮನೆತನದ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಹೇಳಲಾಗುತ್ತದೆ. 

1837 ರಿಂದ 1901 ರವರೆಗೆ ಆಳ್ವಿಕೆ ನಡೆಸಿದ ವಿಕ್ಟೋರಿಯಾ ರಾಣಿಯ ಪತಿ ಪ್ರಿನ್ಸ್ ಆಲ್ಬರ್ಟ್‌ಗೆ ಪ್ರಿನ್ಸ್ ಕನ್ಸಾರ್ಟ್ ಎಂಬ ಬಿರುದು ಬಳಸಲಾಗಿತ್ತು. NBCಗೆ 2010 ರಲ್ಲಿ ನೀಡಿದ್ದ ಸಂದರ್ಶನ ವೇಳೆ, ಕ್ಯಾಮಿಲ್ಲಾ "ಇಂಗ್ಲೆಂಡ್ ರಾಣಿ, ನೀವು ಯಾವಾಗ ರಾಜರಾಗುತ್ತೀರಿ ಎಂದು ಕೇಳಲಾಗಿತ್ತು. ಆಗ ಕಿಂಗ್ ಚಾರ್ಲ್ಸ್ ತಡವರಿಸುತ್ತಾ , ನೋಡೋಣ ಎಂದಷ್ಟೇ ಹೇಳಿದ್ದರು. 

ಕ್ವೀನ್ ಎಲಿಜಬೆತ್ ತನ್ನ ಮಗ ರಾಜನಾದ ನಂತರ ಕ್ಯಾಮಿಲ್ಲಾರನ್ನು ಕ್ವೀನ್ ಕನ್ಸಾರ್ಟ್ ಎಂದು ಕರೆಯಬೇಕೆಂದು ಬಯಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com