ಮರೆಯಾದ ಬ್ರಿಟನ್ ರಾಣಿ ಎಲಿಜಬೆತ್ ಗೆ 96 “ಡೆತ್ ಗನ್ ಸೆಲ್ಯೂಟ್”
ರಾಣಿ ಎಲಿಜಬೆತ್ IIರ ಸ್ಮರಣಾರ್ಥ “ಡೆತ್ ಗನ್ ಸೆಲ್ಯೂಟ್” ನಲ್ಲಿ ಶುಕ್ರವಾರ ಯುನೈಟೆಡ್ ಕಿಂಗ್‌ಡಮ್ ಮತ್ತು ಅದರಾಚೆಯ ಎಲ್ಲಾ ನಾಲ್ಕು ಮೂಲೆಗಳಲ್ಲಿ ಫಿರಂಗಿ ಬೆಳಕು ಮೂಡಿತು.
Published: 09th September 2022 10:19 PM | Last Updated: 10th September 2022 01:27 PM | A+A A-

ಡೆತ್ ಗನ್ ಸೆಲ್ಯೂಟ್
ಲಂಡನ್: ರಾಣಿ ಎಲಿಜಬೆತ್ IIರ ಸ್ಮರಣಾರ್ಥ “ಡೆತ್ ಗನ್ ಸೆಲ್ಯೂಟ್” ನಲ್ಲಿ ಶುಕ್ರವಾರ ಯುನೈಟೆಡ್ ಕಿಂಗ್‌ಡಮ್ ಮತ್ತು ಅದರಾಚೆಯ ಎಲ್ಲಾ ನಾಲ್ಕು ಮೂಲೆಗಳಲ್ಲಿ ಫಿರಂಗಿ ಬೆಳಕು ಮೂಡಿತು.
ರಾಣಿ ಎಲಿಜಬೆತ್ IIರ ಜೀವನದ ಪ್ರತಿ ವರ್ಷಕ್ಕೆ ಒಂದು ಎಂಬಂತೆ ತೊಂಬತ್ತಾರು ಸುತ್ತು ಫಿರಂಗಿ ಸದ್ದು ಮೊಳಗಿಸಲಾಯಿತು. ಹೈಡ್ ಪಾರ್ಕ್ ಮತ್ತು ರಾಜಧಾನಿಯ ಲಂಡನ್ ಟವರ್, ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್ ಕ್ಯಾಸಲ್, ಉತ್ತರ ಐರ್ಲೆಂಡ್‌ನ ಹಿಲ್ಸ್‌ಬರೋ ಕ್ಯಾಸಲ್ ಮತ್ತು ವೇಲ್ಸ್ ನ ಕಾರ್ಡಿಫ್ ಕ್ಯಾಸಲ್ ಮತ್ತು ದ್ವೀಪಗಳು ಮತ್ತು ಜಿಬ್ರಾಲ್ಟರ್ ಚಾನೆಲ್ ಗಳಿಂದ ಫಿರಂಗಿ ಹಾರಿಸಲಾಯಿತು.
ಬ್ರಿಟನ್ ರಾಣಿ ಎಲಿಜಬೆತ್ II ತಮ್ಮ 96ನೇ ವಯಸ್ಸಿನಲ್ಲಿ ಬಾಲ್ಮೋರಲ್‌ನಲ್ಲಿ ನಿಧನರಾದರು. ಅವರು ಬೇಸಿಗೆಯ ಬಹುಭಾಗವನ್ನು ಕಳೆದಿದ್ದ ಅವರ ಸ್ಕಾಟಿಷ್ ಎಸ್ಟೇಟ್‌ನಲ್ಲಿ ಗುರುವಾರ ಮಧ್ಯಾಹ್ನ ನಿಧನರಾದರು ಎಂದು ಹೇಳಲಾಗಿದೆ.
ಇದನ್ನು ಓದಿ: ಬ್ರಿಟನ್ ರಾಣಿ ಎಲಿಜಬೆತ್ II ನಿಧನ: ಭಾರತದಾದ್ಯಂತ ಸೆ.11ರಂದು ಶೋಕಾಚರಣೆ!
1952 ರಲ್ಲಿ ಸಿಂಹಾಸನ ಏರಿದ ಅವರು ಅಗಾಧ ಸಾಮಾಜಿಕ ಬದಲಾವಣೆಗೆ ಸಾಕ್ಷಿಯಾಗಿದ್ದರು. ಅವರ ಪುತ್ರ ಕಿಂಗ್ ಚಾರ್ಲ್ಸ್ III ತನ್ನ ಪ್ರೀತಿಯ ತಾಯಿಯ ನಿಧನ ತಮ್ಮ ಕುಟುಂಬಕ್ಕೆ ದೊಡ್ಡ ದುಃಖದ ಕ್ಷಣ” ಎಂದು ಹೇಳಿದ್ದಾರೆ.