ಕೆಸರಿನಲ್ಲಿ ಸಿಲುಕಿ ಹೊರಬರಲು ಒದ್ದಾಡಿದ ಆನೆಗಳು: ಕಾಡಾನೆ ರಕ್ಷಿಸಲು ಅರಣ್ಯ ಸಿಬ್ಬಂದಿ ಮಾಡಿದ್ದೇನು? ವಿಡಿಯೋ ನೋಡಿ!
ಎರಡು ಕಾಡಾನೆಗಲು ಕೆಸರಿನಲ್ಲಿ ಸಿಲುಕಿ ಹೊರಬರಲು ಸಾಧ್ಯವಾಗದೆ ಒದ್ದಾಡಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Published: 15th September 2022 03:24 PM | Last Updated: 15th September 2022 03:24 PM | A+A A-

ಕೆಸರಲ್ಲಿ ಸಿಲುಕಿ ಒದ್ದಾಡಿದ ಆನೆಗಳು
ನೈರೋಬಿ: ಎರಡು ಕಾಡಾನೆಗಲು ಕೆಸರಿನಲ್ಲಿ ಸಿಲುಕಿ ಹೊರಬರಲು ಸಾಧ್ಯವಾಗದೆ ಒದ್ದಾಡಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಕೀನ್ಯಾದಲ್ಲಿ ನಡೆದಿದ್ದು, ಶೆಲ್ಡ್ರಿಕ್ ವೈಲ್ಡ್‌ಲೈಫ್ ಟ್ರಸ್ಟ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಎರಡು ಆನೆಗಳು ನೀರಿನ ಹೊಂಡದ ಬಳಿ ಕೆಸರಿನಲ್ಲಿ ಅಸಹಾಯಕವಾಗಿ ಸಿಲುಕಿಕೊಂಡಿರುವುದನ್ನು ತೋರಿಸುತ್ತದೆ.
ನೀರು ಕುಡಿಯಲು ಹೋದಾಗ ನೀರಿನ ಗುಂಡಿ ಸಾವಿನ ಬಲೆಯಾಗಿ ಮಾರ್ಪಟ್ಟಿದೆ. ಬರಗಾಲದ ಸಮಯದಲ್ಲಿ ಇದು ತುಂಬಾ ಸಾಮಾನ್ಯವಾದ ಸಂಗತಿ. ನೀರಿನ ಅನ್ವೇಷಣೆಯಲ್ಲಿ, ಆನೆಗಳು ಸಾಹಸ ಮಾಡುತ್ತವೆ ಮತ್ತು ಕೆಸರಿನಲ್ಲಿ ಸಿಲುಕಿಕೊಳ್ಳುತ್ತವೆ ಎಂಬ ಬರಹದಡಿ ವಿಡಿಯೋ ಶೇರ್ ಮಾಡಿದ್ದಾರೆ.
ವೀಡಿಯೊವನ್ನು 70 ಸಾವಿರಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದು, ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಕೆಸರಿನಲ್ಲಿ ಸಿಲುಕಿದ್ದ ಆನೆಗಳನ್ನು ಬಿಡಿಸಲು ಅವಿರತ ಶ್ರಮಿಸಿದ ರಕ್ಷಣಾ ತಂಡಕ್ಕೆ ನೆಟಿಜನ್‌ಗಳು ತುಂಬು ಹೃದಯದಿಂದ ಧನ್ಯವಾದ ಅರ್ಪಿಸಿದ್ದಾರೆ. ಹಲವರು ರಕ್ಷಿಸಲ್ಪಟ್ಟ ಜೀವಿಗಳ ಆರೋಗ್ಯದ ಬಗ್ಗೆಯೂ ವಿಚಾರಿಸಿದರು.