ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯಲ್ಲಿ ಪ್ರಧಾನಿ ಭಾಗಿ: ಗಾಲ್ವಾನ್ ಗಡಿ ಸಂಘರ್ಷ ನಂತರ ಮೋದಿ- ಕ್ಸಿ ಜಿನ್ ಪಿಂಗ್ ಮುಖಾಮುಖಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಶಾಂಘೈ ಸಹಕಾರ ಸಂಘಟನೆಯ(Shanghai Cooperation organisation) ವಾರ್ಷಿಕ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪ್ರಭಾವಿ ಗುಂಪಿನ ಇತರ ಸದಸ್ಯ ರಾಷ್ಟ್ರಗಳ ನಾಯಕರೊಂದಿಗೆ ಭಾಗವಹಿಸಿದ್ದರು.
ಸಮರ್ಕಾಂಡ್ ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
ಸಮರ್ಕಾಂಡ್ ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
Updated on

ಸಮರ್ಕಾಂಡ್(ಉಜ್ಬೇಕಿಸ್ತಾನ್): ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಶಾಂಘೈ ಸಹಕಾರ ಸಂಘಟನೆಯ(Shanghai Cooperation organisation) ವಾರ್ಷಿಕ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪ್ರಭಾವಿ ಗುಂಪಿನ ಇತರ ಸದಸ್ಯ ರಾಷ್ಟ್ರಗಳ ನಾಯಕರೊಂದಿಗೆ ಭಾಗವಹಿಸಿದ್ದರು.

ಜೂನ್ 2020 ರಲ್ಲಿ ಭಾರತ-ಚೀನಾ ಗಡಿಯ ಗಾಲ್ವಾನ್ ಕಣಿವೆಯಲ್ಲಿ ಎರಡೂ ದೇಶಗಳ ಮಧ್ಯೆ ಗಡಿ ಬಿಕ್ಕಟ್ಟು ಉಲ್ಬಣಗೊಂಡ ನಂತರ ಮೋದಿ ಮತ್ತು ಕ್ಸಿ ಜಿನ್ ಪಿಂಗ್ ಮುಖಾಮುಖಿಯಾಗಿರುವುದು ಇದು ಮೊದಲ ಬಾರಿಗೆ. ಶೃಂಗಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಹಲವಾರು ಮಧ್ಯ ಏಷ್ಯಾ ರಾಷ್ಟ್ರಗಳ ನಾಯಕರು ಭಾಗವಹಿಸುತ್ತಿದ್ದಾರೆ. 

ಶೃಂಗಸಭೆಯ ನಿರ್ಬಂಧಿತ ಸ್ವರೂಪದಲ್ಲಿ ಚರ್ಚೆಗಳ ಮೊದಲು ಶೃಂಗಸಭೆಯ ಗುಂಪಿನ ಖಾಯಂ ಸದಸ್ಯರ ನಾಯಕರು ಫೋಟೋಗೆ ಫೋಸ್ ಕೊಟ್ಟರು. ಶೃಂಗಸಭೆಯ ಸ್ಥಳದಲ್ಲಿ ಮೋದಿಯವರನ್ನು ಉಜ್ಬೆಕಿಸ್ತಾನದ ಅಧ್ಯಕ್ಷ ಶವ್ಕತ್ ಮಿರ್ಜಿಯೋವ್ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಶೃಂಗಸಭೆಯ ನಂತರ, ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ಪುಟಿನ್, ಉಜ್ಬೆಕ್ ಅಧ್ಯಕ್ಷ ಮಿರ್ಜಿಯೋವ್ ಮತ್ತು ಇರಾನ್ ಅಧ್ಯಕ್ಷ ರೈಸಿ ಅವರೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.

ಪ್ರಧಾನಿ ಮೋದಿ ನಿನ್ನೆ ರಾತ್ರಿ ಇಲ್ಲಿಗೆ ಆಗಮಿಸಿದ್ದರು. ಸಮರ್ಕಾಂಡ್ ಗೆ ಹೊರಡುವ ಗಂಟೆಗಳ ಮೊದಲು, ಟ್ವೀಟ್ ಮಾಡಿದ್ದ ಅವರು, ಗುಂಪಿನ ಸುಧಾರಣೆ ಮತ್ತು ವಿಸ್ತರಣೆಯ ಕುರಿತು "SCO ಶೃಂಗಸಭೆಯಲ್ಲಿ, ನಾನು ಸಾಮಯಿಕ, ಪ್ರಾದೇಶಿಕ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಎದುರು ನೋಡುತ್ತಿದ್ದೇನೆ. ಅಂತರರಾಷ್ಟ್ರೀಯ ಸಮಸ್ಯೆಗಳು, ಎಸ್‌ಸಿಒ ವಿಸ್ತರಣೆ ಮತ್ತು ಸಂಘಟನೆಯೊಳಗೆ ಬಹುಮುಖಿ ಮತ್ತು ಪರಸ್ಪರ ಪ್ರಯೋಜನಕಾರಿ ಸಹಕಾರವನ್ನು ಇನ್ನಷ್ಟು ಆಳಗೊಳಿಸುವುದಾಗಿ ಹೇಳಿದ್ದರು. 

ಉಜ್ಬೆಕಿಸ್ತಾನ ಅಧ್ಯಕ್ಷರ ಅಡಿಯಲ್ಲಿ, ವ್ಯಾಪಾರ, ಆರ್ಥಿಕತೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕಾಗಿ ಹಲವಾರು ನಿರ್ಧಾರಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

ಶಾಂಘೈ ಸಹಕಾರ ಸಂಘಟನೆಯನ್ನು 2001 ರಲ್ಲಿ ಶಾಂಘೈನಲ್ಲಿ ನಡೆದ ಶೃಂಗಸಭೆಯಲ್ಲಿ ರಷ್ಯಾ, ಚೀನಾ, ಕಿರ್ಗಿಜ್ ರಿಪಬ್ಲಿಕ್, ಕಝಾಕಿಸ್ತಾನ್, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಅಧ್ಯಕ್ಷರು ಸ್ಥಾಪಿಸಿದರು. ಕೆಲವೇ ವರ್ಷಗಳಲ್ಲಿ, ಇದು ಅತಿದೊಡ್ಡ ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

ಭಾರತ ಮತ್ತು ಪಾಕಿಸ್ತಾನವು 2017 ರಲ್ಲಿ ಅದರ ಖಾಯಂ ಸದಸ್ಯ ರಾಷ್ಟ್ರಗಳಾದವು. ಸಮರ್ಕಾಂಡ್ ಶೃಂಗಸಭೆಯಲ್ಲಿ ಇರಾನ್‌ಗೆ ಎಸ್ ಸಿಒ ಖಾಯಂ ಸದಸ್ಯ ಸ್ಥಾನಮಾನ ನೀಡುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com