ಹಸಿವಿನಿಂದ ಪ್ರತಿ 4 ಕ್ಷಣಕ್ಕೆ ಓರ್ವ ವ್ಯಕ್ತಿ ಸಾವು: ಜಾಗತಿಕ ಬಿಕ್ಕಟ್ಟಿನ ಬಗ್ಗೆ ಎನ್ ಜಿಒಗಳ ಎಚ್ಚರಿಕೆ!

ಹಸಿವಿನಿಂದಾಗಿ ಪ್ರತಿ ನಾಲ್ಕು ಕ್ಷಣಗಳಿಗೆ ಓರ್ವ ವ್ಯಕ್ತಿ ಸಾವನ್ನಪ್ಪುತ್ತಿದ್ದಾರೆ ಎಂದು 200 ಕ್ಕೂ ಹೆಚ್ಚು ಎನ್ ಜಿಒಗಳು  ಎಚ್ಚರಿಕೆ ನೀಡಿದ್ದು, ಜಾಗತಿಕ ಹಸಿವು ಬಿಕ್ಕಟ್ಟನ್ನು ಅಂತ್ಯಗೊಳಿಸಲು ಅಂತಾರಾಷ್ಟ್ರೀಯ ಕ್ರಮಕ್ಕೆ ಒತ್ತಾಯಿಸಿವೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ನವದೆಹಲಿ: ಹಸಿವಿನಿಂದಾಗಿ ಪ್ರತಿ ನಾಲ್ಕು ಕ್ಷಣಗಳಿಗೆ ಓರ್ವ ವ್ಯಕ್ತಿ ಸಾವನ್ನಪ್ಪುತ್ತಿದ್ದಾರೆ ಎಂದು 200 ಕ್ಕೂ ಹೆಚ್ಚು ಎನ್ ಜಿಒಗಳು  ಎಚ್ಚರಿಕೆ ನೀಡಿದ್ದು, ಜಾಗತಿಕ ಹಸಿವು ಬಿಕ್ಕಟ್ಟನ್ನು ಅಂತ್ಯಗೊಳಿಸಲು ಅಂತಾರಾಷ್ಟ್ರೀಯ ಕ್ರಮಕ್ಕೆ ಒತ್ತಾಯಿಸಿವೆ.

ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿನ ನಾಯಕರಿಗೆ ಈ ಬಹಿರಂಗ ಪತ್ರವನ್ನು ಬರೆಯಲಾಗಿದ್ದು, ಆಕ್ಸ್ ಫಾಮ್, ಸೇವ್ ದಿ ಚಿಲ್ಡ್ರನ್, ಪ್ಲಾನ್ ಇಂಟರ್ ನ್ಯಾಷನಲ್ ಸೇರಿದಂತೆ 75 ದೇಶಗಳ 238 ಸಂಘಟನೆಗಳು ಗಗನಕ್ಕೇರುತ್ತಿರುವ ಹಸಿವಿನ ಮಟ್ಟದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.

345 ಮಿಲಿಯನ್ ಮಂದಿ ಈಗ ತೀವ್ರ ಹಸಿವಿನಿಂದ ಬಳಲುತ್ತಿದ್ದು, 2019 ರಿಂದ ಈ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಎನ್ ಜಿಒಗಳು ಹೇಳಿವೆ. 21 ನೇ ಶತಮಾನದಲ್ಲಿ ಬರಗಾಲಕ್ಕೆ ಮತ್ತೆ ಅವಕಾಶ ನೀಡುವುದಿಲ್ಲ ಎಂದು ಜಾಗತಿಕ ನಾಯಕರು ಭರವಸೆಗಳನ್ನು ನೀಡಿದ್ದರೂ, ಸೋಮಾಲಿಯಾದಲ್ಲಿ ತೀವ್ರ ಬರಗಾಲವಿದೆ. ಜಾಗತಿಕ ಮಟ್ಟದಲ್ಲಿ 45 ರಾಷ್ಟ್ರಗಳಲ್ಲಿ 50 ಮಿಲಿಯನ್ ಮಂದಿ ಹಸಿವಿನ ಅಂಚಿನಲ್ಲಿದ್ದಾರೆ ಎಂದು ಎನ್ ಜಿಒಗಳು ಹೇಳಿವೆ.

ಪ್ರತಿ ದಿನವೂ 19,700 ಮಂದಿ ಹಸಿವಿನಿಂದ ಸಾವನ್ನಪ್ಪುತ್ತಿದ್ದಾರೆ. ಅಂದರೆ ಪ್ರತಿ ನಾಲ್ಕು ಕ್ಷಣಕ್ಕೆ ಓರ್ವ ವ್ಯಕ್ತಿ ಹಸಿವಿನಿಂದ ಸಾವನ್ನಪ್ಪುತ್ತಿದ್ದಾನೆ ಎಂದಾಗುತ್ತದೆ.

ಕೃಷಿಯಲ್ಲಿ ಎಲ್ಲಾ ರೀತಿಯ ತಂತ್ರಜ್ಞಾನ ಹಾಗೂ ಕೊಯ್ಲು ತಂತ್ರಗಳ ಹೊರತಾಗಿಯೂ 21 ನೇ ಶತಮಾನದಲ್ಲಿ ಬರಗಾಲ ಎದುರಿಸುತ್ತಿದ್ದೇವೆ ಎಂದರೆ ಹೀನಾಯ ಪರಿಸ್ಥಿತಿಯಲ್ಲಿದ್ದೇವೆ ಎಂದು ಪತ್ರ ಬರೆದಿರುವ ಎನ್ ಜಿಒಗಳ ಪೈಕಿ ಗುರುತಿಸಿಕೊಂಡಿರುವ ಮೋಹನ ಅಹ್ಮದ್ ಅಲಿ ಎಲ್ಜಬಲಿ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com