UNGA ಭಾಷಣದಲ್ಲಿ ಮತ್ತೆ ಕಾಶ್ಮೀರ ವಿಷಯ ಕೆದಕಿದ ಟರ್ಕಿ ಅಧ್ಯಕ್ಷ ಎರ್ಡೋಗನ್

ಟರ್ಕಿಯ ಅಧ್ಯಕ್ಷ ರೆಸೆಪ್ ಎರ್ಡೋಗನ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಕಲಾಪದಲ್ಲಿ ಮತ್ತೆ ಕಾಶ್ಮೀರದ ವಿಷಯ ಕೆದಕಿದ್ದಾರೆ. 
ಟರ್ಕಿಅಧ್ಯಕ್ಷ ರೆಸಿಪ್ ತಯ್ಯಿಪ್ ಎರ್ಡೋಗನ್
ಟರ್ಕಿಅಧ್ಯಕ್ಷ ರೆಸಿಪ್ ತಯ್ಯಿಪ್ ಎರ್ಡೋಗನ್

ನ್ಯೂಯಾರ್ಕ್: ಟರ್ಕಿಯ ಅಧ್ಯಕ್ಷ ರೆಸೆಪ್ ಎರ್ಡೋಗನ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಕಲಾಪದಲ್ಲಿ ಮತ್ತೆ ಕಾಶ್ಮೀರದ ವಿಷಯ ಕೆದಕಿದ್ದಾರೆ. 

ಜಾಗತಿಕ ಮಟ್ಟದ ನಾಯಕರಿದ್ದ ಸಭೆಯಲ್ಲಿ ಎರ್ಡೋಗನ್ ಈ ವಿಷಯ ಪ್ರಸ್ತಾಪಿಸಿದ್ದು, 75 ವರ್ಷಗಳ ಹಿಂದೆ ಸಾರ್ವಭೌಮತ್ವ ಹಾಗೂ ಸ್ವಾತಂತ್ರ್ಯವನ್ನು ಸ್ಥಾಪಿಸಿದ್ದ ಭಾರತ- ಪಾಕಿಸ್ತಾನಗಳು ಪರಸ್ಪರ ಶಾಂತಿ ಹಾಗೂ ಒಗ್ಗಟ್ಟನ್ನು ಹೊಂದಿಲ್ಲ. ಇದು ಅತ್ಯಂತ ದುರದೃಷ್ಟಕರ. 

"ಕಾಶ್ಮೀರದಲ್ಲಿ ನ್ಯಾಯಸಮ್ಮತ ಹಾಗೂ ಶಾಶ್ವತ ಶಾಂತಿ ಸಮೃದ್ಧಿ ಉಂಟಾಗಲಿ" ಎಂದು ಪ್ರಾರ್ಥಿಸುವುದಾಗಿ ಪಾಕಿಸ್ತಾನದ ಅತ್ಯಂತ ಆಪ್ತ ಎರ್ಡೋಗನ್ ತಿಳಿಸಿದ್ದಾರೆ. ಶಾಂಘೈ ಸಹಕಾರ ಒಕ್ಕೂಟ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದ ಒಂದು ವಾರದ ಅವಧಿಯಲ್ಲೇ ಎರ್ಡೋಗನ್ ಕಾಶ್ಮೀರದ ಕುರಿತು ಹೇಳಿಕೆ ನೀಡಿದ್ದಾರೆ.

ಕೆಲವು ವರ್ಷಗಳ ಹಿಂದೆ ಇದೇ ಮಾದರಿಯಲ್ಲಿ ಯುಎನ್ ಜಿಎ ಸೆಷನ್ ನಲ್ಲಿ ಕಾಶ್ಮೀರದ ಬಗ್ಗೆ ಹೇಳಿಕೆ ನೀಡಿದ್ದ ಎರ್ಡೋಗನ್ ಭಾರತ- ಟರ್ಕಿ ದ್ವಿಪಕ್ಷೀಯ ಸಂಬಂಧ ಹದಗೆಡುವಂತೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com