ಪಿಒಕೆ ಪ್ರಧಾನಿ ಸ್ಥಾನದಿಂದ ಸರ್ದಾರ್ ತನ್ವೀರ್ ಇಲ್ಯಾಸ್ ರನ್ನು ಅನರ್ಹಗೊಳಿಸಿದ ಕೋರ್ಟ್!

ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ಸರ್ದಾರ್ ತನ್ವೀರ್ ಇಲ್ಯಾಸ್ ಭಾರೀ ಮುಖಭಂಗ ಅನುಭವಿಸಿದ್ದಾರೆ. ನ್ಯಾಯಾಲಯದ ನಿಂದನೆಗಾಗಿ ಪ್ರಧಾನಿ ಇಲ್ಯಾಸ್ ಅವರನ್ನು ಅನರ್ಹಗೊಳಿಸಲಾಗಿದೆ.
ಸರ್ದಾರ್ ತನ್ವೀರ್ ಇಲ್ಯಾಸ್
ಸರ್ದಾರ್ ತನ್ವೀರ್ ಇಲ್ಯಾಸ್
Updated on

ಮುಜಫರಾಬಾದ್: ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ಸರ್ದಾರ್ ತನ್ವೀರ್ ಇಲ್ಯಾಸ್ ಭಾರೀ ಮುಖಭಂಗ ಅನುಭವಿಸಿದ್ದಾರೆ. ನ್ಯಾಯಾಲಯದ ನಿಂದನೆಗಾಗಿ ಪ್ರಧಾನಿ ಇಲ್ಯಾಸ್ ಅವರನ್ನು ಅನರ್ಹಗೊಳಿಸಲಾಗಿದೆ.

ಪ್ರತಿಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿದ್ದರಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಹೊಸ ಪ್ರಧಾನಿಯಾಗಿ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್‌ನ ಪ್ರಾದೇಶಿಕ ಅಧ್ಯಕ್ಷ ಸರ್ದಾರ್ ತನ್ವೀರ್ ಇಲ್ಯಾಸ್ ಆಯ್ಕೆಯಾಗಿದ್ದರು. ಇದೀಗ ನ್ಯಾಯಾಂಗ ನಿಂದನೆಗಾಗಿ ಅನರ್ಹಗೊಂಡ ಆಜಾದ್ ಜಮ್ಮು ಮತ್ತು ಕಾಶ್ಮೀರದ ಮೊದಲ ಪ್ರಧಾನಿಯಾಗಿದ್ದಾರೆ.

ಆಡಳಿತ ಪಕ್ಷದಲ್ಲಿ ತಮ್ಮ ವಿರುದ್ಧ ಬಂಡಾಯವೆದ್ದ ಹಿನ್ನೆಲೆಯಲ್ಲಿ ನಿಯಾಜಿ ಅವರು ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರ ಇಲ್ಯಾಸ್ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿದರು.

ಇಲ್ಯಾಸ್ ಅವರು ಹೇಳಿಕೆಯೊಂದರಲ್ಲಿ ಸುಪ್ರೀಂ ಕೋರ್ಟ್ ವಿರುದ್ಧ ಬೆದರಿಕೆ ಸಂದೇಶ ಬಳಸಿದ್ದಕ್ಕಾಗಿ ಹೈಕೋರ್ಟ್‌ ತೀರ್ಪು ನೀಡಿದೆ. ನ್ಯಾಯಾಧೀಶ ಸದಾಕತ್ ಹುಸೇನ್ ರಾಜಾ ಅವರ ನಿರ್ದೇಶನದ ಪೂರ್ಣ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಪ್ರಧಾನಿ ಸಂಬಂಧಿತ ವಿಡಿಯೋಗಳನ್ನು ಪ್ರಸಾರ ಮಾಡಲಾಗಿತ್ತು.

ನನ್ನ ಯಾವುದೇ ಹೇಳಿಕೆಗಳು ನ್ಯಾಯಾಧೀಶರನ್ನು ಗಾಯಗೊಳಿಸಿದ್ದರೆ ನಾನು ಪೂರ್ಣ ಹೃದಯದಿಂದ ವಿಷಾದಿಸುತ್ತೇನೆ ಎಂದು ಇಲ್ಯಾಸ್ ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com