ಗ್ರೀನ್ ಕಾರ್ಡ್ ಮೇಲಿನ ಮಿತಿ ತೆಗೆದುಹಾಕಲು ಭಾರತೀಯ- ಅಮೇರಿಕನ್ ಸಮುದಾಯದ ನಾಯಕನಿಂದ ಒತ್ತಾಯ

ಸಿಲಿಕಾನ್ ವ್ಯಾಲಿಯಲ್ಲಿರುವ ಭಾರತೀಯ-ಅಮೇರಿಕನ್ ಸಮುದಾಯದ ನಾಯಕರೊಬ್ಬರು ಗ್ರೀನ್ ಕಾರ್ಡ್ ಗಳ ಮೇಲೆ ಈಗಿರುವ ಶೇ.7 ರಷ್ಟು ಮಿತಿಯನ್ನು ತೆಗೆದುಹಾಕುವಂತೆ ಅಮೇರಿಕಾದ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ. 
ಗ್ರೀನ್ ಕಾರ್ಡ್
ಗ್ರೀನ್ ಕಾರ್ಡ್

ಸಿಲಿಕಾನ್ ವ್ಯಾಲಿ: ಸಿಲಿಕಾನ್ ವ್ಯಾಲಿಯಲ್ಲಿರುವ ಭಾರತೀಯ-ಅಮೇರಿಕನ್ ಸಮುದಾಯದ ನಾಯಕರೊಬ್ಬರು ಗ್ರೀನ್ ಕಾರ್ಡ್ ಗಳ ಮೇಲೆ ಈಗಿರುವ ಶೇ.7 ರಷ್ಟು ಮಿತಿಯನ್ನು ತೆಗೆದುಹಾಕುವಂತೆ ಅಮೇರಿಕಾದ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ. 

ಗ್ರೀನ್ ಕಾರ್ಡ್ ಗೆ ಸಂಬಂಧಿಸಿದಂತೆ, ದೇಶ-ನಿರ್ದಿಷ್ಟ ಮಿತಿ ವಿಧಿಸಿರುವುದು ವ್ಯಾಪಕ ಬ್ಯಾಕ್‌ಲಾಗ್‌ಗಳನ್ನು ಸೃಷ್ಟಿಸಿದೆ ಎಂದು ಭಾರತೀಯ ಅಮೇರಿಕನ್ ಸಮುದಾಯ ಹೇಳಿದೆ. ದೇಶದಲ್ಲಿ ಶಾಶ್ವತವಾಗಿ ನೆಲೆಸಲು ವಲಸಿಗ ವ್ಯಕ್ತಿಯೋರ್ವನಿಗೆ ಅನುಮತಿ ನೀಡಲಾಗಿದೆ ಎಂಬುದರ ಗುರುತಿಗಾಗಿ ಗ್ರೀನ್ ಕಾರ್ಡ್ ನ್ನು ನೀಡಲಾಗುತ್ತದೆ.

ಯುಎಸ್ ಕ್ಯಾಪಿಟಲ್‌ನಲ್ಲಿ ಬುಧವಾರ ನಡೆದ ಯುಎಸ್-ಇಂಡಿಯಾ ಶೃಂಗಸಭೆಯಲ್ಲಿ ಮಾತನಾಡಿದ ಉದ್ಯಮಿ ಮತ್ತು ಸಮುದಾಯದ ಮುಖಂಡ ಅಜಯ್ ಜೈನ್ ಭುಟೋರಿಯಾ, ಎಚ್ -1 ವೀಸಾದಲ್ಲಿ ಇಲ್ಲದ ಮಿತಿ ಗ್ರೀನ್ ಕಾರ್ಡ್‌ಗೆ ಏಕೆ ಎಂದು ಪ್ರಶ್ನಿಸಿದ್ದಾರೆ.

"ನಮ್ಮ ಕಂಪನಿಗಳು, ವ್ಯವಹಾರಗಳು ಮತ್ತು ಆರ್ಥಿಕತೆಯನ್ನು ಬೆಂಬಲಿಸಲು H-1 ವೀಸಾ ನೀಡುವಲ್ಲಿ ನಾವು ದೇಶದ ಮಿತಿಯನ್ನು ಹೊಂದಿಲ್ಲದಿದ್ದರೆ. ಗ್ರೀನ್ ಕಾರ್ಡ್ ನೀಡಿಕೆಗೆ ನಾವು ದೇಶದ ಮಿತಿಯನ್ನು ಏಕೆ ಹೊಂದಿರಬೇಕು, ”ಎಂದು ಭೂಟೋರಿಯಾ ಅವರು ಕಾಂಗ್ರೆಷನಲ್ ಇಂಡಿಯಾ ಕಾಕಸ್‌ನ ಸಹ-ಅಧ್ಯಕ್ಷರಾಗಿ ಭಾರತೀಯ-ಅಮೇರಿಕನ್ ಕಾಂಗ್ರೆಸ್‌ನ ರೋ ಖನ್ನಾ ಅವರು ಆಯೋಜಿಸಿದ್ದ ಶೃಂಗಸಭೆಯಲ್ಲಿ ಹೇಳಿದರು.

ಪ್ರತಿ ದೇಶಕ್ಕೆ ಮಿತಿಗಳನ್ನು ನಿಗದಿಪಡಿಸಲಾಗಿದ್ದು, ನಿರ್ದಿಷ್ಟ ದೇಶಗಳಿಂದ ಬಂದಿರುವ ವ್ಯಕ್ತಿಗಳಿಗೆ ಗ್ರೀನ್ ಕಾರ್ಡ್ ನೀಡುವುದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಸಂಖ್ಯೆಯ ಮಿತಿಯನ್ನು ಹೊಂದಿರುತ್ತದೆ. ವಲಸೆಗೆ ಸಂಬಂಧಿಸಿದ ಅಮೇರಿಕಾ ಕಾನೂನು, ಪ್ರತಿ ವರ್ಷ ಸರಿಸುಮಾರು 140,000 ಉದ್ಯೋಗ ಆಧಾರಿತ ಹಸಿರು ಕಾರ್ಡ್‌ಗಳನ್ನು ನೀಡುವುದಕ್ಕೆ ಅವಕಾಶ ಕಲ್ಪಿಸುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com