ಪಾಕಿಸ್ತಾನ: ನೆಲಬಾಂಬ್‌ ಸ್ಫೋಟ, ಯುನಿಯನ್‌ ಕೌನ್ಸಿಲ್‌ ಮುಖ್ಯಸ್ಥ ಸೇರಿ ಏಳು ಮಂದಿ ಸಾವು

ಬಲೂಚಿಸ್ತಾನದ ಪಂಜ್‌ಗುರ್‌ ಜಿಲ್ಲೆಯಲ್ಲಿ ನೆಲಬಾಂಬ್‌ ಸ್ಫೋಟಗೊಂಡು ಯುನಿಯನ್‌ ಕೌನ್ಸಿಲ್‌ ಮುಖ್ಯಸ್ಥ ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್: ಬಲೂಚಿಸ್ತಾನದ ಪಂಜ್‌ಗುರ್‌ ಜಿಲ್ಲೆಯಲ್ಲಿ ನೆಲಬಾಂಬ್‌ ಸ್ಫೋಟಗೊಂಡು ಯುನಿಯನ್‌ ಕೌನ್ಸಿಲ್‌ ಮುಖ್ಯಸ್ಥ ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ.

ಸೋಮವಾರ ರಾತ್ರಿ ಬಲೂಚಿಸ್ತಾನದ ಪಂಜ್‌ಗುರ್ ಜಿಲ್ಲೆಯಲ್ಲಿ ವಾಹನವನ್ನು ಗುರಿಯಾಗಿಸಿಕೊಂಡು ನಡೆಸಿದ ನೆಲಬಾಂಬ್ ಸ್ಫೋಟದಲ್ಲಿ ಯೂನಿಯನ್ ಕೌನ್ಸಿಲ್ (ಯುಸಿ) ಅಧ್ಯಕ್ಷ ಸೇರಿದಂತೆ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಡಾನ್ ವರದಿ ಮಾಡಿದೆ.

ಬಲ್ಗತಾರ್‌ ಪ್ರದೇಶದ ಚಕರ್‌ ಬಜಾರ್‌ಗೆ ಯುನಿಯನ್‌ ಕೌನ್ಸಿಲ್‌ ಮುಖ್ಯಸ್ಥ ಇಶ್ತಿಯಾಕ್ ಯಾಕೂಬ್ ಮತ್ತು ಇತರರು ಇದ್ದ ವಾಹನ ಬಂದು ನಿಲ್ಲುತ್ತಿದ್ದಂತೆ ಬಾಂಬ್‌ ಸ್ಫೋಟಗೊಂಡಿದೆ. ಮದುವೆ ಸಮಾರಂಭದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ ಎಂದು ಪಂಜ್‌ಗುರ್‌ನ ಡೆಪ್ಯುಟಿ ಕಮಿಷನರ್ ಅಮ್ಜದ್ ಸೊಮ್ರೊ ಹೇಳಿದ್ದಾರೆ ಎಂದು ವರದಿಯಾಗಿದೆ.

ಮೃತರನ್ನು ಮೊಹಮ್ಮದ್ ಯಾಕೂಬ್, ಇಬ್ರಾಹಿಂ, ವಾಜಿದ್, ಫಿದಾ ಹುಸೇನ್, ಸರ್ಫರಾಜ್ ಮತ್ತು ಹೈದರ್ ಎಂದು ಗುರುತಿಸಲಾಗಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಮೃತರಲ್ಲಿ ನಾಲ್ವರ ಗುರುತುಗಳನ್ನು ಅವರ ಸಂಬಂಧಿಕರು ಆಸ್ಪತ್ರೆಯಲ್ಲಿ ಖಚಿತಪಡಿಸಿದ್ದಾರೆ. ಇನ್ನುಳಿದವರ ಗುರುತನ್ನು ಪತ್ತೆ ಮಾಡಬೇಕಿದೆ ಎಂದು ಅವರು ಹೇಳಿದರು. ಕಾನೂನುಬಾಹಿರ ಬಲೂಚ್ ಲಿಬರೇಶನ್ ಫ್ರಂಟ್ ಕೈವಾಡವಿದೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com