ಪ್ರಧಾನಿ ಮೋದಿಗೆ ಗ್ರೀಸ್ ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರಧಾನ

ಪ್ರಧಾನಿ ಮೋದಿಯವರಿಗೆ ಗ್ರೀಸ್ ತನ್ನ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿದೆ. ಅಥೆನ್ಸ್‌ನಲ್ಲಿ ಗ್ರೀಸ್ ಅಧ್ಯಕ್ಷೆ ಕಟರೀನಾ ಎನ್. ಸಕೆಲ್ಲರೊಪೌಲೌ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್ ಪ್ರಶಸ್ತಿ ಪ್ರಧಾನ ಮಾಡಿದರು.
ಪ್ರಧಾನಿ ಮೋದಿ-ಕಟರೀನಾ ಸಕೆಲ್ಲರೊಪೌಲೌ
ಪ್ರಧಾನಿ ಮೋದಿ-ಕಟರೀನಾ ಸಕೆಲ್ಲರೊಪೌಲೌ

ಅಥೆನ್ಸ್: ಪ್ರಧಾನಿ ಮೋದಿಯವರಿಗೆ ಗ್ರೀಸ್ ತನ್ನ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿದೆ. ಅಥೆನ್ಸ್‌ನಲ್ಲಿ ಗ್ರೀಸ್ ಅಧ್ಯಕ್ಷೆ ಕಟರೀನಾ ಸಕೆಲ್ಲರೊಪೌಲೌ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್ ಪ್ರಶಸ್ತಿ ಪ್ರಧಾನ ಮಾಡಿದರು.

ಈ ಅತ್ಯುನ್ನತ ಗೌರವಕ್ಕಾಗಿ ಪ್ರಧಾನಿ ಮೋದಿ ಟ್ವೀಟ್ ಮಾಡುವ ಮೂಲಕ ಗ್ರೀಸ್‌ಗೆ ಧನ್ಯವಾದ ತಿಳಿಸಿದ್ದಾರೆ. ನಾನು ಅಧ್ಯಕ್ಷೆ ಕಟರೀನಾ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಗ್ರೀಸ್ ಸರ್ಕಾರ ಮತ್ತು ಜನರಿಗೆ ಧನ್ಯವಾದಗಳು. ಇದು ಗ್ರೀಸ್ ಜನತೆಗೆ ಭಾರತದ ಬಗೆಗಿನ ಗೌರವವನ್ನು ತೋರಿಸುತ್ತದೆ ಎಂದು ಟ್ವೀಟಿಸಿದ್ದಾರೆ.

ಪ್ರಧಾನಿ ಮೋದಿ ಹೇಳಿದ್ದೇನು?
ಸುದೀರ್ಘ 40 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಗ್ರೀಸ್‌ಗೆ ಬಂದಿದ್ದಾರೆ. ಅದೇನೇ ಇದ್ದರೂ, ನಮ್ಮ ಸಂಬಂಧಗಳ ಆಳವು ಕಡಿಮೆಯಾಗಿಲ್ಲ ಅಥವಾ ಸಂಬಂಧಗಳ ಉಷ್ಣತೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ. ಗ್ರೀಸ್ ಮತ್ತು ಭಾರತವು ಪ್ರಪಂಚದ 2 ಅತ್ಯಂತ ಹಳೆಯ ನಾಗರಿಕತೆಗಳು. 2 ಹಳೆಯ ಪ್ರಜಾಪ್ರಭುತ್ವ ಸಿದ್ಧಾಂತಗಳು ಮತ್ತು 2 ಹಳೆಯ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಬಂಧಗಳ ನಡುವಿನ ನೈಸರ್ಗಿಕ ಹೊಂದಾಣಿಕೆಯಾಗಿದೆ. ನಮ್ಮ ಸಂಬಂಧದ ತಳಹದಿಯು ಪುರಾತನ ಮತ್ತು ಬಲವಾದದ್ದು ಎಂದು ಬರೆದುಕೊಂಡಿದ್ದಾರೆ.

ಗ್ರೀಕ್-ಭಾರತೀಯ ಸ್ನೇಹದ ಕಾರ್ಯತಂತ್ರದ ಪ್ರಚಾರದಲ್ಲಿ ಪ್ರಧಾನಿ ಮೋದಿಯವರ ನಿರ್ಣಾಯಕ ಕೊಡುಗೆಯನ್ನು ಗುರುತಿಸಿ ಗ್ರೀಸ್ ಗೌರವಿಸಿದೆ. ಈ ಭೇಟಿಯ ಸಂದರ್ಭದಲ್ಲಿ ಗ್ರೀಕ್ ರಾಜ್ಯವು ಭಾರತದ ಪ್ರಧಾನ ಮಂತ್ರಿಯನ್ನು ಗೌರವಿಸುತ್ತದೆ ಎಂದು ಗ್ರೀಸ್ ಹೇಳಿದೆ. ಅವರು ತಮ್ಮ ದೇಶದ ಜಾಗತಿಕ ವ್ಯಾಪ್ತಿಯನ್ನು ಉತ್ತೇಜಿಸಿದ ರಾಜಕಾರಣಿ ಮತ್ತು ಭಾರತದ ಆರ್ಥಿಕ ಪ್ರಗತಿ ಮತ್ತು ಸಮೃದ್ಧಿಗಾಗಿ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದಾರೆ. ದಿಟ್ಟ ಸುಧಾರಣೆಗಳನ್ನು ತರುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯನ್ನು ಪ್ರಮುಖ ಆದ್ಯತೆಗಳಿಗೆ ತಂದ ರಾಜಕಾರಣಿ ಎಂದು ಗ್ರೀಸ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com