ಕೆನಡಾ: ಕಾರ್ಬನ್ ಮಾನಾಕ್ಸೈಡ್ ವಿಷದಿಂದ ಭಾರತೀಯ ವಿದ್ಯಾರ್ಥಿ ಸಾವು!

ಕೆನಡಾದ ಒಂಟಾರಿಯೊ ಪ್ರಾಂತ್ಯದ ಮನೆಯೊಂದರ ಗ್ಯಾರೇಜ್‌ನಲ್ಲಿ ಕಾರ್ಬನ್ ಮಾನಾಕ್ಸೈಡ್ ಅನಿಲ ಸೋರಿಕೆ ಪರಿಣಾಮ 25 ವರ್ಷದ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಒಟ್ಟಾವಾ: ಕೆನಡಾದ ಒಂಟಾರಿಯೊ ಪ್ರಾಂತ್ಯದ ಮನೆಯೊಂದರ ಗ್ಯಾರೇಜ್‌ನಲ್ಲಿ ಕಾರ್ಬನ್ ಮಾನಾಕ್ಸೈಡ್ ಅನಿಲ ಸೋರಿಕೆ ಪರಿಣಾಮ 25 ವರ್ಷದ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ವಾಟರ್‌ಲೂ ಪ್ರಾದೇಶಿಕ ಪೊಲೀಸ್ ಪ್ರಕಾರ, ಮಂಗಳವಾರ ಮುಂಜಾನೆ ಕಿಚನರ್ ನಗರದ ಮನೆಯೊಂದರಲ್ಲಿ ಅನಿಲ ಸೋರಿಕೆ ವರದಿಯಾಗಿತ್ತು. ತುರ್ತು ಸೇವೆ ಒದಗಿಸಲಾಗಿತ್ತು. ಇನ್ನು ಅಲ್ಲಿ ಅಪಾಯಕಾರಿಯಾಗಿ ಕಾರ್ಬನ್ ಮಾನಾಕ್ಸೈಡ್ (CO) ಕಂಡುಬಂದಿತ್ತು.

ಕಾರ್ಬನ್ ಮಾನಾಕ್ಸೈಡ್‌ನ ಮೂಲವು ನಿವಾಸದ ಗ್ಯಾರೇಜ್‌ನಲ್ಲಿದ್ದ ಕಾರಿನಿಂದ ಸೋರಿಕೆಯಾಗಿದೆ. ಕಾರ್ಬನ್ ಮಾನಾಕ್ಸೈಡ್ ವಿಷ ಸೇವನೆಯಿಂದ ಏಳು ಮಂದಿ ಅಸ್ವಸ್ಥರಾಗಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರಲ್ಲಿ ಒಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವಿದ್ಯಾರ್ಥಿ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಪದವಿ ಪಡೆದಿದ್ದ ಭಾರತೀಯ ಎಂದು ಕುಟುಂಬದ ಸ್ನೇಹಿತ ಡಾನ್ ಪಟೇಲ್ ಹೇಳಿದ್ದಾರೆ. ಮೃತ ವಿದ್ಯಾರ್ಥಿಯ ಹೆಸರನ್ನು ಬಹಿರಂಗಪಡಿಸಲು ಕುಟುಂಬಸ್ಥರು ನಿರಾಕರಿಸಿದ್ದಾರೆ.

ಗ್ಯಾರೇಜಿನಿಂದ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಕೆಳಗೆ ಬಂದು ಗ್ಯಾರೇಜ್ ಬಾಗಿಲು ತೆರೆದ ತಕ್ಷಣ, ಸ್ಟಫ್ನ ಇನ್ಹಲೇಷನ್ ಆತನನ್ನು ಅಲ್ಲಿಯೇ ಕುಸಿದು ಬೀಳುವಂತೆ ಮಾಡಿತು. ಮೃತ ವಿದ್ಯಾರ್ಥಿ ಪೋಷಕರಿಗೆ ಒಬ್ಬನೇ ಮಗನಾಗಿದ್ದು ನಾಲ್ಕು ವರ್ಷಗಳ ಹಿಂದೆ ಕೆನಡಾಗೆ ಬಂದಿದ್ದನು. ಆದರೆ ಈಗ ಪೋಷಕರು ಮೃತ ಮಗನ ಮೃತದೇಹದೊಂದಿಗೆ ಭಾರತದಲ್ಲಿನ ಮನೆಗೆ ಮರಳಿದ್ದಾರೆ ಎಂದು ಪಟೇಲ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com