ಧರ್ಮ ನಿಂದನೆ ಆರೋಪ: ಪಾಕ್‌ನಲ್ಲಿ ಠಾಣೆಗೆ ನುಗ್ಗಿ ವ್ಯಕ್ತಿಯನ್ನು ಎಳೆತಂದು ಥಳಿಸಿ, ಸುಟ್ಟು ಹಾಕಿದ ಮೂಲಭೂತವಾದಿಗಳು!

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಂಕಾನಾ ಸಾಹಿಬ್ ಜಿಲ್ಲೆಯಲ್ಲಿ ಧರ್ಮನಿಂದೆಯ ಆರೋಪದ ಮೇಲೆ ಹಿಂಸಾತ್ಮಕ ಗುಂಪೊಂದು ವ್ಯಕ್ತಿಯೊಬ್ಬನನ್ನು ಸಾರ್ವಜನಿಕವಾಗಿ ಥಳಿಸಿ ಕೊಂದಿದೆ.
ಪ್ರತ್ಯಕ್ಷ ದೃಶ್ಯ
ಪ್ರತ್ಯಕ್ಷ ದೃಶ್ಯ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಂಕಾನಾ ಸಾಹಿಬ್ ಜಿಲ್ಲೆಯಲ್ಲಿ ಧರ್ಮನಿಂದೆಯ ಆರೋಪದ ಮೇಲೆ ಹಿಂಸಾತ್ಮಕ ಗುಂಪೊಂದು ವ್ಯಕ್ತಿಯೊಬ್ಬನನ್ನು ಸಾರ್ವಜನಿಕವಾಗಿ ಥಳಿಸಿ ಕೊಂದಿದೆ. ನಂಕಾನಾ ಸಾಹಿಬ್‌ನ ವಾರ್ಬರ್ಟನ್ ತಹಸಿಲ್‌ನಲ್ಲಿ ಈ ಘಟನೆ ನಡೆದಿದೆ. 

ವರದಿಯ ಪ್ರಕಾರ, ಮೂಲಭೂತವಾದಿಗಳಿಂದ ಹತ್ಯೆಗೀಡಾದ ವ್ಯಕ್ತಿ ಮೇಲೆ ಕುರಾನ್‌ಗೆ ಅವಮಾನ ಮಾಡಿದ ಆರೋಪ ಹೊರಿಸಲಾಗಿತ್ತು. ಪಾಕಿಸ್ತಾನಿ ಪೊಲೀಸರ ಪ್ರಕಾರ ಮೃತ ವ್ಯಕ್ತಿಯ ಹೆಸರು ವಾರಿಸ್ ಎನ್ನಲಾಗಿದೆ. ಈ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಉದ್ರಿಕ್ತರ ಗುಂಪು ವಾರ್ಬರ್ಟನ್ ಪೊಲೀಸ್ ಠಾಣೆಯ ಹೊರಗೆ ಪೊಲೀಸರು ಧರ್ಮನಿಂದೆಯ ಶಂಕಿತನನ್ನು ಹಸ್ತಾಂತರಿಸುವಂತೆ ಒತ್ತಾಯಿಸುವುದನ್ನು ಕಾಣಬಹುದು. 

ಲಾಹೋರ್‌ನ ಪೂರ್ವ ನಗರದಿಂದ ಸುಮಾರು 80 ಕಿಮೀ ದೂರದಲ್ಲಿರುವ ನಂಕಾನಾ ಸಾಹಿಬ್‌ನಲ್ಲಿರುವ ವಾರ್ಬರ್ಟನ್‌ನಲ್ಲಿರುವ ಪೊಲೀಸ್ ಠಾಣೆಗೆ ಜನಸಮೂಹವು ನುಗ್ಗಿ ಧರ್ಮನಿಂದೆಯ ಆರೋಪದ ಮೇಲೆ ವಾರಿಸ್ ಇಸಾನನ್ನು ಕರೆದೊಯ್ದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆಯ ಹಲವು ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವಿಡಿಯೋದಲ್ಲಿ, ಮಕ್ಕಳು ಸೇರಿದಂತೆ ಗುಂಪು ಪೊಲೀಸ್ ಠಾಣೆಯ ಗೇಟ್ ಹತ್ತುತ್ತಿರುವುದನ್ನು ಕಾಣಬಹುದು. ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಶೆಹಬಾಜ್ ಷರೀಫ್ ಆದೇಶಿಸಿದ್ದಾರೆ.

ಹಿಂಸಾತ್ಮಕ ಗುಂಪನ್ನು ತಡೆಯಲು ಪೊಲೀಸರಿಗೆ ಏಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಯನ್ನೂ ಪ್ರಧಾನಿ ಎತ್ತಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಾತ್ರಿಪಡಿಸುವಂತೆ ಅವರು ಪಂಜಾಬ್‌ನ ಪೊಲೀಸ್ ಮಹಾನಿರೀಕ್ಷಕರಿಗೆ ನಿರ್ದೇಶನ ನೀಡಿದರು. ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಷರೀಫ್ ಹೇಳಿದರು. ಕಾನೂನಿನ ಮೇಲೆ ಪ್ರಭಾವ ಬೀರಲು ಯಾರಿಗೂ ಅವಕಾಶ ನೀಡಬಾರದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com