ರಷ್ಯಾ-ಉಕ್ರೇನ್ ಯುದ್ಧಕ್ಕೆ ವರ್ಷ: ಅಸಂಭವ ಯುದ್ಧಕಾಲದಲ್ಲಿ ಉಕ್ರೇನಿಯರಲ್ಲಿ ಭರವಸೆ ಮೂಡಿಸಿದ ಝೆಲೆನ್ಸ್ಕಿ!
ವಾಷಿಂಗ್ಟನ್: ಒಂದು ವರ್ಷದ ಹಿಂದೆ, ರಷ್ಯಾದ ಪಡೆಗಳು ಉಕ್ರೇನ್‌ನ ರಾಜಧಾನಿಯ ಮೇಲೆ ದಾಳಿ ನಡೆಸಿದಾಗ,ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಜೀವದ ಬಗ್ಗೆ ಆತಂಕಗೊಂಡಿದ್ದ ಪಾಶ್ಚಿಮಾತ್ಯ ನಾಯಕರು ಆತ ಪಲಾಯನ ಮಾಡಲು ಸಲಹೆ ನೀಡಿದರು. ಅಮೆರಿಕಾ ಆತ ತಪ್ಪಿಸಿಕೊಳ್ಳುವ ಮಾರ್ಗವನ್ನು ನೀಡಿತು.
ಬದಲಿಗೆ ಅವರು ಅಧ್ಯಕ್ಷರ ಕಚೇರಿ ಹೊರಗಡೆ ಕತ್ತಲೆಯಾದ ಬೀದಿಯಲ್ಲಿ ತಮ್ಮ ನಾಲ್ಕು ಆಪ್ತರೊಂದಿಗೆ ಸ್ವತಃ ಪ್ರತಿಭಟನೆಯ ವೀಡಿಯೊವನ್ನು ಚಿತ್ರೀಕರಿಸಿದ ಝೆಲೆನ್ಸ್ಕಿ, ನಾವೆಲ್ಲರೂ ಇಲ್ಲಿದ್ದೇವೆ ಎಂದು ಕೀವ್ ನಲ್ಲಿ ಉಳಿಯುವ ಮತ್ತು ಉಕ್ರೇನ್ ಸ್ವಾತಂತ್ರ್ಯವನ್ನು ರಕ್ಷಿಸುವ ತಮ್ಮ ನಿರ್ಣಯವನ್ನು ಘೋಷಿಸಿದ್ದರು.
ಅದೊಂದು ಪ್ರಬಲ ರಾಜಕೀಯ ರಂಗಭೂಮಿಯಾಗಿತ್ತು. ಯುದ್ಧದ ಮೊದಲ ದಿನಗಳಿಂದ, ಉಕ್ರೇನ್ ಸೈನ್ಯವು ರಷ್ಯಾದ ಆಕ್ರಮಣವನ್ನು ತಡೆದುಕೊಳ್ಳುತ್ತದೆ ಎಂದು ಕೆಲವರು ನಿರೀಕ್ಷಿಸಿದಾಗ, ಹೋರಾಡಲು ಉಕ್ರೇನಿಯನ್ನರನ್ನು ಝೆಲೆನ್ಸ್ಕಿಯು ಪ್ರೇರೇಪಿಸಿದ್ದು, ಅವರಲ್ಲಿ ಭರವಸೆ ನೀಡಿದ್ದಾರೆ.
ರಾತ್ರೋರಾತ್ರಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿ ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು. ರಷ್ಯಾದ ದೌರ್ಜನ್ಯಗಳನ್ನು ಖಂಡಿಸುತ್ತಾ, ಇದಕ್ಕೆ ಕಾರಣರಾದವರನ್ನು ಶಿಕ್ಷಿಸಬೇಕೆಂದು ನೈತಿಕ ಆತ್ಮಸ್ಥೈರ್ಯ ತುಂಬುತ್ತಿದ್ದರು. ದೇಶದ ವಿನಾಶದಿಂದ ಆಕ್ರೋಶ ಹಾಗೂ ನೋವಿನಿಂದ ಮಾತನಾಡಿದರು.
ಉಕ್ರೇನ್ ಒಂದು ದಿನ ಸಂಪೂರ್ಣವಾಗಲಿದೆ ಎಂದು ಅವರು ಪ್ರತಿಜ್ಞೆ ಮಾಡಿದ್ದು, ಮುಂಚೂಣಿಯಲ್ಲಿ ಹೋರಾಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ. ಯುದ್ದದ ಯುದ್ಧದ ಎಲ್ಲಾ ಭೀಕರತೆಯ ಹೊರತಾಗಿಯೂ ಉಕ್ರೇನ್ ಮೇಲುಗೈ ಸಾಧಿಸಬಹುದು ಎಂಬ ನಂಬಿಕೆಯನ್ನು ಝೆಲೆನ್ಸ್ಕಿ ಹುಟ್ಟುಹಾಕಿದ್ದಾರೆ.