ಇಟಲಿಯಲ್ಲಿ ದೊಡ್ಡ ದೋಣಿ ದುರಂತ: 28 ಪಾಕಿಗರು ಸೇರಿದಂತೆ 60 ಮಂದಿ ವಲಸಿಗರ ಸಾವು!

ಇಟಲಿಯ ದಕ್ಷಿಣ ಕರಾವಳಿಯ ಬಳಿ ದೋಣಿಯೊಂದು ಮುಳುಗಿ ಭಾರೀ ಅವಘಡ ಸಂಭವಿಸಿದ್ದು, 28 ಮಂದಿ ಪಾಕಿಸ್ತಾನದವರು ಸೇರಿದಂತೆ 60 ಮಂದಿ ಮೃತಪಟ್ಟಿದ್ದಾರೆ.
ಇಟಲಿಯಲ್ಲಿ ದೋಣಿ ದುರಂತ
ಇಟಲಿಯಲ್ಲಿ ದೋಣಿ ದುರಂತ
Updated on

ರೋಮ್: ಇಟಲಿಯ ದಕ್ಷಿಣ ಕರಾವಳಿಯ ಬಳಿ ದೋಣಿಯೊಂದು ಮುಳುಗಿ ಭಾರೀ ಅವಘಡ ಸಂಭವಿಸಿದ್ದು, 28 ಮಂದಿ ಪಾಕಿಸ್ತಾನದವರು ಸೇರಿದಂತೆ 60 ಮಂದಿ ಮೃತಪಟ್ಟಿದ್ದಾರೆ.

ಇಟಲಿಯ ಕ್ಯಾಲಬ್ರಿಯಾ ಪರ್ಯಾಯ ದ್ವೀಪದ ಕರಾವಳಿ ಪಟ್ಟಣವಾದ ಕ್ರೋಟೋನ್ ಬಳಿ ಮುಂಜಾನೆ ಲೋನಿಯಲ್ ದೋಣಿ ಮುಳುಗಿದಾಗ 100ಕ್ಕೂ ಹೆಚ್ಚು ಜನರು ಹಡಗಿನಲ್ಲಿದ್ದರು ಎಂದು ಬಂದರು ಅಧಿಕಾರಿಗಳು ತಿಳಿಸಿದ್ದಾರೆ.

ಇಟಲಿಯ ದಕ್ಷಿಣ ಕರಾವಳಿಯಲ್ಲಿ ವಲಸಿಗರ ದೋಣಿ ಮುಳುಗಿದ ನಂತರ ಇಟಾಲಿಯನ್ ಕೋಸ್ಟ್ ಗಾರ್ಡ್ ಸುಮಾರು 30 ಶವಗಳನ್ನು ಹೊರತೆಗೆದಿದೆ. ವಲಸೆ ಕಾರ್ಮಿಕರಿಂದ ತುಂಬಿದ್ದ ದೋಣಿ ಸಮುದ್ರದ ಮಧ್ಯದಲ್ಲಿ ಎರಡು ತುಂಡಾಗಿದೆ. ಅದೇ ಸಮಯದಲ್ಲಿ, ರಾಷ್ಟ್ರೀಯ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ಕೂಡ ಈ ಬಗ್ಗೆ ಮಾಹಿತಿ ನೀಡಿದೆ. ಇರಾನ್, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಿಂದ ವಲಸೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ಕೆಟ್ಟ ಹವಾಮಾನದಿಂದಾಗಿ  ಬಂಡೆಗಳಿಗೆ ಡಿಕ್ಕಿ ಹೊಡೆದಿದೆ. ಇನ್ನು ಸಮುದ್ರದ ಮೂಲಕ ಯುರೋಪ್‌ಗೆ ಪ್ರವೇಶಿಸಲು ಪ್ರಯತ್ನಿಸುತ್ತಿರುವ ವಲಸಿಗರಿಗೆ ಇಟಲಿ ಪ್ರಮುಖ ಲ್ಯಾಂಡಿಂಗ್ ಪಾಯಿಂಟ್‌ಗಳಲ್ಲಿ ಒಂದಾಗಿದೆ.

ರಕ್ಷಣಾ ತಂಡದಿಂದ 40 ಜನರನ್ನು ರಕ್ಷಣೆ
ರಕ್ಷಣಾ ತಂಡದ ಸಕ್ರಿಯ ಪಾತ್ರದಿಂದಾಗಿ 40 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಇದರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಪಾರುಗಾಣಿಕಾ ತಂಡದ ಅಧಿಕಾರಿ ಲುಕಾ ಕರಿ ಮಾತನಾಡಿ, ರಕ್ಷಿಸಲ್ಪಟ್ಟವರಲ್ಲಿ ಹಲವರು ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ತುಂಬಾ ಗಂಭೀರವಾಗಿದೆ. ಸಿಕ್ಕ ಮಾಹಿತಿಯ ಪ್ರಕಾರ ಕೋಸ್ಟ್ ಗಾರ್ಡ್, ಗಡಿ ಪೊಲೀಸ್ ಮತ್ತು ಅಗ್ನಿಶಾಮಕ ದಳದ ತಂಡ ಜಂಟಿಯಾಗಿ ರಕ್ಷಣಾ ತಂಡ ಕಾರ್ಯಾಚರಣೆ ನಡೆಸಿದೆ.

ಸದ್ಯ, ವಲಸಿಗರು ಎಲ್ಲಿಂದ ಬರುತ್ತಿದ್ದಾರೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಬೋಟ್ ಎಲ್ಲಿಂದ ಬಂತು ಎಂಬ ಗೊಂದಲವೂ ಅಧಿಕಾರಿಗಿದೆ. ಇದಲ್ಲದೆ, ಕ್ಯಾಲಬ್ರಿಯಾಕ್ಕೆ ಬರುವ ಹೆಚ್ಚಿನ ವಲಸೆ ದೋಣಿಗಳು ಟರ್ಕಿ ಅಥವಾ ಈಜಿಪ್ಟ್ ಕರಾವಳಿಯಿಂದ ಬರುತ್ತವೆ ಎಂದು ಊಹಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com