ಪೂರ್ವ ಚೀನಾ ಸಮುದ್ರದಲ್ಲಿ ಹಡಗು ಮುಳುಗಿ ಎಂಟು ಮಂದಿ ದುರ್ಮರಣ
ನಾಗಸಾಕಿ: ಜಪಾನ್‌ನ ನಾಗಸಾಕಿ ಪ್ರಾಂತ್ಯದ ಪೂರ್ವ ಚೀನಾ ಸಮುದ್ರದಲ್ಲಿ ಬುಧವಾರ ಹಡಗು ಮುಳುಗಿದ ನಂತರ ಕನಿಷ್ಠ ಎಂಟು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಕ್ಯೋಡೋ ಸುದ್ದಿ ಸಂಸ್ಥೆ ಗುರುವಾರ ವರದಿ ಮಾಡಿದೆ.
22 ಸಿಬ್ಬಂದಿಯನ್ನು ಕರೆದೊಯುತ್ತಿದ್ದ 6,551 ಟನ್ ತೂಕದ ಹಡಗು ಮುಳುಗಿದ್ದು, ಬುಧವಾರ ಇಬ್ಬರು ಸಿಬ್ಬಂದಿಯ ಶವ ಪತ್ತೆಯಾಗಿದೆ ಎಂದು ಅದಿಕಾರಿಗಳು ಹೇಳಿದ್ದಾರೆ.
ಹಾಂಗ್ ಕಾಂಗ್ ನೋಂದಾಯಿತ ಸರಕು ಹಡಗಿನಲ್ಲಿದ್ದ ಆರು ಮಂದಿ ಸಾವನ್ನಪ್ಪಿರುವುದು ಇತ್ತೀಚಿಗೆ ದೃಢಪಟ್ಟಿದ್ದು, ರಕ್ಷಿಸಲ್ಪಟ್ಟ 13 ಮಂದಿಯಲ್ಲಿ ಚೀನಾ ಅಥವಾ ಮ್ಯಾನ್ಮಾರ್ ಗೆ ಸೇರಿದವರಾಗಿದ್ದಾರೆ. ಯಾರನ್ನೂ ಆಸ್ಪತ್ರೆಗೆ ಕಳುಹಿಸದಿದ್ದರೂ, ಆಯಾ ದೇಶಗಳೊಂದಿಗೆ ಸಂಪರ್ಕವನ್ನು ಸ್ಥಾಪಿಸಲಾಗಿದೆ ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ.
ಸರಕು ಹಡಗಿನಲ್ಲಿ 14 ಚೀನೀ ಮತ್ತು ಎಂಟು ಮ್ಯಾನ್ಮಾರ್ ಪ್ರಜೆಗಳು ಸಿಬ್ಬಂದಿಗಳಾಗಿದ್ದರು. ಹಡುಗು ಮರ ತುಂಬಿಕೊಂಡು ಮಲೇಷ್ಯಾದಿಂದ ದಕ್ಷಿಣ ಕೊರಿಯಾದ ಇಂಜಿಯಾನ್ ಗೆ ತೆರಳುತಿತ್ತು ಎನ್ನಲಾಗಿದೆ. ರಕ್ಷಿಸಲ್ಪಟ್ಟ ಇಬ್ಬರನ್ನು ನಾಗಸಾಕಿ ವಿಮಾನ ನಿಲ್ದಾಣದ ಮೂಲಕ ಆಸ್ಪತ್ರೆಗೆ ಕಳುಹಿಸಿದ ನಂತರ ಮೃತಪಟ್ಟಿದ್ದಾರೆ ಎಂದು ದೃಢಪಡಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ