ಭಾರತ-ಫ್ರಾನ್ಸ್ ದ್ವಿಪಕ್ಷೀಯ ಮಾತುಕತೆ: ಪರಮಾಣು ಶಕ್ತಿ, ರಕ್ಷಣಾ ಕ್ಷೇತ್ರದಲ್ಲಿ ಕಾರ್ಯತಂತ್ರ ಪಾಲುದಾರಿಕೆ ಕುರಿತು ಚರ್ಚೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್  ಶುಕ್ರವಾರ ಪ್ಯಾರಿಸ್‌ನ ಎಲಿಸೀ ಪ್ಯಾಲೇಸ್‌ನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು, ಪರಮಾಣು ಶಕ್ತಿ, ರಕ್ಷಣೆ ಮತ್ತು ಮುಂದಿನ 25 ವರ್ಷಗಳಲ್ಲಿ ಭಾರತ-ಫ್ರಾನ್ಸ್ ಕಾರ್ಯತಂತ್ರಪಾಲುದಾರಿಕೆಯ ಮಾರ್ಗಸೂಚಿ ಕುರಿತು ಚರ್ಚೆ ನಡೆಸಿದರು.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಪ್ರಧಾನಿ ಮೋದಿ
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಪ್ರಧಾನಿ ಮೋದಿ

ಪ್ಯಾರಿಸ್: ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್  ಶುಕ್ರವಾರ ಪ್ಯಾರಿಸ್‌ನ ಎಲಿಸೀ ಪ್ಯಾಲೇಸ್‌ನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು, ಪರಮಾಣು ಶಕ್ತಿ, ರಕ್ಷಣೆ ಮತ್ತು ಮುಂದಿನ 25 ವರ್ಷಗಳಲ್ಲಿ ಭಾರತ-ಫ್ರಾನ್ಸ್ ಕಾರ್ಯತಂತ್ರಪಾಲುದಾರಿಕೆಯ ಮಾರ್ಗಸೂಚಿ ಕುರಿತು ಚರ್ಚೆ ನಡೆಸಿದರು.

ಎರಡು ದಿನಗಳ ಅಧಿಕೃತ ಭೇಟಿಯಲ್ಲಿರುವ ಪ್ರಧಾನಿ ಮೋದಿ ಅವರಿಗೆ ಎಲಿಸೀ ಅರಮನೆಯಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಆತ್ಮೀಯ ಸ್ವಾಗತ ದೊರೆಯಿತು. ನಂತರ ಉಭಯ ನಾಯಕರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬಾಸ್ಟಿಲ್ ಡೇ ಮಿಲಿಟರಿ ಪರೇಡ್‌ನಲ್ಲಿ ಭಾರತೀಯ ಸೇನಾ ತುಕಡಿ ನೋಡಿ ಸಂತೋಷವಾಯಿತು. ಪರೇಡ್ ನಲ್ಲಿ ಪಂಜಾಬ್ ರೆಜಿಮೆಂಟ್ ನೋಡಲು ಹೆಮ್ಮೆಯಾಯಿತು. ಐತಿಹಾಸಿಕ ನಂಬಿಕೆಯ ಆಧಾರದ ಮೇಲೆ ನಾವು ಮುನ್ನಡೆಯುತ್ತಿದ್ದೇವೆ. ಜಾಗತಿಕ ಬಿಕ್ಕಟ್ಟುಗಳಿಗೆ ಒಟ್ಟಾಗಿ ನಾವು ಪರಿಹಾರಗಳನ್ನು ಕಂಡುಕೊಳ್ಳಬಹುದು ಎಂದು ಮ್ಯಾಕ್ರನ್ ಹೇಳಿದರು.

ಫ್ರೆಂಚ್ ರಾಷ್ಟ್ರೀಯ ದಿನಾಚರಣೆಯ ಸಂದರ್ಭದಲ್ಲಿ ಭಾರತೀಯ ಸೇನೆಯ ಪಥ ಸಂಚಲನದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ಅತಿಥಿಯಾಗಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಅವರೊಂದಿಗೆ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಫ್ರೆಂಚ್ ಜೆಟ್‌ಗಳೊಂದಿಗೆ ಭಾರತೀಯ ವಾಯುಪಡೆಯ (ಐಎಎಫ್) ರಫೇಲ್ ಯುದ್ಧ ವಿಮಾನಗಳ ಪ್ರದರ್ಶನ ಗಮನ ಸೆಳೆಯಿತು.

2030 ರ ವೇಳೆಗೆ 30,000 ಕ್ಕೂ ಹೆಚ್ಚು ಫ್ರೆಂಚ್ ವಿದ್ಯಾರ್ಥಿಗಳನ್ನು ಭಾರತಕ್ಕೆ ಕಳುಹಿಸುವ ಗುರಿ ಹೊಂದಿದ್ದೇವೆ. ಫ್ರಾನ್ಸ್‌ನಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಆಕಾಂಕ್ಷೆ ಹೊಂದಿರುವ ಯುವ ಭಾರತೀಯರಿಗೆ, ನಾವು ಅನುಕೂಲಕರ ವೀಸಾ ನೀತಿ ಜಾರಿಗೊಳಿಸಲು ಬಯಸಿರುವುದಾಗಿ ಮ್ಯಾಕ್ರನ್ ಹೇಳಿದರು. 

ನಂತರ ಮಾತನಾಡಿದ ಪ್ರಧಾನಿ ಮೋದಿ, ಫ್ರಾನ್ಸ್ ಅನ್ನು ಸಹಜ ಪಾಲುದಾರ ಎಂದು ಕರೆದರು. ಮುಂದಿನ 25 ವರ್ಷಗಳಲ್ಲಿ ಭಾರತ-ಫ್ರಾನ್ಸ್  ಸಂಬಂಧಗಳನ್ನು ಬಲಪಡಿಸುವ ಮಾರ್ಗಸೂಚಿಯನ್ನು ದಿಟ್ಟ ಮತ್ತು ಮಹತ್ವಾಕಾಂಕ್ಷೆಯ ಗುರಿಗಳೊಂದಿಗೆ ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com