ಪ್ರಾಂಕ್ ಮಾಡಿದ್ದಕ್ಕೆ 3 ಯುವಕರ ಹತ್ಯೆ: ಅಮೇರಿಕಾದಲ್ಲಿ ಭಾರತೀಯ ಮೂಲದ ವ್ಯಕ್ತಿಯ ಬಂಧನ

ತಮಗೆ ಪ್ರಾಂಕ್ ಮಾಡಿದ 3 ಯುವಕರ ಹತ್ಯೆ ಮಾಡಿದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಅಮೇರಿಕಾದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಪೆರೋಲ್ ರಹಿತ ಜೈಲು ರಹಿತ ಶಿಕ್ಷೆ ವಿಧಿಸಲಾಗಿದೆ 
ಆರೋಪಿ ಬಂಧನ (ಸಾಂದರ್ಭಿಕ ಚಿತ್ರ)
ಆರೋಪಿ ಬಂಧನ (ಸಾಂದರ್ಭಿಕ ಚಿತ್ರ)

ನ್ಯೂಯಾರ್ಕ್: ತಮಗೆ ಪ್ರಾಂಕ್ ಮಾಡಿದ 3 ಯುವಕರ ಹತ್ಯೆ ಮಾಡಿದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಅಮೇರಿಕಾದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಪೆರೋಲ್ ರಹಿತ ಜೈಲು ರಹಿತ ಶಿಕ್ಷೆ ವಿಧಿಸಲಾಗಿದೆ 

2020 ರಲ್ಲಿ ಡೋರ್ ಬೆಲ್ ಪ್ರಾಂಕ್ ಮಾಡಿದ 16 ವರ್ಷದ ಯುವಕರ ಮೇಲೆ ಉದ್ದೇಶ ಪೂರ್ವಕವಾಗಿ ಕಾರು ಹರಿಸಿದ್ದ ಪರಿಣಾಮ ಮೂವರು ಯುವಕರು ಸಾವನ್ನಪ್ಪಿದ್ದರು ಹಾಗೂ ಇನ್ನೂ ಮೂವರು ಯುವಕರಿಗೆ ತೀವ್ರ ಗಾಯಗಳಾಗಿದ್ದವು.

ಅನುರಾಗ್ ಚಂದ್ರ ಎಂಬುವವರ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪೆರೋಲ್ ರಹಿತ ಜೈಲು ರಹಿತ ಶಿಕ್ಷೆ ವಿಧಿಸಲಾಗಿದೆ. 

ರಿವರ್ಸೈಡ್ ಕೌಂಟಿ ಜ್ಯೂರಿ ಕೇವಲ 3 ಗಂಟೆಗಳಲ್ಲಿ ಚಂದ್ರ ವಿರುದ್ಧದ ಪ್ರಕರಣದಲ್ಲಿ ತೀರ್ಪು ಪ್ರಕಟಿಸಿದೆ. ಅನುರಾಗ್ ಚಂದ್ರ ಉದ್ದೇಶಪೂರ್ವಕವಾಗಿ ಕಾರನ್ನು ಯುವಕರ ಮೇಲೆ ಹರಿಸಿದ್ದಾರೆ ಎಂಬುದು ತನಿಖೆಯಲ್ಲಿ ಸಾಬೀತಾಗಿತ್ತು. 2020 ರ ಜನವರಿ 19 ರಂದು ಟೆಮೆಸ್ಕಲ್ ಕಣಿವೆ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com