ಹಾಸ್ಯ ಚಕ್ರವರ್ತಿ ಚಾರ್ಲಿ ಚಾಪ್ಲಿನ್ ಪುತ್ರಿ ಜೋಸೆಫೀನ್ ಚಾಪ್ಲಿನ್ ವಿಧಿವಶ

ಅಮೆರಿಕ ಮೂಲದ ಮೀಡಿಯಾ ಔಟ್ ಲೆಟ್ ವರೈಟಿ ಪ್ರಕಾರ, ಚಾಪ್ಲಿನ್ ಜುಲೈ 13 ರಂದು ಪ್ಯಾರಿಸ್ನಲ್ಲಿ ನಿಧನರಾದರು ಎಂದು ಅವರ ಕುಟುಂಬ ತಿಳಿಸಿದೆ.  ಜೋಸೆಫೀನ್ ಅವರು ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಜೋಸೆಫೀನ್ ಚಾಪ್ಲಿನ್
ಜೋಸೆಫೀನ್ ಚಾಪ್ಲಿನ್
Updated on

ವಾಷಿಂಗ್ಟನ್: ಕಾಮಿಡಿ ದಂತಕಥೆ ಚಾರ್ಲಿ ಚಾಪ್ಲಿನ್ ಅವರ ಪುತ್ರಿ ಹಾಗೂ ನಟಿ ಜೋಸೆಫೀನ್ ಚಾಪ್ಲಿನ್ ಅವರು 74 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಅಮೆರಿಕ ಮೂಲದ ಮೀಡಿಯಾ ಔಟ್ ಲೆಟ್ ವರೈಟಿ ಪ್ರಕಾರ, ಚಾಪ್ಲಿನ್ ಜುಲೈ 13 ರಂದು ಪ್ಯಾರಿಸ್ನಲ್ಲಿ ನಿಧನರಾದರು ಎಂದು ಅವರ ಕುಟುಂಬ ತಿಳಿಸಿದೆ.  ಜೋಸೆಫೀನ್ ಅವರು ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.

1949ರ ಮಾರ್ಚ್ 28ರಂದು ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದಲ್ಲಿ ಜನಿಸಿದ ಜೋಸೆಫೀನ್, ಚಾರ್ಲಿ ಚಾಪ್ಲಿನ್ ಮತ್ತು ಊನಾ ದಂಪತಿಗೆ ಜನಿಸಿದ ಎಂಟು ಮಕ್ಕಳಲ್ಲಿ ಮೂರನೆಯವರಾಗಿದ್ದಾರೆ. 1952ರಲ್ಲಿ ಚಾಪ್ಲಿನ್‌ ಅವರ ‘ಲೈಮ್‌ಲೈಟ್’ ಚಿತ್ರದಲ್ಲಿ ನಟಿಸುವ ಮೂಲಕ ಜೋಸೆಫೀನ್ ಸಿನಿಮಾ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಬಳಿಕ ಅವರು ಅನೇಕ ಚಿತ್ರಗಳಲ್ಲಿ ನಟಿಸಿದ್ದರು.

1972ರಲ್ಲಿ ಪಿಯರ್ ಪಾವೊಲೊ ಪಸೊಲಿನಿಯ ಪ್ರಶಸ್ತಿ ವಿಜೇತ 'ದಿ ಕ್ಯಾಂಟರ್ಬರಿ ಟೇಲ್ಸ್' ಮತ್ತು ರಿಚರ್ಡ್ ಬಾಲ್ಡುಸಿಯ ‘ಎಲ್’ ಒಡೆರ್ ಡೆಸ್ ಫೌವ್ಸ್ ಚಿತ್ರಗಳಲ್ಲಿ ಅಭಿನಯಿಸಿದ್ದರು. ಆದೇ ವರ್ಷ ಮೆನಾಹೆಮ್ ಗೋಲನ್ ನಾಟಕ ‘ಎಸ್ಕೇಪ್ ಟು ದಿ ಸನ್’ ಸೋವಿಯತ್ ಯೂನಿಯನ್ ಬಗ್ಗೆ ಲಾರೆನ್ಸ್ ಹಾರ್ವೆ ಅವರೊಂದಿಗೆ ನಟಿಸಿದ್ದರು. ಬಳಿಕ 1984ರಲ್ಲಿ ಕೆನಡಾದ ನಾಟಕ ‘ದಿ ಬೇ ಬಾಯ್’ನಲ್ಲಿ ನಟಿಸಿದ್ದರು.

ಮಾರ್ಚ್ 28, 1949 ರಂದು ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದಲ್ಲಿ ಜನಿಸಿದ ಜೋಸೆಫೀನ್ ಚಾಪ್ಲಿನ್ ಅವರು ಚಾರ್ಲಿ ಚಾಪ್ಲಿನ್ ಮತ್ತು ಊನಾ ಓ'ನೀಲ್ ದಂಪತಿಗೆ ಜನಿಸಿದ ಎಂಟು ಮಕ್ಕಳಲ್ಲಿ ಮೂರನೆಯವರಾಗಿದ್ದರು. ಜೋಸೆಫೀನ್ ತನ್ನ ತಂದೆಯೊಂದಿಗೆ 1952 ಲೈಮ್ಲೈಟ್ ನಲ್ಲಿ ಚಿಕ್ಕ ವಯಸ್ಸಿನಲ್ಲಿ ನಟಿಸುವ ಮೂಲಕ ತನ್ನ ವೃತ್ತಿಜೀವನವನ್ನು ಆರಂಭಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com