2024 ರ ಅಮೇರಿಕಾ ಚುನಾವಣೆ ಬಗ್ಗೆ ಭವಿಷ್ಯ ನುಡಿದ ಜಾವೇದ್ ಅಖ್ತರ್

ಸಾಹಿತಿ ಜಾವೇದ್ ಅಖ್ತರ್ ಅಖ್ತರ್ ಅಮೇರಿಕಾದ ಅಧ್ಯಕ್ಷೀಯ ಚುನಾವಣೆ ಬಗ್ಗೆ ಭವಿಷ್ಯ ನುಡಿದಿದ್ದು, 2024 ರಲ್ಲಿ ಅಮೇರಿಕಾದ ಮಾಜಿ ಪ್ರಥಮ ಮಹಿಳೆ ಮಿಷಿಲ್ ಒಬಾಮ ಸ್ಪರ್ಧಿಸಿದರೆ ಮಾತ್ರ ಡೆಮಾಕ್ರಾಟ್ ಪಕ್ಷ ಗೆಲ್ಲಲು ಸಾಧ್ಯ ಎಂದು ಹೇಳಿದ್ದಾರೆ.
ಜಾವೇದ್ ಅಖ್ತರ್
ಜಾವೇದ್ ಅಖ್ತರ್
Updated on

ವಾಷಿಂಗ್ ಟನ್:  ಸಾಹಿತಿ-ಸ್ಕ್ರಿಪ್ಟ್ ಬರಹಗಾರ ಜಾವೇದ್ ಅಖ್ತರ್ ಅಖ್ತರ್ ಅಮೇರಿಕಾದ ಅಧ್ಯಕ್ಷೀಯ ಚುನಾವಣೆ ಬಗ್ಗೆ ಭವಿಷ್ಯ ನುಡಿದಿದ್ದು,  2024 ರಲ್ಲಿ ಅಮೇರಿಕಾದ ಮಾಜಿ ಪ್ರಥಮ ಮಹಿಳೆ ಮಿಷಿಲ್ ಒಬಾಮ ಸ್ಪರ್ಧಿಸಿದರೆ ಮಾತ್ರ ಡೆಮಾಕ್ರಾಟ್ ಪಕ್ಷ ಗೆಲ್ಲಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಾವೇದ್ ಅಖ್ತರ್ ಅಮೇರಿಕಾದಲ್ಲಿದ್ದು, ಆ ದೇಶದಲ್ಲಿ ಹಲವರ ಅಭಿಪ್ರಾಯಪ ಕೇಳಿದ ಬಳಿಕ ತಮಗೆ ಈ ಅಂಶ ಮನವರಿಕೆಯಾಗಿದೆ ಎಂದು ಹೇಳಿದ್ದಾರೆ.

ಮಿಷಲ್ ಒಬಾಮ ವಕೀಲರಾಗಿದ್ದು, ಬರಹಗಾರ್ತಿಯಾಗಿಯೂ ಹೆಸರು ಗಳಿಸಿದ್ದಾರೆ. The Light We Carry and Becoming ಎಂಬುದು ಅವರ ಜನಪ್ರಿಯ ಪುಸ್ತಕವಾಗಿದೆ. ನಾನು ಈಗ ಅಮೇರಿಕಾದಲ್ಲಿರುವ ಭಾರತೀಯ ಲೇಖಕನಾಗಿದ್ದೇನೆ. ನಾನು ಇಲ್ಲಿ ಹಲವು ನಗರಗಳಿಗೆ ಭೇಟಿ ನೀಡಿದ್ದೇನೆ. ಅಧ್ಯಕ್ಷೀಯ ಚುನಾವಣೆಗೆ ಮಿಷೆಲ್ ಒಬಾಮ ಸ್ಪರ್ಧಿಸಿದರೆ ಮಾತ್ರ ಡೆಮಾಕ್ರಾಟ್ ಪಕ್ಷ ಗೆಲ್ಲಲು ಸಾಧ್ಯ ಎಂದು ಅಖ್ತರ್ ಟ್ವೀಟ್ ಮಾಡಿದ್ದಾರೆ.

ಅಮೇರಿಕ ಅಧ್ಯಕ್ಷೀಯ ಚುನಾವಣೆ ನವೆಂಬರ್ 2024 ರಲ್ಲಿ ನಡೆಯಲಿದೆ ಮತ್ತು ಅಧ್ಯಕ್ಷ ಜೋ ಬಿಡೆನ್  ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೊಂದಿಗೆ ಮರುಚುನಾವಣೆಗೆ ಸ್ಪರ್ಧಿಸುವುದಾಗಿ ಏಪ್ರಿಲ್‌ನಲ್ಲಿ ಘೋಷಿಸಿದ್ದರು. ಲೇಖಕಿ ಮತ್ತು ಆಧ್ಯಾತ್ಮಿಕ ಸಲಹೆಗಾರರಾದ ಮೇರಿಯಾನ್ನೆ ವಿಲಿಯಮ್ಸನ್ ಮತ್ತು ಪ್ರಸಿದ್ಧ ಲಸಿಕೆ ವಿರೋಧಿ ಕಾರ್ಯಕರ್ತ ಮತ್ತು ಅಮೇರಿಕಾದ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರ ಸೋದರಳಿಯ ರಾಬರ್ಟ್ ಎಫ್ ಕೆನಡಿ ಜೂನಿಯರ್ ತಮ್ಮ ಉಮೇದುವಾರಿಕೆಯನ್ನು ಘೋಷಿಸಿದ ಇತರ ಇಬ್ಬರು ಡೆಮೋಕ್ರಾಟ್‌ ಗಳಾಗಿದ್ದಾರೆ. 

ಮತ್ತೊಂದೆಡೆ ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com