ಯುನೈಟೆಡ್ ಸ್ಟೇಟ್ಸ್: ಅಮೆರಿಕದಲ್ಲಿ ಮತ್ತೊಂದು ಶೂಟೌಟ್ ಪ್ರಕರಣ ನಡೆದಿದೆ. ಇತ್ತೀಚೆಗೆ ಪ್ರೌಢಶಾಲೆಯ ಘಟಿಕೋತ್ಸವ ಸಮಾರಂಭ ಮುಕ್ತಾಯಗೊಂಡ ಡೌನ್‌ಟೌನ್ ಥಿಯೇಟರ್‌ನ ಹೊರಗೆ ನಿನ್ನೆ ಮಂಗಳವಾರ ಗುಂಡೇಟಿನಿಂದ ಇಬ್ಬರು ಮೃತಪಟ್ಟಿದ್ದು ಇನ್ನು ಐವರ ಸ್ಥಿತಿ ಚಿಂತಾಜನಕವಾಗಿದೆ.
ವರ್ಜೀನಿಯಾ ಕಾಮನ್ ವೆಲ್ತ್ ವಿಶ್ವವಿದ್ಯಾಲಯದ ಹತ್ತಿರ ಹೈಸ್ಕೂಲ್ ಗ್ರಾಜುವೇಶನ್ ಸಮಾರಂಭದ ಬಳಿಕ ಈ ದುರ್ಘಟನೆ ನಡೆದಿದೆ.
ಘಟನೆಯ ನಂತರ ಇಬ್ಬರು ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮಧ್ಯಂತರ ರಿಚ್ಮಂಡ್ ಪೊಲೀಸ್ ಮುಖ್ಯಸ್ಥ ರಿಕ್ ಎಡ್ವರ್ಡ್ಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪದವಿ ಪ್ರದಾನ ನಡೆಯುತ್ತಿದ್ದ ಥಿಯೇಟರ್‌ನ ಒಳಗಿದ್ದ ಅಧಿಕಾರಿಗಳು ಗುಂಡೇಟಿನ ಶಬ್ದವನ್ನು ಕೇಳಿದರು, ಹೊರಗೆ ಹೋಗಿ ನೋಡಿದಾಗ ಗುಂಡೇಟಿನಿಂದ ಗಾಯಗೊಂಡು ಅನೇಕರು ಬಿದ್ದಿದ್ದರು ಎಂದು ಎಡ್ವರ್ಡ್ಸ್ ಹೇಳಿದರು. ಪೊಲೀಸರ ಪ್ರಕಾರ, ಕನಿಷ್ಠ 12 ಮಂದಿ ಗಾಯಗೊಂಡಿದ್ದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರು ಹಲವು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
Advertisement