ಸಂಸತ್‌ ಸದಸ್ಯತ್ವಕ್ಕೆ ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಹಠಾತ್ ರಾಜಿನಾಮೆ!

ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ತಮ್ಮ ಸಂಸತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ ನನ್ನ ಸಂಸತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಬ್ರಿಟೀಷ್‌ ಸಂಸತ್‌ಗೆ ಬರೆದಿರುವ ಪತ್ರದಲ್ಲಿ ಜಾನ್ಸನ್‌ ತಿಳಿಸಿದ್ದಾರೆ. ತೆರವಾದ ಸಂಸತ್‌ ಸ್ಥಾನಕ್ಕೆ ಮರು ಚುನಾವಣೆ ನಡೆಯುವ ಸಾಧ್ಯತೆಯಿದೆ.
ಬೋರಿಸ್ ಜಾನ್ಸನ್
ಬೋರಿಸ್ ಜಾನ್ಸನ್

ಲಂಡನ್‌: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ತಮ್ಮ ಸಂಸತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ ನನ್ನ ಸಂಸತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಬ್ರಿಟೀಷ್‌ ಸಂಸತ್‌ಗೆ ಬರೆದಿರುವ ಪತ್ರದಲ್ಲಿ ಜಾನ್ಸನ್‌ ತಿಳಿಸಿದ್ದಾರೆ. ತೆರವಾದ ಸಂಸತ್‌ ಸ್ಥಾನಕ್ಕೆ ಮರು ಚುನಾವಣೆ ನಡೆಯುವ ಸಾಧ್ಯತೆಯಿದೆ.

ಕೋವಿಡ್‌ ನಿರ್ವಹಣೆ ವಿಚಾರದಲ್ಲಿ ಜಾನ್ಸನ್‌ ಆಡಳಿತ ಅವಧಿಯಲ್ಲಿ ಆಗಿರುವ ಲೋಪಗಳ ಕುರಿತು ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಅಲ್ಲದೇ ಕೋವಿಡ್‌ ವಿಚಾರವಾಗಿ ಹೌಸ್‌ ಆಫ್‌ ಕಾಮನ್ಸ್‌ ಗೆ ಸೂಕ್ತ ಮಾಹಿತಿಗಳನ್ನು ನೀಡದೇ ದಿಕ್ಕು ತಪ್ಪಿಸಿದ್ದಾರೆ ಎನ್ನುವ ಆರೋಪಗಳೂ ವ್ಯಕ್ತವಾಗಿದ್ದವು. ಆನಂತರ ಅವರ ವಿರುದ್ದ ತನಿಖೆಗೂ ಆದೇಶಿಸಲಾಗಿತ್ತು. ಸದ್ಯ ಸಂಸತ್ತಿನ ಹಕ್ಕು ಬಾಧ್ಯತೆಗಳ ಸಮಿತಿ ವಿಚಾರಣೆಗೆ ಜಾನ್ಸನ್‌ಗೆ ನೊಟೀಸ್‌ ಜಾರಿ ಮಾಡಿದೆ.

ಸಂಸತ್‌ ಅನ್ನು ಬಿಡುತ್ತಿರುವುದಕ್ಕೆ ಬೇಸರವಾಗುತ್ತಿದೆ. ಕೆಲವರು ನಾನು ಅಧಿಕಾರ ಬಿಡುವಂತೆ ಮಾಡಿದ್ದಾರೆ. ಯಾವುದೇ ಸಾಕ್ಷಿಗಳಿಲ್ಲದೇ ಕೆಲವರು ನನ್ನ ವಿರುದ್ದ ಹಲವು ವಿಷಯ ಪ್ರತಿಪಾದಿಸಿದರು. ಕನ್ಸರ್‌ವೇಟಿವ್‌ ಪಕ್ಷದ ಅನುಮತಿಯೂ ಇಲ್ಲದೇ ನಿರ್ಣಯ ಕೈಗೊಂಡು ನನ್ನನ್ನು ಏಕಾಂಗಿ ಮಾಡಲು ಪ್ರಯತ್ನಿಸಿದರು ಎಂದು ಜಾನ್ಸನ್‌ ಹೇಳಿದ್ದಾರೆ.

ಬ್ರಿಟೀಷ್‌ ಸಂಸದೀಯ ಹಕ್ಕು ಬಾಧ್ಯತಾ ಸಮಿಯು ನೀಡಿರುವ ನೊಟೀಸ್‌ ಬಂದಿದೆ. ನನ್ನನ್ನು ಸಂಸತ್ತಿನಿಂದ ಹೊರಹಾಕಬೇಕು ಎನ್ನುವ ಉದ್ದೇಶದಿಂದಲೇ ನೊಟೀಸ್‌ ಜಾರಿ ಮಾಡಿದ್ದಾರೆ. ಸಾಕ್ಷಿಗಳನ್ನು ಪರಿಶೀಲಿಸುವ ಮುನ್ನವೇ ನನ್ನ ಬಗ್ಗೆ ತೀರ್ಮಾನಗಳನ್ನು ಕೈಗೊಂಡಂತಿದೆ ಎಂದು ಜಾನ್ಸನ್‌ ಆರೋಪಿಸಿದ್ದಾರೆ.

ನಾನು ಸುಳ್ಳು ಹೇಳಿಲ್ಲ, ತಮ್ಮ ವಿರುದ್ಧ ಪಿತೂರಿ ನಡೆದಿದೆ ಎಂದು 58 ವರ್ಷದ ಬೋರಿಸ್ ಜಾನ್ಸನ್ ಬಿಡುಗಡೆ ಮಾಡಿರುವ ಪ್ರಕಟಣೆ ಹೇಳಿದೆ. ತನಿಖಾ ಸಂಸ್ಥೆಯು ಸತ್ಯಾಂಶವನ್ನು ಪರಿಗಣಿಸದೇ ಯಾವುದೇ ಪುರಾವೆಯಿಲ್ಲದೆ ನನ್ನನ್ನು ತಪ್ಪಿತಸ್ಥನೆಂದು ಸಾಬೀತು ಮಾಡಲು ಹೊರಟಿದೆ ಎಂದು ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com