ಮಾಜಿ ಸ್ಯಾಮ್‌ಸಂಗ್ ಎಕ್ಸಿಕ್ಯೂಟಿವ್ ವಿರುದ್ಧ ಚೀನಾ ಫ್ಯಾಕ್ಟರಿಗಾಗಿ ಚಿಪ್ ತಂತ್ರಜ್ಞಾನ ಕದ್ದ ಆರೋಪ!

ಚೀನಾದಲ್ಲಿ ಕಾಪಿಕ್ಯಾಟ್ ಚಿಪ್ ಫ್ಯಾಕ್ಟರಿಯನ್ನು ಸ್ಥಾಪಿಸಲು ನೂರಾರು ಮಿಲಿಯನ್ ಡಾಲರ್ ಮೌಲ್ಯದ ಕಂಪನಿಯ ರಹಸ್ಯಗಳನ್ನು ಕದ್ದಿದ್ದಕ್ಕಾಗಿ ದಕ್ಷಿಣ ಕೊರಿಯಾದ ಮಾಜಿ ಸ್ಯಾಮ್‌ಸಂಗ್ ಎಕ್ಸಿಕ್ಯೂಟಿವ್ ವಿರುದ್ಧ ಆರೋಪ ಹೊರಿಸಲಾಗಿದೆ.
ಸ್ಯಾಮ್‌ಸಂಗ್
ಸ್ಯಾಮ್‌ಸಂಗ್

ಸಿಯೋಲ್: ಚೀನಾದಲ್ಲಿ ಕಾಪಿಕ್ಯಾಟ್ ಚಿಪ್ ಫ್ಯಾಕ್ಟರಿಯನ್ನು ಸ್ಥಾಪಿಸಲು ನೂರಾರು ಮಿಲಿಯನ್ ಡಾಲರ್ ಮೌಲ್ಯದ ಕಂಪನಿಯ ರಹಸ್ಯಗಳನ್ನು ಕದ್ದಿದ್ದಕ್ಕಾಗಿ ದಕ್ಷಿಣ ಕೊರಿಯಾದ ಮಾಜಿ ಸ್ಯಾಮ್‌ಸಂಗ್ ಎಕ್ಸಿಕ್ಯೂಟಿವ್ ವಿರುದ್ಧ ಆರೋಪ ಹೊರಿಸಲಾಗಿದೆ.

ಸೆಮಿಕಂಡಕ್ಟರ್‌ಗಳ ವಿಚಾರ ಅಮೆರಿಕಾ ಮತ್ತು ಚೀನಾ ನಡುವೆ ಫ್ಲ್ಯಾಷ್‌ಪಾಯಿಂಟ್ ಸಮಸ್ಯೆಯಾಗಿ ಮಾರ್ಪಟ್ಟಿವೆ. ಈ ನಡುವೆ 65 ವರ್ಷದ ಮಾಜಿ ಸ್ಯಾಮ್‌ಸಂಗ್ ಉದ್ಯೋಗಿ 2018 ಮತ್ತು 2019 ರಿಂದ ಕಂಪನಿಯ ಫ್ಯಾಕ್ಟರಿ ಬ್ಲೂಪ್ರಿಂಟ್‌ಗಳು ಮತ್ತು ಕ್ಲೀನ್-ರೂಮ್ ವಿನ್ಯಾಸಗಳನ್ನು ಕದ್ದಿದ್ದಾರೆ ಎಂದು ದಕ್ಷಿಣ ಕೊರಿಯಾದ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ.

ಚೀನಾದ ನಗರವಾದ ಕ್ಸಿಯಾನ್‌ನಲ್ಲಿ ಕಾಪಿಕ್ಯಾಟ್ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು ಶಂಕಿತರು ವಿಫಲ ಪ್ರಯತ್ನ ನಡೆಸಿದ್ದಾರೆ. ಅಲ್ಲಿ ಸ್ಯಾಮ್‌ಸಂಗ್ ಈಗಾಗಲೇ ಚಿಪ್ ಫ್ಯಾಕ್ಟರಿಯನ್ನು ಹೊಂದಿದೆ ಎಂದು ಸುವಾನ್ ಜಿಲ್ಲಾ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.

ಶಂಕಿತ ವ್ಯಕ್ತಿ ದಕ್ಷಿಣ ಕೊರಿಯಾದಿಂದ 'ನ್ಯಾಷನಲ್ ಕೋರ್ ಟೆಕ್ನಾಲಜಿ' ಎಂದು ವರ್ಗೀಕರಿಸಿದ ವಸ್ತುಗಳನ್ನು ಕದ್ದಿದ್ದಾನೆ. ಇದು ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕತೆಯ ಮೇಲೆ ಸಂಭಾವ್ಯ ಪರಿಣಾಮ ಬೀರುತ್ತದೆ. ಇದನ್ನು ವಿದೇಶದಲ್ಲಿ ಬಹಿರಂಗಪಡಿಸಿದರೆ ದೊಡ್ಡ ಹಾನಿ ಸಂಭವಿಸುತ್ತದೆ. ಶಂಕಿತ ವ್ಯಕ್ತಿ ಕೆಲವು ಸಮಯದಿಂದ ಬಂಧನದಲ್ಲಿದ್ದು ಅವರ ವಿರುದ್ಧ ಸೋಮವಾರ ಔಪಚಾರಿಕವಾಗಿ ಆರೋಪ ಹೊರಿಸಲಾಯಿತು ಎಂದು ಪ್ರಾಸಿಕ್ಯೂಟರ್ಗಳು ಹೇಳಿದರು.

ಶಂಕಿತ ಆರೋಪಿ ದಶಕಗಳಿಂದ ಉದ್ಯಮದಲ್ಲಿ ಕೆಲಸ ಮಾಡಿದ್ದು 'ಸೆಮಿಕಂಡಕ್ಟರ್ ತಯಾರಿಕೆಯಲ್ಲಿ ಉನ್ನತ ತಜ್ಞ'ರಾಗಿದ್ದರು ಎಂದು ವಿವರಿಸಿದರು. ದಕ್ಷಿಣ ಕೊರಿಯಾದ ಅಧಿಕಾರಿಗಳು ಕಳ್ಳತನದಲ್ಲಿ ಗುರಿಪಡಿಸಿದ ಮಾಹಿತಿಯು ಸ್ಯಾಮ್‌ಸಂಗ್‌ಗೆ ಕನಿಷ್ಠ 236 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ್ದಾಗಿದೆ ಎಂದು ಹೇಳಿದರು.

'ಇದು ಗಂಭೀರ ಅಪರಾಧವಾಗಿದ್ದು, ಚಿಪ್ ಉತ್ಪಾದನೆಗೆ ಸ್ಪರ್ಧೆಯು ಪ್ರತಿದಿನ ತೀವ್ರಗೊಳ್ಳುತ್ತಿರುವ ಸಮಯದಲ್ಲಿ ದೇಶೀಯ ಸೆಮಿಕಂಡಕ್ಟರ್ ಉದ್ಯಮದ ಅಡಿಪಾಯವನ್ನು ಅಲುಗಾಡಿಸುವ ಮೂಲಕ ನಮ್ಮ ಆರ್ಥಿಕ ಭದ್ರತೆಯ ಮೇಲೆ ಪ್ರಚಂಡ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಪ್ರಾಸಿಕ್ಯೂಟರ್ಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com