ಜೂನ್ 24ಕ್ಕೆ ಪ್ರಧಾನಿ ಮೋದಿ ಮೊದಲ ಬಾರಿಗೆ ಈಜಿಪ್ಟ್ ಪ್ರವಾಸ

ಪ್ರಧಾನಿ ನರೇಂದ್ರ ಮೋದಿ ಎರಡು ರಾಷ್ಟ್ರಗಳ ವಿದೇಶ ಪ್ರವಾಸ ಸಂದರ್ಭದಲ್ಲಿ ಅಮೆರಿಕ  ನಂತರ ಈಜಿಪ್ಟ್ ಗೆ  ಭೇಟಿ ನೀಡಲಿದ್ದಾರೆ. ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರ ಆಹ್ವಾನದ ಮೇರೆಗೆ ಮೋದಿ ಇದೇ ಮೊದಲ ಬಾರಿಗೆ ಈಜಿಪ್ಟ್ ಗೆ ಭೇಟಿ ನೀಡುತ್ತಿದ್ದು, ಜೂನ್ 24 ರಿಂದ 25ಕ್ಕೆ ಪ್ರಧಾನಿ ಮೋದಿ ಕೈರೋಗೆ  ಪ್ರಯಾಣಿಸಲಿದ್ದಾರೆ.
ಈಜಿಪ್ಟ್ ಅಧ್ಯಕ್ಷ ಫತ್ತಾಹ್ ಎಲ್ ಸಿಸಿ ಅವರೊಂದಿಗೆ ಪ್ರಧಾನಿ ಮೋದಿ
ಈಜಿಪ್ಟ್ ಅಧ್ಯಕ್ಷ ಫತ್ತಾಹ್ ಎಲ್ ಸಿಸಿ ಅವರೊಂದಿಗೆ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎರಡು ರಾಷ್ಟ್ರಗಳ ವಿದೇಶ ಪ್ರವಾಸ ಸಂದರ್ಭದಲ್ಲಿ ಅಮೆರಿಕ  ನಂತರ ಈಜಿಪ್ಟ್ ಗೆ  ಭೇಟಿ ನೀಡಲಿದ್ದಾರೆ. ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರ ಆಹ್ವಾನದ ಮೇರೆಗೆ ಮೋದಿ ಇದೇ ಮೊದಲ ಬಾರಿಗೆ ಈಜಿಪ್ಟ್ ಗೆ ಭೇಟಿ ನೀಡುತ್ತಿದ್ದು, ಜೂನ್ 24 ರಿಂದ 25ಕ್ಕೆ ಪ್ರಧಾನಿ ಮೋದಿ ಕೈರೋಗೆ ಪ್ರಯಾಣಿಸಲಿದ್ದಾರೆ.

ಜನವರಿಯಲ್ಲಿ ಭಾರತದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಫತ್ತಾಹ್ ಎಲ್ - ಸಿಸಿ ತಮ್ಮ ದೇಶಕ್ಕೆ ಆಗಮಿಸುವಂತೆ ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಿದ್ದರು."ಅಧ್ಯಕ್ಷ ಸಿಸಿ ಅವರೊಂದಿಗಿನ ಮಾತುಕತೆ ಹೊರತಾಗಿ ಈಜಿಪ್ಟ್ ಸರ್ಕಾರದ ಹಿರಿಯ ಗಣ್ಯರು, ಕೆಲವು ಪ್ರಮುಖ ವ್ಯಕ್ತಿಗಳು ಮತ್ತು ಈಜಿಪ್ಟ್‌ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಪ್ರಧಾನಿ ಮೋದಿ ಸಂವಹನ ನಡೆಸುವ ಸಾಧ್ಯತೆಯಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. 

"ಭಾರತ ಮತ್ತು ಈಜಿಪ್ಟ್ ನಡುವಿನ ಸಂಬಂಧಗಳು ಪ್ರಾಚೀನ ವ್ಯಾಪಾರ, ಆರ್ಥಿಕ ಸಂಪರ್ಕಗಳು ಮತ್ತು ಸಾಂಸ್ಕೃತಿಕಆಳವಾಗಿ ಬೇರೂರಿರುವ ಜನರು-ಜನರ ನಡುವಿನ ಸಂಬಂಧಗಳನ್ನು ಆಧರಿಸಿವೆ" ಎಂದು ಅದು ಹೇಳಿದೆ. ಜನವರಿಯಲ್ಲಿ ಅಧ್ಯಕ್ಷ ಸಿಸಿ ಭಾರತಕ್ಕೆ ರಾಜ್ಯ ಭೇಟಿಯ ಸಂದರ್ಭದಲ್ಲಿ, ಎರಡೂ ದೇಶಗಳ ನಡುವಿನ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಗೆ ಏರಿಸಲು ಒಪ್ಪಿಗೆ ನೀಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com