ಶ್ವೇತ ಭವನದಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ: ಬೈಡನ್ ಜೊತೆ ದ್ವಿಪಕ್ಷೀಯ ಮಾತುಕತೆ 

ಪ್ರಧಾನಿ ಮೋದಿ ಮೊದಲ ಬಾರಿಗೆ ಅಮೇರಿಕಾಗೆ ಸ್ಟೇಟ್ ವಿಸಿಟ್ (ಅಮೇರಿಕಾ ಅಧ್ಯಕ್ಷರ ಆಹ್ವಾನದ ಮೇರೆಗೆ ನಡೆಯುತ್ತಿರುವ ಭೇಟಿ) ಕೈಗೊಂಡಿದ್ದು, ಅಮೇರಿಕಾದ ಶಕ್ತಿ ಕೇಂದ್ರ ಶ್ವೇತ ಭವನದಲ್ಲಿ ಮೋದಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. 
ಶ್ವೇತ ಭವನದಲ್ಲಿ ಪ್ರಧಾನಿ ಮೋದಿ- ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಮಾತುಕತೆ
ಶ್ವೇತ ಭವನದಲ್ಲಿ ಪ್ರಧಾನಿ ಮೋದಿ- ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಮಾತುಕತೆ

ವಾಷಿಂಗ್ ಟನ್:  ಪ್ರಧಾನಿ ಮೋದಿ ಮೊದಲ ಬಾರಿಗೆ ಅಮೇರಿಕಾಗೆ ಸ್ಟೇಟ್ ವಿಸಿಟ್ (ಅಮೇರಿಕಾ ಅಧ್ಯಕ್ಷರ ಆಹ್ವಾನದ ಮೇರೆಗೆ ನಡೆಯುತ್ತಿರುವ ಭೇಟಿ) ಕೈಗೊಂಡಿದ್ದು, ಅಮೇರಿಕಾದ ಶಕ್ತಿ ಕೇಂದ್ರ ಶ್ವೇತ ಭವನದಲ್ಲಿ ಮೋದಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. 

ಶ್ವೇತ ಭವನದ ಸೌತ್ ಲಾನ್ ನಲ್ಲಿ ಅಧ್ಯಕ್ಷ ಜೋ ಬೈಡನ್ ನೇತೃತ್ವದಲ್ಲಿ ಪ್ರಧಾನಿ ಮೋದಿ ಆಗಮಿಸುತ್ತಿದ್ದಂತೆಯೇ 21 ಗನ್ ಸೆಲ್ಯೂಟ್ ಮೂಲಕ ಗೌರವಾದರಗಳೊಂದಿಗೆ ಸರ್ಕಾರದ ವತಿಯಿಂದ ಸ್ವಾಗತ ಕೋರಲಾಯಿತು.

"ಪ್ರಧಾನಿ ಮೋದಿ, ನಿಮಗೆ ಶ್ವೇತ ಭವನಕ್ಕೆ ಸ್ವಾಗತ, ನಿಮ್ಮ ಮೊದಲ ಸ್ಟೇಟ್ ವಿಸಿಟ್ ಗೆ ಆತಿಥ್ಯ ನೀಡುತ್ತಿರುವುದ್ ನಮಗೆ ಗೌರವದ ಸಂಗತಿಯಾಗಿದೆ" ಎಂದು ಪ್ರಧಾನಿಯನ್ನು ಸ್ವಾಗತಿಸಿದ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. 

ಪ್ರಧಾನಿ ಮೋದಿ ಹಾಗೂ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಸಮ್ಮುಖದಲ್ಲಿ ಉಭಯ ರಾಷ್ಟ್ರಗಳ ರಾಷ್ಟ್ರಗೀತೆಯನ್ನು ನುಡಿಸಲಾಯಿತು.

ಇದನ್ನೂ ಓದಿ: ಬೆಂಗಳೂರು, ಅಹಮದಾಬಾದ್‌ನಲ್ಲಿ ಅಮೆರಿಕ ಕಾನ್ಸುಲೇಟ್‌ ಕಚೇರಿ ಆರಂಭ: ಶ್ವೇತಭವನ
 
ಅಮೇರಿಕಾ ಹಾಗೂ ಭಾರತದ ನಡುವಿನ ಸಂಬಂಧ 21 ನೇ ಶತಮಾನದಲ್ಲಿ ಮಹತ್ವದ ಪಾತ್ರ ಹೊಂದಿದೆ ಎಂದು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದ ಬೈಡನ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. 

ಶ್ವೇತ ಭವನದಲ್ಲಿ ನೀಡಿದ ಸ್ವಾಗತಕ್ಕಾಗಿ ನಾನು ಕೃತಜ್ಞಯನ್ನು ವ್ಯಕ್ತಪಡಿಸುತ್ತೇನೆ, ಅಮೇರಿಕಾ ಹಾಗೂ ಭಾರತ, ಸಾಗರದಿಂದ ಹಿಡಿದು ಬಾಹ್ಯಾಕಾಶದವರೆಗೂ, ಪುರಾತನ ಸಂಸ್ಕೃತಿಯಿಂದ ಹಿಡಿದು ಕೃತಕ ಬುದ್ಧಿಮತ್ತೆ ವರೆಗೂ ಪ್ರತಿ ಕ್ಷೇತ್ರಗಳಲ್ಲಿಯೂ ಪರಸ್ಪರ ಹೆಗಲಿಗೆ ಹೆಗಲು ನೀಡಿ ನಡೆಯುತ್ತಿವೆ ಎಂದು ಮೋದಿ ಶ್ವೇತ ಭವನದಲ್ಲಿ ಹೇಳಿದ್ದಾರೆ. ಪ್ರಧಾನಿ ಮೋದಿ- ಬೈಡನ್ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿದ್ದು, ಪ್ರಧಾನಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com