''ತೇಜಸ್ವಿ" ಭವ: ಭಾರತದಲ್ಲಿ ಅತ್ಯಾಧುನಿಕ F414 ಇಂಜಿನ್ ಉತ್ಪಾದನೆಗೆ ಹೆಚ್ಎಎಲ್ ನೊಂದಿಗೆ ಜಿಇ ಒಪ್ಪಂದ

ಭಾರತದಲ್ಲಿ ಅತ್ಯಾಧುನಿಕ F414 ಇಂಜಿನ್ ಉತ್ಪಾದನೆಗೆ ಹೆಚ್ಎಎಲ್ ನೊಂದಿಗಿನ ಒಪ್ಪಂದವನ್ನು ಜಿಇ ಏರೋಸ್ಪೇಸ್ ಅಧಿಕೃತವಾಗಿ ಪ್ರಕಟಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತದಲ್ಲಿ ಅತ್ಯಾಧುನಿಕ F414 ಇಂಜಿನ್ ಉತ್ಪಾದನೆಗೆ ಹೆಚ್ಎಎಲ್ ನೊಂದಿಗಿನ ಒಪ್ಪಂದವನ್ನು ಜಿಇ ಏರೋಸ್ಪೇಸ್ ಅಧಿಕೃತವಾಗಿ ಪ್ರಕಟಿಸಿದೆ. 

ಈ ಒಪ್ಪಂದ ಈ ಹಿಂದೆಯೇ ಅಂತಿಮಗೊಂಡಿತ್ತಾದರೂ ಈಗ ಅಧಿಕೃತವಾಗಿ ಪ್ರಕಟಿಸಲಾಗಿದ್ದು ಜಿಇಯ ಅತ್ಯಾಧುನಿಕ ಎಫ್14 ವಿಮಾನ ಇಂಜಿನ್ ಗಳು ಭಾರತದಲ್ಲಿ ಉತ್ಪಾದನೆಯಾಗಲಿದೆ. 

ಪ್ರಧಾನಿ ನರೇಂದ್ರ ಮೋದಿ ಅವರು ಅಮೇರಿಕಾಗೆ ಸ್ಟೇಟ್ ವಿಸಿಟ್ ಕೈಗೊಂಡಿರುವ ಸಂದರ್ಭದಲ್ಲೇ ಈ ಘೋಷಣೆಯಾಗಿದೆ. ಈ ಒಪ್ಪಂದವನ್ನು ಜಿಇ ಏರೋಸ್ಪೇಸ್ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ್ದು, ಉಭಯ ರಾಷ್ಟ್ರಗಳ ನಡುವಿನ ರಕ್ಷಣಾ ಸಂಬಂಧವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ ಎಂದು ಹೇಳಿದೆ.
  
ಜಿಇ ಏರೋಸ್ಪೇಸ್ ನ F414 ಇಂಜಿನ್ ಗಳನ್ನು ಭಾರತದಲ್ಲಿ ಜಂಟಿಯಾಗಿ ಉತ್ಪಾದಿಸುವುದು, ಇದಕ್ಕಾಗಿ ಅಗತ್ಯ ರಫ್ತು ಅನುಮತಿಯನ್ನು ಅಮೇರಿಕಾ ಸರ್ಕಾರದಿಂದ ಪಡೆಯುವ ನಿಟ್ಟಿನಲ್ಲಿ  ಜಿಇ ಏರೋಸ್ಪೇಸ್ ಕಾರ್ಯನಿರ್ವಹಿಸಲಿದೆ ಎಂದು ಜಿಇ ಏರೋ ಸ್ಪೇಸ್ ಹೇಳಿದೆ.

ಇದನ್ನೂ ಓದಿ: ಮೋದಿ ವಿದೇಶ ಪ್ರವಾಸದ ಎಫೆಕ್ಟ್: ಶೀಘ್ರದಲ್ಲೇ ಬೆಂಗಳೂರಿನಲ್ಲಿ ಅಮೆರಿಕಾ ರಾಯಭಾರ ಕಚೇರಿ!
 
ಅಮೇರಿಕಾದ ಕಾಂಗ್ರೆಸ್ ನಿಂದ ಈ ಒಪ್ಪಂದಕ್ಕೆ ಅನುಮತಿ ದೊರೆಯಬೇಕಿದ್ದು, ಸರಾಗವಾಗಿ ಅನುಮತಿ ದೊರೆಯಲಿದೆ ಎಂಬ ನಿರೀಕ್ಷೆ ಇದೆ. ಜಿಇ-ಎಫ್414 ಇಂಜಿನ್ ಗಳನ್ನು ತೇಜಸ್ ಲಘು ಯುದ್ಧ ಎಂಕೆ2 ವಿಮಾನಗಳಿಗೆ ಅಳವಡಿಕೆ ಮಾಡಲಾಗುತ್ತದೆ. ಅತ್ಯಾಧುನಿಕ ಮಧ್ಯಮ ಯುದ್ಧ ವಿಮಾನ (ಎಎಂಸಿಎ) ಹಾಗೂ ಅವಳಿ-ಎಂಜಿನ್ ಡೆಕ್ ಆಧಾರಿತ ಫೈಟರ್‌ಗಳು ಸೇರಿದಂತೆ  ಭವಿಷ್ಯದ ಫೈಟರ್ ಗಳಿಗೆ ಸಂಬಂಧಿಸಿದ ಕೆಲಸಗಳೂ ಪ್ರಗತಿಯಲ್ಲಿದೆ. ತೇಜಸ್ ಎಲ್ ಸಿಎ ಎಂಕೆ2 ಹೊರತುಪಡಿಸಿ, ಸೂಪರ್ ಹಾರ್ನೆಟ್, ಗ್ರೋಲರ್ ಮತ್ತು ಗ್ರಿಪೆನ್ ಜೆಟ್ ಗಳಿಗೆ ಜಿಇ- F414 ಇಂಜಿನ್ ಗಳನ್ನು ಅಳವಡಿಕೆ ಮಾಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com