ಕೈರೋದಲ್ಲಿರುವ ಗೀಜಾ ಪಿರಮಿಡ್‌ಗೆ ಪ್ರಧಾನಿ ಮೋದಿ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರು ಈಜಿಪ್ಟ್ ರಾಜಧಾನಿ ಕೈರೋದ ಹೊರವಲಯದಲ್ಲಿರುವ ಗೀಜಾದ ಮಹಾ ಪಿರಮಿಡ್‌ಗಳನ್ನು ಭಾನುವಾರ ವೀಕ್ಷಿಸಿದರು. ಇವು ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿವೆ.
ಗೀಜಾ ಪಿರಮಿಡ್ ಗೆ ಭೇಟಿ ನೀಡಿದ ಪ್ರಧಾನಿ ಮೋದಿ
ಗೀಜಾ ಪಿರಮಿಡ್ ಗೆ ಭೇಟಿ ನೀಡಿದ ಪ್ರಧಾನಿ ಮೋದಿ

ಕೈರೋ: ಪ್ರಧಾನಿ ನರೇಂದ್ರ ಮೋದಿ ಅವರು ಈಜಿಪ್ಟ್ ರಾಜಧಾನಿ ಕೈರೋದ ಹೊರವಲಯದಲ್ಲಿರುವ ಗೀಜಾದ ಮಹಾ ಪಿರಮಿಡ್‌ಗಳನ್ನು ಭಾನುವಾರ ವೀಕ್ಷಿಸಿದರು. ಇವು ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿವೆ.

ಈಜಿಪ್ಟ್ ಪ್ರಧಾನಿ ಮೊಸ್ತಫಾ ಮಡ್‌ಬೌಲಿ ಅವರೊಂದಿಗೆ ಉತ್ತರ ಈಜಿಪ್ಟ್‌ನ ಅಲ್-ಜಿಜಾ (ಗೀಜಾ) ಬಳಿ ನೈಲ್ ನದಿಯ ಪಶ್ಚಿಮ ದಂಡೆಯಲ್ಲಿ ಕಲ್ಲಿನ ಪ್ರಸ್ಥಭೂಮಿಯ ಮೇಲೆ ನಿರ್ಮಿಸಲಾದ 4 ನೇ ರಾಜವಂಶದ ಮೂರು ಪಿರಮಿಡ್‌ಗಳಿಗೆ ಮೋದಿ ಭೇಟಿ ನೀಡಿದರು.

ಪ್ರಾಚೀನ ಸಾಮ್ರಾಜ್ಯದ ನಾಲ್ಕನೇ ರಾಜವಂಶದ ಅಡಿಯಲ್ಲಿ ಆಳ್ವಿಕೆ ನಡೆಸಿದ ಫೇರೋ ಖುಫು ಅವರ ಸಮಾಧಿಯಾಗಿರುವ  ಈಜಿಪ್ಟಿನ ಅತಿದೊಡ್ಡ ಪಿರಮಿಡ್ ಆಗಿರುವ ಗಿಜಾದ ಗ್ರೇಟ್ ಪಿರಮಿಡ್‌ ಬಗ್ಗೆ ವಿವರಗಳನ್ನು ಪ್ರಧಾನಿ ಮೋದಿ ಕಲೆ ಹಾಕಿದರು. 

26 ನೇ ಶತಮಾನದಲ್ಲಿ  ಸುಮಾರು 27 ವರ್ಷಗಳ ಅವಧಿಯಲ್ಲಿ ನಿರ್ಮಿಸಲಾದ ಪಿರಮಿಡ್ ಪ್ರಾಚೀನ ಪ್ರಪಂಚದ ಏಳು ಅದ್ಭುತಗಳಲ್ಲಿ ಅತ್ಯಂತ ಹಳೆಯದಾದ ಮತ್ತು ಬಹುಮಟ್ಟಿಗೆ ಹಾಗೇ ಉಳಿದಿರುವ ಏಕೈಕ ಅದ್ಭುತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com