ಆಸ್ಕರ್ ಗೆಲ್ಲುವ ಮೂಲಕ ವಿಶ್ವದಲ್ಲೇ ಖ್ಯಾತಿಗಳಿಸಿದ, ಎಸ್.ಎಸ್.ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾದಲ್ಲಿ ಬ್ರಿಟಿಷ್ ಗವರ್ನರ್ ಸ್ಕಾಟ್ ಬಕ್ಸ್ಟನ್ ಪಾತ್ರವನ್ನು ನಿರ್ವಹಿಸಿದ್ದ ರೇ ಸ್ಟೀವನ್ಸನ್ (58) ಮೇ 21ರಂದು ನಿಧನರಾಗಿದ್ದಾರೆ.
ಇವರ ಪೂರ್ತಿ ಹೆಸರು ಜಾರ್ಜ್ ರೇಮಂಡ್ ಸ್ಟೀವನ್ಸನ್ ಎಂದಾಗಿದ್ದು, ಉತ್ತರ ಐರಿಶ್ ನಟ. ಮೂಲತಃ ಲಂಡನ್ನ ಲಿಸ್ಬರ್ನ್ನವರಾಗಿದ್ದರು. ರೇ ಸ್ಟೀವನ್ಸನ್ ನಿಧನ ಹೊಂದಿದ್ದಾರೆಂಬ ಸುದ್ದಿಯನ್ನು ಆರ್ಆರ್ ಆರ್ ಸಿನಿಮಾದ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ದೃಢಪಡಿಸಲಾಗಿದೆ.
ಮೇ 25, 1964 ರಲ್ಲಿ ಉತ್ತರ ಐರ್ಲೆಂಡ್ ನ ಲಿಸ್ಟ್ ಬರ್ನಲ್ಲಿ ಜನಿಸಿದ್ದ ರೇ ಸ್ಟಿವನ್ ಸನ್ 1990 ರಲ್ಲಿ ದೂರದರ್ಶನ ಮೂಲಕ ಮನರಂಜನ ಕ್ಷೇತ್ರ ಪ್ರವೇಶಿಸಿದ್ದರು. 8ನೇ ವಯಸ್ಸಿಗೆ ಅವರು ಇಂಗ್ಲೆಂಡ್ಗೆ ಶಿಫ್ಟ್ ಆದರು. ಸಣ್ಣ ವಯಸ್ಸಿನಲ್ಲೇ ರಂಗಭೂಮಿಯಲ್ಲಿ ತೊಡಗಿಕೊಂಡರು.
90ನೇ ದಶಕದಲ್ಲಿ ಅವರು ಟಿವಿ ಹಾಗೂ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದರು. 1998ರಲ್ಲಿ ರಿಲೀಸ್ ಆದ ‘ದಿ ಥಿಯರಿ ಆಫ್ ಫ್ಲೈಟ್’ ಸಿನಿಮಾ ಯಶಸ್ಸು ಕಂಡಿತು. ಈ ಚಿತ್ರದಿಂದ ರೇ ಸ್ಟೀವನ್ಸನ್ ಅವರ ಯಶಸ್ಸು ಹೆಚ್ಚಿತು. ಅವರ ಪಾತ್ರ ಅನೇಕರಿಗೆ ಇಷ್ಟ ಆಯಿತು. ‘ಪನಿಶರ್: ವಾರ್ ಜೋನ್’ ಮೊದಲಾದ ಚಿತ್ರಗಳ ಮೂಲಕ ಅವರು ಗಮನ ಸೆಳೆದಿದ್ದಾರೆ.
ಸಿನಿಮಾ ಚಿತ್ರೀಕರಣದ ವೇಳೆಯಲ್ಲಿ ತೆಗೆಯಲಾದ ಫೋಟೋವೊಂದನ್ನು ಶೇರ್ ಮಾಡಿದ ಆರ್ಆರ್ಆರ್ ನಿರ್ದೇಶಕ ಎಸ್.ಎಸ್.ರಾಜಮೌಳಿ ‘ರೇ ಸ್ಟೀವನ್ಸನ್ ಅವರ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲೇ ಸಾಧ್ಯವಾಗುತ್ತಿಲ್ಲ. ನಿಜಕ್ಕೂ ಶಾಕ್ ಆಗಿದೆ. ನಮ್ಮ ಚಿತ್ರದ ಚಿತ್ರೀಕರಣಕ್ಕೆ ಬರುವಾಗ ರೇ ಅವರು ಯಾವಾಗಲೂ ದೊಡ್ಡದಾದ ಶಕ್ತಿ ಮತ್ತು ಚೈತನ್ಯವನ್ನು ಹೊತ್ತು ತರುತ್ತಿದ್ದರು. ಅದನ್ನವರು ಎಲ್ಲರಿಗೂ ಹಂಚುತ್ತಿದ್ದರು. ಅವರೊಂದಿಗೆ ಕೆಲಸ ಮಾಡುವುದು ಸಿಕ್ಕಾಪಟೆ ಖುಷಿ ತರುತ್ತಿತ್ತು. ರೇ ಆತ್ಮ ಚಿರಶಾಂತಿಯಲ್ಲಿ ನೆಲೆಸಲಿ ಎಂದಿದ್ದಾರೆ.
Advertisement