ಅಮೇರಿಕ: ಜಿಮ್ ನಲ್ಲಿ ಇರಿತಕ್ಕೆ ಒಳಗಾಗಿದ್ದ ಭಾರತ ಮೂಲದ ವಿದ್ಯಾರ್ಥಿ ಸ್ಥಿತಿ ಚಿಂತಾಜನಕ
ನ್ಯೂಯಾರ್ಕ್: ಅಮೇರಿಕಾದ ಜಿಮ್ ನಲ್ಲಿ ಇರಿತಕ್ಕೆ ಒಳಗಾಗಿದ್ದ ಭಾರತ ಮೂಲದ ವಿದ್ಯಾರ್ಥಿ ಸ್ಥಿತಿ ಗಂಭೀರವಾಗಿದೆ.
ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಪಿ ವರುಣ್ ರಾಜ್ ಜಿಮ್ ಗೆ ತೆರಳಿದ್ದಾಗ ಆತನಿಗೆ ಚೂರಿಯಿಂದ ಇರಿಯಲಾಗಿತ್ತು. ಇದಕ್ಕೆ ಕಾರಣ ಇನ್ನಷ್ಟೇ ತಿಳಿಯಬೇಕಿದ್ದು, ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ ಎಂದು ಎನ್ ಡಬ್ಲ್ಯುಐಯು ಟೈಮ್ಸ್ ವರದಿ ಮಾಡಿದೆ.
ಘಟನೆಯ ಬೆನ್ನಲ್ಲೇ, ದಾಳಿ ನಡೆಸಿದ ವ್ಯಕ್ತಿಯನ್ನು ಮಾರಣಾಂತಿಕ ಆಯುಧದಿಂದ ಕೊಲೆ ಯತ್ನದ ಆರೋಪದಡಿ ಬಂಧಿಸಲಾಗಿದೆ.
ಗಾಯಗೊಂಡ ವರುಣ್ ನ್ನು ತಕ್ಷಣವೇ ಫೋರ್ಟ್ ವೇನ್ ಆಸ್ಪತ್ರೆಗೆ ದಾಖಲಿಸಲಾಯಿತು. ಆತ ಬದುಕಿ ಉಳಿಯುವ ಸಾಧ್ಯತೆ ಶೇ.0 ಯಿಂದ ಶೇ.5 ವರೆಗೆ ಇದೆಯಷ್ಟೇ ಎಂದು ವೈದ್ಯರು ತಿಳಿಸಿದ್ದಾರೆ. ಹಿಂಸಾತ್ಮಕ ದಾಳಿಯ ನಂತರ ವರುಣ್ ಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ.
ಸಂತ್ರಸ್ತ ವ್ಯಕ್ತಿ ತನಗೆ ಅಪಾಯಕಾರಿ ಎಂದು ಯಾರೋ ಹೇಳಿದ್ದರು ಹಾಗಾಗಿ ಪ್ರತಿಕ್ರಿಯೆ ನೀಡಿದ್ದೇನೆ ಎಂದು ಬಂಧಿತ ಆರೋಪಿ ಹೇಳಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ