ಕಾಂಗೋ ವೈರಾಣುವಿನಿಂದ ವೈದ್ಯನ ಸಾವು: ಪಾಕಿಸ್ತಾನದ ಕ್ವೆಟ್ಟಾದ ಆಸ್ಪತ್ರೆಗಳಲ್ಲಿ ಹೈ ಅಲರ್ಟ್

ಪಾಕಿಸ್ತಾನದ ಕ್ವೆಟ್ಟಾದಲ್ಲಿ ವೈದ್ಯನೋರ್ವ ಕಾಂಗೋ ವೈರಾಣುವಿನಿಂದ ಮೃತಪಟ್ಟಿದ್ದು, ಅಲ್ಲಿನ ಆಸ್ಪತ್ರೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಕಾಂಗೋ ವೈರಾಣು
ಕಾಂಗೋ ವೈರಾಣು

ನವದೆಹಲಿ: ಪಾಕಿಸ್ತಾನದ ಕ್ವೆಟ್ಟಾದಲ್ಲಿ ವೈದ್ಯನೋರ್ವ ಕಾಂಗೋ ವೈರಾಣುವಿನಿಂದ ಮೃತಪಟ್ಟಿದ್ದು, ಅಲ್ಲಿನ ಆಸ್ಪತ್ರೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಪಾಕಿಸ್ತಾನದ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ವೈದ್ಯಕೀಯ ಕೇಂದ್ರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.  ಕ್ರಿಮಿಯನ್-ಕಾಂಗೊ ಹೆಮರಾಜಿಕ್ ಜ್ವರ ವೈರಸ್ ಈ ವರ್ಷ ನೈಋತ್ಯ ಪ್ರಾಂತ್ಯದಲ್ಲಿ 17 ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ಪಾಕ್ ನ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಅಬ್ದುಲ್ಲಾ ಖಾನ್ ಹೇಳಿದ್ದಾರೆ.

ಪ್ರಾಂತ್ಯದ ಎರಡು ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಸೇರಿದಂತೆ ಕನಿಷ್ಠ 16 ಆರೋಗ್ಯ ವೃತ್ತಿಪರರು ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಆಸ್ಪತ್ರೆಗಳು ಮತ್ತು ವೈದ್ಯಕೀಯ ಕೇಂದ್ರಗಳಲ್ಲಿ ತುರ್ತು ಪರಿಸ್ಥಿತಿಯನ್ನು ಹೊರಡಿಸಲಾಗಿದೆ.

ಆರಂಭದಲ್ಲಿ, ಕ್ವೆಟ್ಟಾದಲ್ಲಿನ ಸಿವಿಲ್ ಆಸ್ಪತ್ರೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ವೈದ್ಯರು ಕಾಂಗೋ ವೈರಸ್ ಸೋಂಕಿಗೆ ಒಳಗಾಗಿದ್ದರು.

ಹೆಚ್ಚಿನ ಪರೀಕ್ಷೆಯ ನಂತರ ಆಸ್ಪತ್ರೆಯಲ್ಲಿ 13 ಇತರ ಆರೋಗ್ಯ ವೃತ್ತಿಪರರು ಮತ್ತು ಫಾತಿಮಾ ಜಿನ್ನಾ ವೈದ್ಯಕೀಯ ಕೇಂದ್ರವೂ ವೈರಸ್ ಸೋಂಕಿಗೆ ಒಳಗಾಗಿದೆ ಎಂದು ದೃಢಪಡಿಸಿತು. ಯುವ ವೈದ್ಯರ ಸಂಘದ ಡಾ.ಆರಿಫ್ ಸುಲ್ತಾನ್ ಮಾತನಾಡಿ, ವೈದ್ಯರ ಸ್ಥಿತಿ ಚಿಂತಾಜನಕವಾಗಿರುವ ಕಾರಣ ಅವರನ್ನು ಏರ್ ಆಂಬ್ಯುಲೆನ್ಸ್ ಮೂಲಕ ಕರಾಚಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು, ಇತರರನ್ನು ಆಂಬ್ಯುಲೆನ್ಸ್‌ಗಳಲ್ಲಿ ರಸ್ತೆ ಮೂಲಕ ನಗರಕ್ಕೆ ಕಳುಹಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com