ನೇಪಾಳದಲ್ಲಿ ಮತ್ತೆ 5.6ರಷ್ಟು ತೀವ್ರತೆಯ ಪ್ರಬಲ ಭೂಕಂಪನ; ನಡುಗಿದ ಉತ್ತರ ಭಾರತ!

ಕಳೆದ ಮೂರು ದಿನಗಳಿಂದ ಭೂಕಂಪನದಿಂದ 150ಕ್ಕೂ ಹೆಚ್ಚು ಜನರನ್ನು ಕಳೆದುಕೊಂಡಿರುವ ನೇಪಾಳದಲ್ಲಿ ಸೋಮವಾರ ಮತ್ತೆ ಪ್ರಬಲ ಭೂಕಂಪನ ಸಂಭವಿಸಿದೆ. ಪಶ್ಚಿಮ ನೇಪಾಳದಲ್ಲಿ 5.6 ತೀವ್ರತೆಯ ಭೂಕಂಪನವಾಗಿದೆ. ಇದರಿಂದ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರದ ಕೇಂದ್ರ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕಳೆದ ಮೂರು ದಿನಗಳಿಂದ ಭೂಕಂಪನದಿಂದ 150ಕ್ಕೂ ಹೆಚ್ಚು ಜನರನ್ನು ಕಳೆದುಕೊಂಡಿರುವ ನೇಪಾಳದಲ್ಲಿ ಸೋಮವಾರ ಮತ್ತೆ ಪ್ರಬಲ ಭೂಕಂಪನ ಸಂಭವಿಸಿದೆ. ಪಶ್ಚಿಮ ನೇಪಾಳದಲ್ಲಿ 5.6 ತೀವ್ರತೆಯ ಭೂಕಂಪನವಾಗಿದೆ. ಇದರಿಂದ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರದ ಕೇಂದ್ರ ತಿಳಿಸಿದೆ.

ಉತ್ತರ ಪ್ರದೇಶದ ಅಯೋಧ್ಯೆಯ ಉತ್ತರಕ್ಕೆ 233 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರಬಿಂದುವಿದೆ ಎಂದು ಅದು ಹೇಳಿದೆ. ದೆಹಲಿ ಮತ್ತು ಎನ್ ಸಿಆರ್ ನ ಹಲವೆಡೆ ಪೀಠೋಪಕರಣಗಳು ಅಲುಗಾಡಿದ ಬಗ್ಗೆ ವರದಿಯಾಗಿದ್ದು, ಭೂಕಂಪನ ಸ್ಥಳೀಯ ಜನರಲ್ಲಿ ಭೀತಿಯನ್ನುಂಟು ಮಾಡಿದೆ. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಜನರು ವಸತಿ ಕಟ್ಟಡಗಳಿಂದ ಹೊರಬರುವ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.

2015 ರ ನಂತರದ ಅತ್ಯಂತ ಭೀಕರವಾದ 6.4 ತೀವ್ರತೆಯ ಭೂಕಂಪವು ಶುಕ್ರವಾರ ರಾತ್ರಿ ನೇಪಾಳವನ್ನು ಅಪ್ಪಳಿಸಿತ್ತು. ಹಿಮಾಲಯ ರಾಷ್ಟ್ರದ ದೂರದ ಪರ್ವತ ಪ್ರದೇಶದಲ್ಲಿ ನೂರಾರು ಮನೆಗಳನ್ನು ನಾಶಪಡಿಸಿದ್ದು, ಕನಿಷ್ಠ 157 ಜನರು ಸಾವನ್ನಪ್ಪಿದ್ದಾರೆ ಮತ್ತು 160 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನೇಪಾಳವು ಪ್ರಪಂಚದ ಅತ್ಯಂತ ಸಕ್ರಿಯವಾದ ಟೆಕ್ಟೋನಿಕ್ ವಲಯಗಳಲ್ಲಿ ಒಂದಾಗಿದ್ದು, ದೇಶ ಭೂಕಂಪದಿಂದ ಅತ್ಯಂತ ಜರ್ಝರಿತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com