ಮತ್ತೆ 6,500 ಮಂದಿ ಅಫ್ಘನ್ನರ ಗಡಿಪಾರು ಮಾಡಿದ ಪಾಕ್, 1.7 ಲಕ್ಷಕ್ಕೆ ಏರಿದ ಸಂಖ್ಯೆ

ಪಾಕಿಸ್ತಾನ ಇಂದು ಮತ್ತೆ 6,500 ಮಂದಿ ಅಫ್ಘನ್ನರನ್ನು ಗಡಿಪಾರು ಮಾಡಿದ್ದು, ಈ ವರೆಗೂ ಒಟ್ಟು 1,70,000 ಮಂದಿಯನ್ನು ಗಡಿಪಾರು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ಘನ್ನರ ಗಡಿಪಾರು (ಸಂಗ್ರಹ ಚಿತ್ರ)
ಅಫ್ಘನ್ನರ ಗಡಿಪಾರು (ಸಂಗ್ರಹ ಚಿತ್ರ)

ಇಸ್ಲಾಮಾಬಾದ್: ಪಾಕಿಸ್ತಾನ ಇಂದು ಮತ್ತೆ 6,500 ಮಂದಿ ಅಫ್ಘನ್ನರನ್ನು ಗಡಿಪಾರು ಮಾಡಿದ್ದು, ಈ ವರೆಗೂ ಒಟ್ಟು 1,70,000 ಮಂದಿಯನ್ನು ಗಡಿಪಾರು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ನೋಂದಣಿ ಮಾಡಿಕೊಳ್ಳದ ಎಲ್ಲಾ ವಿದೇಶಿ ಪ್ರಜೆಗಳಿಗೂ ನ.1 ರ ವೇಳೆಗೆ ದೇಶ ತೊರೆಯುವಂತೆ ಪಾಕ್ ಈ ಹಿಂದೆ ಗಡುವು ನೀಡಿತ್ತು. ಒಂದು ವೇಳೆ ಗಡುವು ಮೀರಿ ದೇಶದಲ್ಲೇ ಇದ್ದವರ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿತ್ತು. 

ಸೆ.17 ರಿಂದ ಈ ವರೆಗೂ ಒಟ್ತು 1,74,358 ಮಂದಿ ಅಫ್ಘನ್ನರು ಪಾಕ್ ತೊರೆದಿದ್ದು, ಸ್ವಯಂಪ್ರೇರಿತರಾಗಿಯೂ ಕೆಲವು ವಾಪಸ್ ತೆರಳುತ್ತಿದ್ದಾರೆ. ಆದರೆ ಇವರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಗಡುವು ಮುಗಿದ ಕೂಡಲೇ ಗಡಿ ದಾಟುವಿಕೆಯಲ್ಲಿ ಅಪಾರ ಸಂಖ್ಯೆಯ ಅಕ್ರಮ ವಲಸಿಗರು ಇದ್ದರು. ಅದು ಈಗ ಕಡಿಮೆಯಾಗುತ್ತಿದೆ ಎಂದು ಆಫ್ಘನ್ ಪ್ರಜೆಗಳ ಸ್ವಯಂಪ್ರೇರಿತ ವಾಪಸಾತಿ ಪ್ರಕ್ರಿಯೆಯಲ್ಲಿ ತೊಡಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಧಿಕೃತ ಮಾಹಿತಿಯ ಪ್ರಕಾರ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 6,584 ಆಫ್ಘನ್ನರು ಭಾನುವಾರ ಪಾಕಿಸ್ತಾನದಿಂದ ನಿರ್ಗಮಿಸಿದ್ದಾರೆ. ಶನಿವಾರ, ಖೈಬರ್ ಪಖ್ತುಂಖ್ವಾ ಮತ್ತು ಪಂಜಾಬ್‌ನ ವಿವಿಧ ಜೈಲುಗಳಿಂದ 209 ಗಡೀಪಾರು ಮಾಡಿದವರನ್ನು 46,936 ಪುರುಷರು, 35,507 ಮಹಿಳೆಯರು ಮತ್ತು 85,331 ಮಕ್ಕಳೊಂದಿಗೆ ವಾಪಸ್ ಕಳುಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com