ಭ್ರಷ್ಟಾಚಾರ ಆರೋಪ: ಪೋರ್ಚುಗಲ್ ಪ್ರಧಾನಿ ರಾಜೀನಾಮೆ

ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪೋರ್ಚುಗಲ್ ಪ್ರಧಾನಿ ಆಂಟೋನಿಯೊ ಕೋಸ್ಟಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಆಂಟೋನಿಯೊ ಕೋಸ್ಟಾ
ಆಂಟೋನಿಯೊ ಕೋಸ್ಟಾ

ಲಿಸ್ಬನ್: ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪೋರ್ಚುಗಲ್ ಪ್ರಧಾನಿ ಆಂಟೋನಿಯೊ ಕೋಸ್ಟಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಭ್ರಷ್ಟಾಚಾರ ತನಿಖೆಯ ಭಾಗವಾಗಿ ಪ್ರಧಾನಿ ಕೋಸ್ಟಾ ಅವರ ಅಧಿಕೃತ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು. ದಾಳಿ ವೇಳೆ ಪೋರ್ಚುಗೀಸ್ ಪ್ರಧಾನ ಮಂತ್ರಿ ಕೋಸ್ಟಾ ಅವರ ಉನ್ನತ ಸಹಾಯಕರ ಬಂಧನದ ನಂತರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ರಾಷ್ಟ್ರೀಯ ದೂರದರ್ಶನದ ಭಾಷಣ ವೇಳೆ ತಾವು ತಮ್ಮ ರಾಜೀನಾಮೆ ಪತ್ರವನ್ನು ಅಧ್ಯಕ್ಷರಿಗೆ ಸಲ್ಲಿಸಿದ್ದೇನೆ. ನಾನು ನ್ಯಾಯಾಂಗ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಂಬುತ್ತೇನೆ. ನನ್ನ ಆತ್ಮಸಾಕ್ಷಿಯು ಯಾವುದೇ ಕಾನೂನುಬಾಹಿರ ಅಥವಾ ಖಂಡನೆಗೆ ಒಳಗಾದ ಕೃತ್ಯದಿಂದ ಸ್ಪಷ್ಟವಾಗಿದೆ. ಪೋರ್ಚುಗೀಸ್ ಜನರ ಕಣ್ಣಲ್ಲಿ ಕಣ್ಣಿಟ್ಟು ಹೇಳಲು ಬಯಸುತ್ತೇನೆ ಎಂದರು.

ಪೋರ್ಚುಗೀಸ್ ಅಧ್ಯಕ್ಷ ಮಾರ್ಸೆಲೊ ರೆಬೆಲೊ ಡಿ ಸೌಸಾ ಕೋಸ್ಟಾ ಅವರ ರಾಜೀನಾಮೆಯನ್ನು ಅಂಗೀಕರಿಸುವ ನಿರೀಕ್ಷೆಯಿದೆ.

ನ್ಯಾಯಾಧೀಶರು ಕೋಸ್ಟಾ ಅವರ ಸಿಬ್ಬಂದಿ ಮುಖ್ಯಸ್ಥ ವಿಟರ್ ಎಸ್ಕೇರಿಯಾ, ಸೈನ್ಸ್ ಪಟ್ಟಣದ ಮೇಯರ್ ಮತ್ತು ಇತರ ಮೂವರ ವಿರುದ್ಧ ಬಂಧನ ವಾರಂಟ್‌ ಜಾರಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com