
ಟೆಲ್ ಅವೀವ್: ಗಾಜಾದಲ್ಲಿ ಹಮಾಸ್ ವಿರುದ್ಧ ಸಂಘರ್ಷಕ್ಕೆ ಇಳಿದಿರುವ ಮಾನವೀಯ ನೆಲೆಯಲ್ಲಿ ನಾಗರಿಕರಿಗೆ ಯುದ್ಧಗ್ರಸ್ತ ಪ್ರದೇಶದಿಂದ ಹೊರಹೋಗುವುದಕ್ಕೆ ಅವಕಾಶ ನೀಡಲು ಇಸ್ರೆಲ್ ನಾಲ್ಕು ಗಂಟೆಗಳ ಕಾಲ ಸೇನಾ ಕಾರ್ಯಾಚರಣೆಗಳಿಗೆ ವಿರಾಮ ನೀಡುವ ಸಾಧ್ಯತೆ ಇದೆ ಎಂದು ಅಮೇರಿಕ ಹೇಳಿತ್ತು.
ಆದರೆ ಇಸ್ರೇಲ್ ನ ಪ್ರಧಾನಿ ನೇತನ್ಯಾಹು ಅವರ ಕಚೇರಿ ಈ ಸುದ್ದಿಯನ್ನು ತಳ್ಳಿಹಾಕಿದೆ. ಅದಷ್ಟೇ ಅಲ್ಲದೇ ಅಮೇರಿಕಾ ಈ ಹೇಳಿಕೆ ನೀಡಿದ್ದ ಬೆನ್ನಲ್ಲೇ ಇಸ್ರೇಲ್ ಗಾಜಾದಲ್ಲಿರುವ ಆಸ್ಪತ್ರೆಗಳ ಮೇಲೆ ದಾಳಿಯನ್ನು ತೀವ್ರಗೊಳಿಸಿದೆ.
ವಿರಾಮ ಘೋಷಣೆ ವೇಳೆ ನಿರ್ದಿಷ್ಟ ಭಾಗಗಳಲ್ಲಿ ಸೇನಾ ಕಾರ್ಯಾಚರಣೆಗಳಿರುವುದಿಲ್ಲ. ವಿರಾಮ ಘೋಷಣೆಯ ಬಗ್ಗೆ 3 ಗಂಟೆಗಳ ಮುಂಚಿತವಾಗಿ ಸೂಚನೆ ನೀಡುವುದಕ್ಕೆ ಒಪ್ಪಿರುವುದಾಗಿ ಇಸ್ರೇಲಿ ಅಧಿಕಾರಿಗಳು ನಮಗೆ ತಿಳಿಸಿದ್ದಾರೆ ಎಂದು ಅಮೇರಿಕಾದ ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದರು.
ಒತ್ತೆಯಾಳಾಗಿರಿಸಿಕೊಂಡಿರುವ ಇಸ್ರೇಲ್ ನ ಪ್ರಜೆಗಳನ್ನು ಬಿಡುಗಡೆ ಮಾಡುವವರೆಗೂ ಕದನ ವಿರಾಮ ಘೋಷಣೆ ಮಾಡುವುದಿಲ್ಲ ಎಂದು ಐಡಿಎಫ್ ಈಗಾಗಲೇ ಸ್ಪಷ್ಟನೆ ನೀಡಿದೆ.
Advertisement