ರಿಷಿ ಸುನಕ್ ಸಂಪುಟ ಪುನರ್ ರಚನೆ: ಬ್ರಿಟನ್‌ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಈಗ ವಿದೇಶಾಂಗ ಸಚಿವ

ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ತಮ್ಮ ಸಂಪುಟವನ್ನು ಪುನರ್‌ರಚಿಸಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು, ತಮ್ಮ ತಂಡಕ್ಕೆ ಮಾಜಿ ಪ್ರಧಾನಿಯನ್ನೇ ಸೇರಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಡೇವಿಡ್ ಕ್ಯಾಮರೂನ್ - ರಿಷಿ ಸುನಕ್ - ಸುಯೆಲ್ಲಾ ಬ್ರೆವರ್‌ಮನ್
ಡೇವಿಡ್ ಕ್ಯಾಮರೂನ್ - ರಿಷಿ ಸುನಕ್ - ಸುಯೆಲ್ಲಾ ಬ್ರೆವರ್‌ಮನ್

ಲಂಡನ್: ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ತಮ್ಮ ಸಂಪುಟವನ್ನು ಪುನರ್‌ರಚಿಸಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು, ತಮ್ಮ ತಂಡಕ್ಕೆ ಮಾಜಿ ಪ್ರಧಾನಿಯನ್ನೇ ಸೇರಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ರಿಷಿ ಸುನಕ್ ಅವರು ಭಾರತೀಯ ಮೂಲದ ವಿವಾದಿತ ಆಂತರಿಕ ಸಚಿವ ಸುಯೆಲ್ಲಾ ಬ್ರೆವರ್‌ಮನ್ ಅವರನ್ನು ತಮ್ಮ ಸಂಪುಟದಿಂದ ವಜಾಗೊಳಿಸಿದ ಬೆನ್ನಲ್ಲೇ ಮಹತ್ವದ ಬದಲಾವಣೆ ಮಾಡಿದ್ದು, ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರನ್ನು ನೂತನ ವಿದೇಶಾಂಗ ಸಚಿವರಾಗಿ ನೇಮಕ ಮಾಡಿದ್ದಾರೆ. ಅಲ್ಲದೆ ಸುಯೆಲ್ಲಾ ಅವರ ಸ್ಥಾನಕ್ಕೆ ಜೇಮ್ಸ್ ಕ್ಲೆವರ್ಲಿ ಅವರನ್ನು ನೇಮಿಸಿದ್ದಾರೆ.

57 ವರ್ಷದ ಡೇವಿಡ್ ಕ್ಯಾಮರೂನ್ ಅವರು ಬ್ರೆಕ್ಸಿಟ್ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಸೋತು ಸ್ಥಾನ ತ್ಯಜಿಸುವ 2010 ರಿಂದ 2016 ರವರೆಗೆ ಬ್ರಿಟನ್‌ ಪ್ರಧಾನಿಯಾಗಿದ್ದರು.

ಬ್ರಿಟನ್ ನ ನೂತನ ವಿದೇಶಾಂಗ ಸಚಿವರಾಗಿ ನೇಮವಾದ ನಂತರ ಮಾತನಾಡಿದ ಡೇವಿಡ್ ಕ್ಯಾಮರೂನ್ ಅವರು, ನಾನು ಕೆಲವು ವೈಯಕ್ತಿಕ ನಿರ್ಧಾರಗಳೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರೂ, ರಿಷಿ ಸುನಕ್ ಒಬ್ಬ ಪ್ರಬಲ ಮತ್ತು ಸಮರ್ಥ ಪ್ರಧಾನಿ ಎಂಬುದು ನನಗೆ ಸ್ಪಷ್ಟವಾಗಿದೆ. ನಾನು ಈ ಸ್ಥಾನವನ್ನು ಸಂತೋಷದಿಂದ ಒಪ್ಪಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com