ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನದಿಂದ ಉಕ್ರೇನ್ ಗೆ 364 ಮಿಲಿಯನ್ ಡಾಲರ್ ಶಸ್ತ್ರಾಸ್ತ್ರ ಮಾರಾಟ!

ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಪಾಕಿಸ್ತಾನ ಕಳೆದ ವರ್ಷ ಉಕ್ರೇನ್ ಗೆ 364 ಮಿಲಿಯನ್ ಡಾಲರ್ ನಷ್ಟು ಮೌಲ್ಯದ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದೆ ಎಂದು ಮಾಧ್ಯಮ ವರದಿಯೊಂದರಿಂದ ತಿಳಿದುಬಂದಿದೆ.
ಪಾಕಿಸ್ತಾನ
ಪಾಕಿಸ್ತಾನ

ಇಸ್ಲಾಮಾಬಾದ್/ ಲಂಡನ್: ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಪಾಕಿಸ್ತಾನ ಕಳೆದ ವರ್ಷ ಉಕ್ರೇನ್ ಗೆ 364 ಮಿಲಿಯನ್ ಡಾಲರ್ ನಷ್ಟು ಮೌಲ್ಯದ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದೆ ಎಂದು ಮಾಧ್ಯಮ ವರದಿಯೊಂದರಿಂದ ತಿಳಿದುಬಂದಿದೆ.
 
ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್ ಗೆ ಶಸ್ತ್ರಾಸ್ತ್ರಗಳ ಪೂರೈಕೆಗಾಗಿ ಪಾಕಿಸ್ತಾನ ಅಮೇರಿಕಾದ 2 ಖಾಸಗಿ ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದಿಂದ ಪಾಕ್ ಗೆ 364 ಮಿಲಿಯನ್ ಡಾಲರ್ ಲಭಿಸಿದೆ. 

ಪಾಕಿಸ್ತಾನದ ರಾವಲ್ಪಿಂಡಿ ವಾಯುನೆಲೆ ನೂರ್ ಖಾನ್ ನಿಂದ ಸೈಪ್ರಸ್ ನಲ್ಲಿನ ಬ್ರಿಟೀಷ್ ಸೇನಾ ನೆಲೆಗೆ ಬ್ರಿಟೀಷ್ ಸೇನಾ ಸರಕು ವಿಮಾನ ಸಂಚರಿಸಿದ್ದು, ಆ ಬಳಿಕ ರೊಮೇನಿಯಾಗೆ 5 ಬಾರಿ ಸಂಚರಿಸಿದೆ ಎಂದು ಬಿಬಿಸಿ ಉರ್ದು ವರದಿ ಪ್ರಕಟಿಸಿದೆ.
 
ಇಸ್ಲಾಮಾಬಾದ್ ಉಕ್ರೇನ್ ಗೆ ಯಾವುದೇ ರೀತಿಯ ಶಸ್ತ್ರಾಸ್ತ್ರಗಳ ನೆರವು ನೀಡಿರುವುದನ್ನು ನಿರಂತರವಾಗಿ ನಿರಾಕರಿಸಿಕೊಂಡುಬಂದಿದೆ. 

ಅಮೇರಿಕಾದ ಫೆಡರಲ್ ಖರೀದಿ ಡೇಟಾ ವ್ಯವಸ್ಥೆಯ ಗುತ್ತಿಗೆ ವಿವರಗಳನ್ನು ಉಲ್ಲೇಖಿಸಿರುವ ಬಿಬಿಸಿ, ಪಾಕಿಸ್ತಾನ 155 ಎಂಎಂ ಶೆಲ್ ಗಳ ಪೂರೈಕೆಗೆ ಅಮೇರಿಕಾದ ಗ್ಲೋಬಲ್ ಮಿಲಿಟರಿ ಹಾಗೂ ನಾರ್ತ್ರೋಪ್ ಗ್ರುಮ್ಮನ್ ಎಂಬ ಸಂಸ್ಥೆಗಳೊಂದಿಗೆ ಗುತ್ತಿಗೆಗೆ ಸಹಿ ಹಾಕಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದೆ. 

ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಒದಗಿಸುವ ಈ ಒಪ್ಪಂದಗಳನ್ನು ಆಗಸ್ಟ್ 17, 2022 ರಂದು ಸಹಿ ಮಾಡಲಾಗಿದೆ ಮತ್ತು ನಿರ್ದಿಷ್ಟವಾಗಿ 155 ಎಂಎಂ ಶೆಲ್‌ಗಳ ಖರೀದಿಗೆ ಸಂಬಂಧಪಟ್ಟಿದ್ದಾಗಿದೆ ಎಂದು ವರದಿ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com