ಗಾಜಾದಲ್ಲಿ ಭಯಾನಕ ಪರಿಸ್ಥಿತಿ: 5,850 ಮಕ್ಕಳು ಸೇರಿದಂತೆ 14,800ಕ್ಕೂ ಹೆಚ್ಚು ಜನರ ಸಾವು, ಸಾಮೂಹಿಕ ಅಂತ್ಯಕ್ರಿಯೆ
ಗಾಜಾ: ಅಕ್ಟೋಬರ್ 7 ರಿಂದ ನಡೆಯುತ್ತಿರುವ ಇಸ್ರೇಲಿ ಆಕ್ರಮಣದಿಂದ ಗಾಜಾದಲ್ಲಿ ಮೃತಪಟ್ಟವರ ಸಂಖ್ಯೆ 14,854 ಕ್ಕೆ ಏರಿದೆ. ಇದರಲ್ಲಿ 5,850 ಮಕ್ಕಳು ಸೇರಿದ್ದಾರೆ ಎಂದು ಗಾಜಾಪಟ್ಟಿಯಲ್ಲಿರುವ ಹಮಾಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ. ದಾಳಿಯಲ್ಲಿ ಮೃತಪಟ್ಟವರನ್ನು ಸಾಮೂಹಿಕವಾಗಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ.
ಇಸ್ರೇಲ್‌ನ ನಡೆಯುತ್ತಿರುವ ವಾಯು ಮತ್ತು ಭೂ ದಾಳಿಯಿಂದಾಗಿ ಪ್ರಸ್ತುತ ಅಂಕಿಅಂಶಗಳನ್ನು ಪಡೆಯುವುದು ಸವಾಲಿನ ಕೆಲಸವಾಗಿದೆ. ರಮಲ್ಲಾದಲ್ಲಿರುವ ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯ ಸೋಮವಾರ 12,700, ನಿನ್ನೆ 13,000ಕ್ಕೂ ಹೆಚ್ಚು ಸಾವು ನೋವುಗಳನ್ನು ವರದಿ ಮಾಡಿತ್ತು.
ಗಾಜಾ ಪಟ್ಟಿಯ ಮೂಲಗಳಿಂದ ಡೇಟಾವನ್ನು ಸಂಗ್ರಹಿಸುತ್ತಿದೆ. ಇತ್ತೀಚಿನ ಮಾಹಿತಿಯಂತೆ ಗಾಜಾದಲ್ಲಿ ಸಂವಹನಕ್ಕೆ ಅಡ್ಡಿಯುಂಟಾಗಿದ್ದು, ನಿಖರವಾದ ಡೇಟಾ ಸಂಗ್ರಹಣೆಗೆ ತೊಂದರೆಯಾಗಿದೆ ಎಂದು ವರದಿಯು ಹೇಳಿದೆ.
ಈ ಅಂಕಿಅಂಶಗಳ ಪರ ನಿಂತಿರುವ ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿಯ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್ "ನಾವು ಈ ಅಂಕಿಅಂಶಗಳನ್ನು ಯಾವುದೇ ಆಲೋಚನೆಯಿಲ್ಲದೆ ಎಂದು ಹೇಳಿರುವುದಾಗಿ ಸಿಎನ್ ಎನ್ ವರದಿ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ