ಎಕ್ಸ್ ನಲ್ಲಿ ಯಹೂದಿ ವಿರೋಧಿ ದ್ವೇಷ ಹೆಚ್ಚಳ ಆರೋಪದ ನಡುವೆಯೇ ಇಸ್ರೇಲ್ ಪ್ರಧಾನಿಯನ್ನು ಭೇಟಿ ಮಾಡಲಿರುವ ಎಲಾನ್ ಮಸ್ಕ್

ಎಕ್ಸ್ ಸಂಸ್ಥೆಯ ಮಾಲೀಕ ಎಲಾನ್ ಮಸ್ಕ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಹಾಗೂ ಇಸ್ರೇಲಿ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರನ್ನು ಭೇಟಿ ಇಂದು ಮಾಡಲಿದ್ದಾರೆ.
ಎಲಾನ್ ಮಸ್ಕ್.
ಎಲಾನ್ ಮಸ್ಕ್.

ಟೆಲ್ ಅವಿವ್: ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಯಹೂದಿಗಳ ವಿರುದ್ಧದ ದ್ವೇಷದ ಪೋಸ್ಟ್ ಗಳು ಹೆಚ್ಚುತ್ತಿವೆ ಎಂಬ ಆರೋಪದ ನಡುವೆಯೇ ಎಕ್ಸ್ ಸಂಸ್ಥೆಯ ಮಾಲೀಕ ಎಲಾನ್ ಮಸ್ಕ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಹಾಗೂ ಇಸ್ರೇಲಿ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರನ್ನು ಭೇಟಿ ಇಂದು ಮಾಡ ಲಿದ್ದಾರೆ.

ಎಲಾನ್ ಮಸ್ಕ್ ಭೇಟಿಯನ್ನು ಇಸ್ರೇಲಿ ಮೂಲವೊಂದು ಖಚಿತ ಪಡಿಸಿರುವ ಬಗ್ಗೆ ಚಾನಲ್ 12 ಟಿವಿ ವರದಿ ಪ್ರಕಟಿಸಿದೆ. ಆದರೆ ಈ ಬಗ್ಗೆ ಕೇಳಿದ ಪ್ರಶ್ನೆಗೆ ಎಲಾನ್ ಮಸ್ಕ್ ಪ್ರತಿಕ್ರಿಯೆ ನೀಡಿಲ್ಲ. ಗಾಜಾ-ಇಸ್ರೇಲ್ ಸಂಘರ್ಷಕ್ಕೆ 4 ದಿನಗಳ ತಾತ್ಕಾಲಿಕ ಕದನ ವಿರಾಮ ಘೋಷಣೆಯಾದ ನಡುವೆಯೇ ಮಸ್ಕ್ ಇಸ್ರೇಲ್ ನ ಇಬ್ಬರು ಪ್ರಮುಖ ನಾಯಕರನ್ನು ಭೇಟಿ ಮಾಡುತ್ತಿರುವುದು ಮಹತ್ವಪಡೆದುಕೊಂಡಿದೆ.

ಇದಕ್ಕೂ ಮುನ್ನ ಸೆ.18ರಂದು ಕ್ಯಾಲಿಫೋರ್ನಿಯಾದಲ್ಲಿ ಎಲಾನ್ ಮಸ್ಕ್ ಹಾಗೂ ಇಸ್ರೇಲ್ ಪ್ರಧಾನಿ ನೇತನ್ಯಾಹು ಭೇಟಿ ಮಾಡಿದ್ದರು. ಎಕ್ಸ್ ವೇದಿಕೆಯಲ್ಲಿ  ಸೆಮಿಟಿಕ್ ವಿರೋಧಿ ವಿಷಯಗಳಿಗೆ ಹಾಗೂ ದ್ವೇಷಕ್ಕೆ ದಾರಿ ಮಾಡಿಕೊಡುವ ಕಂಟೆಂಟ್ ಗೆ ಕಡಿವಾಣ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಸಮತೋಲನ ಕಾದುಕೊಳ್ಳಬೇಕು ಎಂದು ಈ ಆವಧಿಯಲ್ಲಿ ನೇತನ್ಯಾಹು ಮಸ್ಕ್ ಗೆ ಮನವಿ ಮಾಡಿದ್ದರು.

ಈ ಮನವಿಗೆ ಸ್ಪಂದಿಸಿದ್ದ ಎಲಾನ್ ಮಸ್ಕ್, ಸೆಮಿಟಿಕ್ ವಿರೋಧಿ ಮನಸ್ಥಿತಿಗೆ ತಾವು ವಿರೋಧಿಯಾಗಿದ್ದು, ದ್ವೇಷ ಹಾಗೂ ಸಂಘರ್ಷವನ್ನು ಹುಟ್ಟುಹಾಕುವ ಯಾವುದೇ ಅಂಶಗಳನ್ನು ತಾವು ವಿರೋಧಿಸುವುದಾಗಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com