ಇಸ್ರೇಲ್ ಮೇಲಿನ ರಾಕೆಟ್ ದಾಳಿಯಲ್ಲಿ ಕೇರಳ ಮೂಲದ ಮಹಿಳೆಗೆ ಗಾಯ, ಆರೋಗ್ಯ ಸ್ಥಿರ!

ಪ್ಯಾಲೇಸ್ಟಿನ್ ಉಗ್ರಗಾಮಿ ಗುಂಪು ಹಮಾಸ್ ಉತ್ತರ ಇಸ್ರೇಲ್ ನ ಅಶ್ಕೆಲೋನ್‌ ಮೇಲೆ ರಾಕೆಟ್ ದಾಳಿ ನಡೆಸಿದ್ದು ಈ ದಾಳಿಯಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಮಾಸ್ ರಾಕೆಟ್ ದಾಳಿಯಲ್ಲಿ ಗಾಯಗೊಂಡಿರುವ ಮಹಿಳೆ
ಹಮಾಸ್ ರಾಕೆಟ್ ದಾಳಿಯಲ್ಲಿ ಗಾಯಗೊಂಡಿರುವ ಮಹಿಳೆ

ಜೆರುಸಲೇಂ: ಪ್ಯಾಲೇಸ್ಟಿನ್ ಉಗ್ರಗಾಮಿ ಗುಂಪು ಹಮಾಸ್ ಉತ್ತರ ಇಸ್ರೇಲ್ ನ ಅಶ್ಕೆಲೋನ್‌ ಮೇಲೆ ರಾಕೆಟ್ ದಾಳಿ ನಡೆಸಿದ್ದು ಈ ದಾಳಿಯಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಕೆಟ್ ದಾಳಿಯಲ್ಲಿ ಕೇರಳ ಮೂಲದ ಶೀಜಾ ಆನಂದ್ ರ ಕೈ ಮತ್ತು ಕಾಲಿಗೆ ಗಾಯಗಳಾಗಿದ್ದು, ತಕ್ಷಣ ಅವರಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು ನಂತರ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. 

ಭಾರತೀಯ ಮಿಷನ್ ಆಕೆಯನ್ನು ಸಂಪರ್ಕಿಸಿದೆ. ಇನ್ನು ಕೇರಳದ ಕಣ್ಣೂರು ಜಿಲ್ಲೆಯಲ್ಲಿರುವ ಆಕೆಯ ಕುಟುಂಬದೊಂದಿಗೂ ಸಂಪರ್ಕದಲ್ಲಿದೆ. ಅಲ್ಲಿ ಆಕೆ ಸುರಕ್ಷಿತರಾಗಿದ್ದಾರೆ ಎಂದು ಆಕೆಯ ಕುಟುಂಬಕ್ಕೆ ತಿಳಿಸಲಾಗಿದೆ ಎಂದು ರಾಯಭಾರ ಮೂಲಗಳು ತಿಳಿಸಿವೆ.

ಶನಿವಾರ ಬೆಳಿಗ್ಗೆ ಗಾಜಾ ಪಟ್ಟಿಯನ್ನು ಆಳುತ್ತಿರುವ ಹಮಾಸ್ ಉಗ್ರ ಸಂಘಟನೆ ಇಸ್ರೇಲ್ ನ ದಕ್ಷಿಣ ಭಾಗಗಳ ಮೇಲೆ ದಿಢೀರ್ ದಾಳಿ ನಡೆಸಿದೆ. ಸದ್ಯ ಪ್ಯಾಲೆಸ್ತಿನ್ ಮೇಲೆ ಇಸ್ರೇಲ್ ಯುದ್ಧ ಘೋಷಣೆ ಮಾಡಿದೆ. 

ಇಲ್ಲಿಯವರೆಗೂ ಇಸ್ರೇಲ್‌ನಲ್ಲಿ ಸೈನಿಕರು ಸೇರಿದಂತೆ ಕನಿಷ್ಠ 700 ಜನರು ಸಾವನ್ನಪ್ಪಿದ್ದು 2,100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 

ಗಾಜಾ ಪಟ್ಟಿ ಮೇಲಿನ ಇಸ್ರೇಲ್‌ನ ಪ್ರತೀಕಾರದ ದಾಳಿಯಲ್ಲಿ ಸುಮಾರು 500 ಮಂದಿ ಸಾವನ್ನಪ್ಪಿದ್ದು 2,000ಕ್ಕೂ ಹೆಚ್ಚು ಮಂದಿಗೆ ಗಾಯಗಳಿಗೆ ಎಂದು ಮಾಧ್ಯಮ ವರದಿಗಳು ಹೇಳುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com