ಗಾಜಾ ನಾಗರಿಕರ ಪ್ರವೇಶಕ್ಕೆ ಅನುಮತಿ ನಿರಾಕರಿಸಿರುವ ಇಸ್ಲಾಮಿಕ್ ದೇಶಗಳ ವಿರುದ್ಧ ನಿಕ್ಕಿ ಹಾಲೆ ಕಿಡಿ!

ಇಸ್ರೇಲ್ ಹಾಗೂ ಹಮಾಸ್ ಬಂಡುಕೋರರ ನಡುವಿನ ಯುದ್ಧದಿಂದಾಗಿ ತಮ್ಮ ಮನೆಗಳನ್ನು ತೊರೆದು ಹೋಗುತ್ತಿರುವ ಗಾಜಾದ ನಾಗರಿಕರಿಗೆ ಪ್ರವೇಶ ನಿರಾಕರಿಸಿರುವ ಇಸ್ಲಾಮಿಕ್ ರಾಷ್ಟ್ರಗಳನ್ನು ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ನಿಕ್ಕಿ ಹಾಲೆ ಟೀಕಿಸಿದ್ದಾರೆ.
ನಿಕ್ಕಿ ಹ್ಯಾಲೆ
ನಿಕ್ಕಿ ಹ್ಯಾಲೆ

ನ್ಯೂಯಾರ್ಕ್: ಇಸ್ರೇಲ್ ಹಾಗೂ ಹಮಾಸ್ ಬಂಡುಕೋರರ ನಡುವಿನ ಯುದ್ಧದಿಂದಾಗಿ ತಮ್ಮ ಮನೆಗಳನ್ನು ತೊರೆದು ಹೋಗುತ್ತಿರುವ ಗಾಜಾದ ನಾಗರಿಕರಿಗೆ ಪ್ರವೇಶ ನಿರಾಕರಿಸಿರುವ ಇಸ್ಲಾಮಿಕ್ ರಾಷ್ಟ್ರಗಳನ್ನು ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ನಿಕ್ಕಿ ಹಾಲೆ ಟೀಕಿಸಿದ್ದಾರೆ. ಇರಾನ್ ಪರಮಾಣು ಒಪ್ಪಂದದ ಬಗ್ಗೆ ಮಾಜಿ ಯುಎಸ್ ಅಧ್ಯಕ್ಷ ಬರಾಕ್ ಒಬಾಮ ಮತ್ತು ಹಾಲಿ ಅಧ್ಯಕ್ಷ ಜೋ ಬೈಡನ್ ಅವರ ವಿರುದ್ಧವೂ ಅವರು ವಾಗ್ದಾಳಿ ನಡೆಸಿದ್ದಾರೆ. 

ಸಿಎನ್ ಎನ್ ಗೆ ನೀಡಿದ ಸಂದರ್ಶದಲ್ಲಿ ಮಾತನಾಡಿದ ಭಾರತೀಯ ಮೂಲದ ನಿಕ್ಕಿ ಹಾಲೆ, "ನಾವು ಮುಗ್ದರಾದ ಪ್ಯಾಲೆಸ್ತೈನ್ ಪ್ರಜೆಗಳ ಬಗ್ಗೆ ಕಾಳಜಿ ವಹಿಸಬೇಕು, ಏಕೆಂದರೆ ಅವರಿಗೆ ಇದು ಬೇಕಿರಲಿಲ್ಲ. ಆದರೆ ಅರಬ್ ದೇಶಗಳು ಎಲ್ಲಿವೆ? ಅವರು ಎಲ್ಲಿದ್ದಾರೆ? ಕತಾರ್ ಎಲ್ಲಿ? ಲೆಬನಾನ್ ಎಲ್ಲಿದೆ? ಜೋರ್ಡಾನ್ ಎಲ್ಲಿದೆ? ಈಜಿಪ್ಟ್ ಎಲ್ಲಿದೆ? ನಾವು ಈಜಿಪ್ಟ್‌ಗೆ ವರ್ಷಕ್ಕೆ ಒಂದು ಬಿಲಿಯನ್ ಡಾಲರ್‌ಗಳನ್ನು ನೀಡುತ್ತೇವೆ ಎಂದು ನಿಮಗೆ ತಿಳಿದಿದೆಯೇ? ಅವರು ಗಾಜಾದ ನಾಗರಿಕರಿಗೆ ಏಕೆ ಪ್ರವೇಶ ನೀಡುತ್ತಿಲ್ಲ? ಎಂದು ಕಿಡಿಕಾರಿದರು. 

"ಏಕೆ ಗೊತ್ತಾ? ಏಕೆಂದರೆ ಅವರು ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿದೆ. ಹಾಗಾದರೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಪ್ರಾಮಾಣಿಕವಾಗಿರೋಣ. ಅರಬ್ ದೇಶಗಳು ಪ್ಯಾಲೆಸ್ತೈನ್ ಗೆ ಏನೂ ಸಹಾಯ ಮಾಡುತ್ತಿಲ್ಲ. ಏಕೆಂದರೆ ಅವರು ಯಾರು ಸರಿ, ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂದು ನಂಬುವುದಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com