ಇಸ್ರೇಲ್-ಹಮಾಸ್ ಯುದ್ಧ: ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆ ಅಮೆರಿಕದ 2,000 ಪಡೆಗಳು ನಿಯೋಜನೆಗೆ ಸಿದ್ಧ!

ಇಸ್ರೇಲ್-ಗಾಜಾ ಸಂಘರ್ಷವು ಹೊಸ ಕೊಲ್ಲಿ ಯುದ್ಧವಾಗಿ ಬದಲಾಗಬಹುದು ಎಂಬ ಆತಂಕದ ನಡುವೆ ಬಲಪ್ರದರ್ಶನವಾಗಿ ಮಧ್ಯಪ್ರಾಚ್ಯದಲ್ಲಿ 2,000 ಮಿಲಿಟರಿ ಸಿಬ್ಬಂದಿ ನಿಯೋಜನೆಗೆ ಅಮೆರಿಕ ಮುಂದಾಗಿದೆ.
ಪ್ಯಾಲೇಸ್ಟಿನ್ ನಿರಾಶ್ರಿತರು
ಪ್ಯಾಲೇಸ್ಟಿನ್ ನಿರಾಶ್ರಿತರು

ವಾಷಿಂಗ್ಟನ್: ಇಸ್ರೇಲ್-ಗಾಜಾ ಸಂಘರ್ಷವು ಹೊಸ ಕೊಲ್ಲಿ ಯುದ್ಧವಾಗಿ ಬದಲಾಗಬಹುದು ಎಂಬ ಆತಂಕದ ನಡುವೆ ಬಲಪ್ರದರ್ಶನವಾಗಿ ಮಧ್ಯಪ್ರಾಚ್ಯದಲ್ಲಿ 2,000 ಮಿಲಿಟರಿ ಸಿಬ್ಬಂದಿ ನಿಯೋಜನೆಗೆ ಅಮೆರಿಕ ಮುಂದಾಗಿದೆ.

ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ಅಮೆರಿಕ ಬಿಕ್ಕಟ್ಟಿಗೆ ಹೆಚ್ಚು ವೇಗವಾಗಿ ಪ್ರತಿಕ್ರಿಯಿಸಲು ಅನುವು ಮಾಡಿಕೊಡುತ್ತದೆ. ಅದಕ್ಕಾಗಿ ಮಧ್ಯಪ್ರಾಚ್ಯದಲ್ಲಿ 2000 ಅಮೆರಿಕ ಮಿಲಿಟರಿ ಸಿಬ್ಬಂದಿಯನ್ನು ನಿಯೋಜಿಸುವ ಯೋಚನೆಯಲ್ಲಿದೆ. ಆದರೆ ಸದ್ಯಕ್ಕೆ ಶ್ವೇತಭವನಕ್ಕೆ ಆ ಉದ್ದೇಶವಿಲ್ಲ ಎಂದು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ.

ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಅವರು ನಿಯೋಜನೆಗಾಗಿ ಸೇನೆಯನ್ನು ಸಿದ್ಧಪಡಿಸುವುದು 'ನಿಜವಾಗಿಯೂ ಬಿಕ್ಕಟ್ಟನ್ನು ತಡೆಗಟ್ಟುವಿಕೆಯ ಸಂಕೇತ ಕಳುಹಿಸುವುದು ಎಂದು ಹೇಳಿದ್ದಾರೆ.

ಈ ಸಂಘರ್ಷವು ಉಲ್ಬಣಗೊಳ್ಳುವುದು, ವಿಸ್ತರಿಸುವುದು ನಮಗೆ ಇಷ್ಟವಿಲ್ಲ ಎಂದು ಕಿರ್ಬಿ ಹೇಳಿದ್ದಾರೆ. ತನ್ನ ನಿಕಟ ಮಿತ್ರರಾಷ್ಟ್ರಕ್ಕೆ ವಾಷಿಂಗ್ಟನ್‌ನ ಬೆಂಬಲವನ್ನು ಒತ್ತಿಹೇಳಲು ಅಧ್ಯಕ್ಷ ಜೋ ಬಿಡನ್ ಬುಧವಾರ ಇಸ್ರೇಲ್‌ಗೆ ಬರುತ್ತಿದ್ದಾರೆ. ಆದರೆ ಗಾಜಾದಲ್ಲಿ ಉಲ್ಬಣಗೊಳ್ಳುತ್ತಿರುವ ಯುದ್ಧವು ಕೊಲ್ಲಿ ಯುದ್ಧವಾಗಿ ಬದಲಾಗುವುದನ್ನು ತಡೆಯಲು ಬಿಡೆನ್ ಆಶಿಸಿದ್ದಾರೆ.

ಹಮಾಸ್ ಉಗ್ರರು ಅಕ್ಟೋಬರ್ 7ರಂದು ಗಾಜಾ ಗಡಿಯನ್ನು ಭೇದಿಸಿ ಒಳನುಗ್ಗಿ ಸಿಕ್ಕಸಿಕ್ಕವರ ಮೇಲೆ ಗುಂಡಿನ ದಾಳಿ ನಡೆಸಿದ್ದರು ಪರಿಣಾಮ ಇಸ್ರೇಲ್ ನಲ್ಲಿ ಇಲ್ಲಿಯವರೆಗೂ 1,400ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇದೇ ಅಲ್ಲದೆ ಹಮಾಸ್ ಉಗ್ರರು 250ಕ್ಕೂ ಹೆಚ್ಚು ಜನರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದೆ. ಉಗ್ರರ ಕುಕೃತ್ಯದ ನಂತರ ಇಸ್ರೇಲ್ ಹಮಾಸ್ ಮೇಲೆ ಯುದ್ಧ ಘೋಷಿಸಿತ್ತು.

ಇನ್ನು ಇಸ್ರೇಲ್ ವಾಯುದಾಳಿಯಲ್ಲಿ ಗಾಜಾದಲ್ಲಿ 2,700ಕ್ಕೂ ಹೆಚ್ಚು ಜನರನ್ನು ಮೃತಪಟ್ಟಿದ್ದು 9 ಸಾವಿರಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com