ಗಾಜಾ ಆಸ್ಪತ್ರೆ ಮೇಲೆ ದಾಳಿ ಹಿನ್ನೆಲೆ: ಅರಬ್ ನಾಯಕರೊಂದಿಗಿನ ಬೈಡನ್ ಸಭೆ ರದ್ದು
ಟೆಲ್‍ಅವಿವ್: ಗಾಜಾ ಆಸ್ಪತ್ರೆ ಮೇಲಿನ ಭೀಕರ ದಾಳಿ ಬಳಿಕ ಇಸ್ರೇಲ್ ರಕ್ಷಣೆಯನ್ನು ಬೆಂಬಲಿಸಲು ಅಮೆರಿಕ ನೇತೃತ್ವದ ರಾಜತಾಂತ್ರಿಕ ಪ್ರಯತ್ನಗಳು ಹಳಿತಪ್ಪಿದೆ. ಈ ಹಿನ್ನೆಲೆಯಲ್ಲಿ ಅರಬ್ ನಾಯಕರ ಜೊತೆಗಿನ ಬೈಡೆನ್ ಮೀಟಿಂಗ್ ರದ್ದುಗೊಳಿಸಲಾಗಿದೆ.
ಗಾಜಾ ಆಸ್ಪತ್ರೆಯಲ್ಲಿ ಭೀಕರ ಸ್ಫೋಟ ಪ್ರಕರಣದಿಂದ 500 ಮಂದಿಯ ಸಾವನ್ನಪ್ಪಿದ್ದಾರೆ. ಹೀಗಾಗಿ ಇಸ್ರೇಲ್‍ಗೆ ಬೆಂಬಲ ಸೂಚಿಸುವ ಅಮೆರಿಕ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ. ಇಸ್ರೇಲ್‌ಗೆ ಬೆಂಬಲ ನೀಡುವ ಮೂಲಕ ಒಗ್ಗಟ್ಟಿನ ಭೇಟಿಗಾಗಿ ಬಿಡೆನ್ ಇಂದು ಇಸ್ರೇಲ್‌ಗೆ ಆಗಮಿಸಲಿದ್ದಾರೆ. ಆದರೆ ಅಮ್ಮಾನ್ ನಲ್ಲಿ ನಡೆಯಬೇಕಿದ್ದ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮತ್ತು ಅರಬ್ ಮುಖಂಡರ ಸಭೆ ಕೂಡ ರದ್ದಾಗಿದೆ.
ಜೋರ್ಡಾನ್‌ನ ವಿದೇಶಾಂಗ ಸಚಿವ ಅಬ್ದುಲ್ಲಾ ಅವರು, ಈಜಿಪ್ಟ್‌ನ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸ್ಸಿ ಮತ್ತು ಪ್ಯಾಲೆಸ್ಟೀನ್ ಪ್ರಾಧಿಕಾರದ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ಬೈಡ್‌ನ್ ನಡೆಸಬೇಕಿದ್ದ ಶೃಂಗಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ಘೋಷಿಸಿದ್ದಾರೆ.
ಹಮಾಸ್ ಹಾಗೂ ಇಸ್ರೇಲ್ ನಡುವಿನ ಕಾಳಗಕ್ಕೆ ಇಂದು 12ನೇ ದಿನ. ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಆರಂಭಿಸಿದ್ದಾರೆ. ಈ ದಾಳಿಯಲ್ಲಿ 1300 ಮಂದಿ ಮೃತಪಟ್ಟಿದ್ದಾರೆ. ಇಸ್ರೇಲಿನ 250 ಮಂದಿಯನ್ನು ಹಮಾಸ್ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರೆ, ಹಮಾಸ್ ನ 200 ಮಂದಿ ಇಸ್ರೇಲ್ ಸೆರೆಯಲ್ಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ