ಟೆಲ್ ಅವಿವ್ ನಲ್ಲಿ ಗಾಜಾ, ವೆಸ್ಟ್ ಬ್ಯಾಂಕ್ ಗೆ 100 ಮಿಲಿಯನ್ ಡಾಲರ್ ನೆರವು ಘೋಷಿಸಿದ ಬೈಡನ್!
ಟೆಲ್ ಅವಿವ್: ಯುದ್ಧಗ್ರಸ್ತ ಇಸ್ರೇಲ್ ಗೆ ಭೇಟಿ ನೀಡಿದ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ತಾವು ಇಲ್ಲಿನ ಸಮಸ್ಯೆಗೆ ದ್ವಿ ರಾಷ್ಟ್ರ ಪರಿಹಾರಕ್ಕೆ ಬೆಂಬಲ ಸೂಚಿಸುವುದಾಗಿ ಹೇಳಿದ್ದಾರೆ.
ದ್ವಿರಾಷ್ಟ್ರ ಸೂತ್ರದಿಂದ ಪ್ಯಾಲೆಸ್ತೇನ್ ಹಾಗೂ ಇಸ್ರೇಲ್ ನ ನಾಗರಿಕರು ಸುರಕ್ಷಿತ ಹಾಗೂ ಶಾಂತಿಯುತವಾಗಿ ಜೀವಿಸಬಹುದು ಎಂದು ಬೈಡನ್ ಹೇಳಿದ್ದು ಮನಾವೀಯ ಆಧಾರದಲ್ಲಿ ಗಾಜಾ ಹಾಗೂ ವೆಸ್ಟ್ ಬ್ಯಾಂಕ್ ಗಳಿಗೆ 100 ಮಿಲಿಯನ್ ಡಾಲರ್ ನೆರವು ಘೋಷಿಸಿದ್ದಾರೆ.
ಹಮಾಸ್ ನೇತೃತ್ವದ ಪ್ಯಾಲೇಸ್ಟಿನಿಯನ್ ಬಣಗಳೊಂದಿಗೆ ನಡೆಯುತ್ತಿರುವ ಸಂಘರ್ಷದ ಮಧ್ಯೆ ಇಸ್ರೇಲ್‌ಗೆ ಬೆಂಬಲ ವ್ಯಕ್ತಪಡಿಸಲು ಭೇಟಿ ನೀಡಿದ್ದ ಬೈಡನ್, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗಿನ ಸಭೆಯ ನಂತರ ಈ ಘೋಷಣೆ ಮಾಡಿದ್ದಾರೆ.
ಯುಎಸ್ ಮತ್ತು ಇಸ್ರೇಲ್‌ನಂತಹ "ಆತ್ಮಸಾಕ್ಷಿ ಹೊಂದಿರುವ ರಾಷ್ಟ್ರಗಳನ್ನು" ಕೇವಲ ಅಧಿಕಾರದ ಉದಾಹರಣೆಯಿಂದ ಅಳೆಯಲಾಗುವುದಿಲ್ಲ ಎಂದು ಅವರು ಹೇಳಿದರು. "ನಮ್ಮ ನಿದರ್ಶನದ ಶಕ್ತಿಯಿಂದ ನಮ್ಮನ್ನು ಅಳೆಯಲಾಗುತ್ತದೆ ಮತ್ತು ಅದಕ್ಕಾಗಿಯೇ ಕಠಿಣವಾಗಿ ನಾವು ಶಾಂತಿಯನ್ನು ಮುಂದುವರಿಸಬೇಕು" ಎಂದು ಬೈಡನ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ