ಇಸ್ರೇಲ್ ಮೇಲೆ ದಾಳಿ: 10 ಹಮಾಸ್ ಸದಸ್ಯರು ಮತ್ತು ಹಣಕಾಸು ಜಾಲದ ವಿರುದ್ಧ ನಿರ್ಬಂಧ ವಿಧಿಸಿದ ಅಮೆರಿಕ!

ಇಸ್ರೇಲ್-ಹಮಾಸ್ ನಡುವಿನ ಸಂಘರ್ಷ ನಡುವೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಇಸ್ರೇಲ್ ಗೆ ಭೇಟಿ ನೀಡಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಚರ್ಚಿಸಿದ್ದಾರೆ.
ಜೋ ಬೈಡನ್
ಜೋ ಬೈಡನ್

ಟೆಲ್ ಅವೀವ್: ಇಸ್ರೇಲ್-ಹಮಾಸ್ ನಡುವಿನ ಸಂಘರ್ಷ ನಡುವೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಇಸ್ರೇಲ್ ಗೆ ಭೇಟಿ ನೀಡಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಚರ್ಚಿಸಿದ್ದಾರೆ. 

ಇಸ್ರೇಲ್ ಮೇಲೆ ಹಠಾತ್ ದಾಳಿ ಮಾಡಿ ವಿದೇಶಿಗರು ಸೇರಿದಂತೆ 1,400ಕ್ಕೂ ಹೆಚ್ಚು ಇಸ್ರೇಲಿಗರನ್ನು ಹತ್ಯೆ ಮಾಡಿ ನೂರಾರು ಜನರು ಅಪಹರಿಸಿರುವುದಕ್ಕೆ 10 ಹಮಾಸ್ ಸದಸ್ಯರ ಗುಂಪು ಮತ್ತು ಗಾಜಾ, ಸುಡಾನ್, ಟರ್ಕಿ, ಅಲ್ಜೀರಿಯಾ ಮತ್ತು ಕತಾರ್‌ನಾದ್ಯಂತ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಸಂಘಟನೆಯ ಹಣಕಾಸು ಜಾಲದ ವಿರುದ್ಧ ಅಮೆರಿಕವು ನಿರ್ಬಂಧಗಳನ್ನು ಘೋಷಿಸಿದೆ.

ಇದಕ್ಕೂ ಮೊದಲು, ಹಮಾಸ್ ಆಸ್ಪತ್ರೆಯ ಮೇಲಿನ ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಜೋ ಬಿಡೆನ್ ಅವರು ಗಾಜಾ ಆಸ್ಪತ್ರೆಯಲ್ಲಿ ಮಾರಣಾಂತಿಕ ಸ್ಫೋಟವನ್ನು ಮತ್ತೊಂದು ತಂಡವು ನಡೆಸಿದೆ ಎಂದು ತೋರುತ್ತದೆ. ಈ ದಾಳಿಯಲ್ಲಿ ಇಸ್ರೇಲ್ ಸೇನೆಯ ಕೈವಾಡವಿಲ್ಲ. ಸ್ಫೋಟಕ್ಕೆ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಇಸ್ಲಾಮಿಕ್ ಜಿಹಾದ್ ಅನ್ನು ದೂಷಿಸುವ ಇಸ್ರೇಲ್ ನಿಲುವನ್ನು ಅವರು ಒಪ್ಪಿಕೊಂಡರು. ಟೆಲ್ ಅವೀವ್ ತಲುಪಿದ ಕೂಡಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗಿನ ಸಭೆಯಲ್ಲಿ ಬಿಡೆನ್ ಈ ವಿಷಯ ತಿಳಿಸಿದರು. ಹಮಾಸ್ ಜೊತೆ ನಡೆಯುತ್ತಿರುವ ಸಂಘರ್ಷದ ನಡುವೆ ಒಗ್ಗಟ್ಟು ಪ್ರದರ್ಶಿಸಲು ಬಿಡೆನ್ ಇಸ್ರೇಲ್ ತಲುಪಿದ್ದಾರೆ.

ಮಕ್ಕಳು ಸೇರಿದಂತೆ ಇಸ್ರೇಲಿ ನಾಗರಿಕರ ವಿರುದ್ಧ ಕ್ರೂರ ಮತ್ತು ಅವಿವೇಕದ ಹತ್ಯಾಕಾಂಡದ ನಂತರ ಹಮಾಸ್‌ನ ಹಣಕಾಸು ಮೂಲಗಳು ಮತ್ತು ನೆರವು ನೀಡುವವರನ್ನು ಗುರಿಯಾಗಿಸಲು ಅಮೆರಿಕ ತ್ವರಿತ ಮತ್ತು ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳುತ್ತಿದೆ ಎಂದು ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಹೇಳಿದರು.

ಇಸ್ರೇಲ್ ಹಮಾಸ್ ಯುದ್ಧ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಭಯೋತ್ಪಾದಕ ಸಂಘಟನೆ ಹಮಾಸ್ ನಡುವಿನ ಯುದ್ಧದ ಸಂದರ್ಭದಲ್ಲಿ, ವಿಶ್ವದ ಇಸ್ಲಾಮಿಕ್ ಸಂಘಟನೆಗಳು ಇಸ್ರೇಲ್ ಅನ್ನು ನಿಷೇಧಿಸುವಂತೆ ಒತ್ತಾಯಿಸುತ್ತಿವೆ. ಇಸ್ರೇಲ್ ಮೇಲೆ ಸಂಪೂರ್ಣ ನಿಷೇಧ ಹೇರುವಂತೆ ಮುಸ್ಲಿಂ ರಾಷ್ಟ್ರಗಳ ಸಂಘಟನೆಯಾದ ಒಐಸಿ ಸಭೆಯಲ್ಲಿ ಇರಾನ್ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿದೆ. 

ಸಂಘಟನೆಯ ಎಲ್ಲಾ ಸದಸ್ಯ ರಾಷ್ಟ್ರಗಳು ಇಸ್ರೇಲ್‌ನೊಂದಿಗೆ ತೈಲ ಸೇರಿದಂತೆ ಇತರ ಎಲ್ಲಾ ರೀತಿಯ ವ್ಯಾಪಾರವನ್ನು ನಿಲ್ಲಿಸಬೇಕು ಎಂದು ಇರಾನ್ ಒತ್ತಾಯಿಸಿದೆ. ಇಸ್ರೇಲ್ ರಾಯಭಾರಿಯನ್ನು ವಜಾಗೊಳಿಸಬೇಕೆಂಬ ಆಗ್ರಹವಿದೆ. ಹಮಾಸ್ ಭಯೋತ್ಪಾದಕರು ಅಕ್ಟೋಬರ್ 7 ರಂದು ಇಸ್ರೇಲ್ ಗಡಿಯನ್ನು ಪ್ರವೇಶಿಸಿ ಭಾರಿ ವಿನಾಶವನ್ನು ಉಂಟುಮಾಡಿದರು, ನಂತರ ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ದಾಳಿ ಮಾಡಿತು ಎಂಬುದು ಗಮನಾರ್ಹ. ಇಸ್ರೇಲ್ ನಿರಂತರವಾಗಿ ರಾಕೆಟ್ ಮತ್ತು ವೈಮಾನಿಕ ದಾಳಿಗಳನ್ನು ನಡೆಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com