ಪತ್ರಕರ್ತ ಪತಿಯಿಂದ ಬೇರ್ಪಟ್ಟ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಶುಕ್ರವಾರ ತಮ್ಮ ಪತ್ರಕರ್ತ ಪತಿ ಆಂಡ್ರಿಯಾ ಗಿಯಾಂಬ್ರುನೊ ಅವರಿಂದ ತಾವು ಬೇರ್ಪಟ್ಟಿರುವುದಾಗಿ ಹೇಳಿದ್ದಾರೆ.
ಜಾರ್ಜಿಯಾ ಮೆಲೋನಿ - ಪ್ರಧಾನಿ ಮೋದಿ
ಜಾರ್ಜಿಯಾ ಮೆಲೋನಿ - ಪ್ರಧಾನಿ ಮೋದಿ
Updated on

ರೋಮ್: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಶುಕ್ರವಾರ ತಮ್ಮ ಪತ್ರಕರ್ತ ಪತಿ ಆಂಡ್ರಿಯಾ ಗಿಯಾಂಬ್ರುನೊ ಅವರಿಂದ ತಾವು ಬೇರ್ಪಟ್ಟಿರುವುದಾಗಿ ಹೇಳಿದ್ದಾರೆ.

"ಆಂಡ್ರಿಯಾ ಗಿಯಾಂಬ್ರುನೋ ಅವರೊಂದಿಗಿನ ನನ್ನ 10 ವರ್ಷಗಳ ಸಂಬಂಧವು ಇಲ್ಲಿಗೆ ಕೊನೆಗೊಳ್ಳುತ್ತದೆ" ಎಂದು ಇಟಲಿ ಪ್ರಧಾನಿ ಮೆಲೋನಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಮ್ಮ ದಾರಿಗಳು ಕೆಲವೊಮ್ಮೆ ಬೇರೆ ಬೇರೆಯಾಗಿವೆ ಮತ್ತು ಅದನ್ನು ಒಪ್ಪಿಕೊಳ್ಳುವ ಸಮಯ ಈಗ ಬಂದಿದೆ ಎಂದು 46 ವರ್ಷದ ಇಟಾಲಿಯನ್ ಪ್ರಧಾನಿ ತಿಳಿಸಿದ್ದಾರೆ.

ಜಿಯಾಂಬ್ರುನೋ ಮತ್ತು ಜಾರ್ಜಿಯಾ ಮೆಲೋನಿ ಅವರು ಮದುವೆಯಾಗಿಲ್ಲ. ಆದರೆ ದೀರ್ಘಾವಧಿಯಿಂದ ಪಾರ್ಟನರ್ ಆಗಿದ್ದರು. ಅವರಿಗೆ ಏಳು ವರ್ಷದ ಮಗಳಿದ್ದಾರೆ.

"ನಾವು ಒಟ್ಟಿಗೆ ಕಳೆದ ಅದ್ಭುತ ವರ್ಷಗಳಿಗಾಗಿ, ನಾವು ಅನುಭವಿಸಿದ ಕಷ್ಟಗಳಿಗಾಗಿ ಮತ್ತು ನನ್ನ ಜೀವನದಲ್ಲಿ ನನಗೆ ಅತ್ಯಂತ ಮುಖ್ಯವಾದ ವಿಷಯ, ಅದು ನಮ್ಮ ಮಗಳು ಗಿನೆವ್ರಾಳನ್ನು ನೀಡಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ" ಎಂದು ಇಟಲಿ ಪ್ರಧಾನಿ ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com